ಮಗಳ ಪರಿಸ್ಥಿತಿಯನ್ನು ನೆನೆದು ಭಾವುಕರಾದ ಪಡುವಾರ ಹಳ್ಳಿ ಬೈರಪ್ಪ. ಮಗಳಿಗೆ ತುಂಬಾನೇ ಹಿಂಸೆ ಕೊಟ್ಟಿದ್ದಾರೆ.....
ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ಡಿವೊರ್ಸ್ ಪಡೆಯಲು ಮುಂದಾಗಿದ್ದಾರೆ. ಮಾನಸಿಕ ಕಿರುಕುಳ ಆರೋಪ ಮಾಡಿರುವ ಯುವ ವಿಚ್ಛೇದನ ಬೇಕು ಎಂದು ಮೊದಲ ಹೆಜ್ಜೆ ಇಟ್ಟಿದ್ದಾರೆ. ಯುವ ಕಳುಹಿಸಿರುವ ನೋಟಿಸ್‌ಗೆ ಶ್ರೀದೇವಿ ಬೈರಪ್ಪ ಉತ್ತರ ಕೊಟ್ಟಿದ್ದಾರೆ. ಈ ನೋಟಿಸ್‌ನಲ್ಲಿ ಹೆಸರಾಂತ ನಟಿಯ ಹೆಸರನ್ನು ಬರೆದಿದ್ದಾರೆ. ಮೂರನೇ ವ್ಯಕ್ತಿಯಿಂದ ಶುರುವಾಗಿರುವ ಈ ಸಮಸ್ಯೆ ಬಗ್ಗೆ ಶ್ರೀದೇವಿ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
'ಶ್ರೀದೇವಿ MBA ಮಾಡಿದ್ದಾಳೆ ಮುಂದೆ ಓದಬೇಕು ಎಂದು ಅವರೇ (ಯುವ ಕುಟುಂಬದವರು) ಕಳುಹಿಸಿದ್ದಾರೆ. ಖರ್ಚು ಗಿರ್ಚು ಏನೂ ಇಲ್ಲ ಆಕೆಗೆ STIP ಸಿಕ್ಕದೆ ಅದರಲ್ಲೇ ಓದಿಕೊಂಡು ಬರುತ್ತಾಳೆ ಹಾಗೆ ಹೀಗೆ ಅಂತ ನನಗೆ ಬಲವಂತೆ ಮಾಡಿದರು ನಾನು ಬೇಡ ಎಂದಿದ್ದೆ ಆದರೂ ಕಳುಹಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಪ್ರತಿಯೊಬ್ಬರಿಗೂ ಈ ವಿಚಾರ ಗೊತ್ತಿದೆ. ಯುವ ಮತ್ತು ಶ್ರೀದೇವಿ ಪ್ರೀತಿಸಿ ಮದುವೆ ಆಗಿರುವುದು, ಮದುವೆಗೆ ನಾನು ಬೇಡ ಎಂದಿದ್ದೆ ಆದರೆ ಆಕೆ ಮನಸ್ಸು ಸೋತಿರುವ ಕಾರಣ ನಾವು ಒಪ್ಪಿಕೊಂಡೆವು. ಅವರಿಬ್ಬರು ಚೆನ್ನಾಗಿದ್ದರು ನಮ್ಮ ಮನೆ ಬಂದು ಹೋಗುವುದು ಮಾಡುತ್ತಿದ್ದರು. ಬಲವಂತವಾಗಿ ಶ್ರೀದೇವಿನೇ ಮದುವೆ ಮಾಡಿಕೊಳ್ಳಬೇಕು ಎಂದು ಪಟ್ಟು ಹಿಡಿದರು ಆದರೆ ಸಮಸ್ಯೆ ಶುರುವಾಗಿದ್ದು ಆಕೆ ಯುಎಸ್‌ಗೆ ಹೋದ ಮೇಲೆ' ಎಂದು ಖಾಸಗಿ ಮಾಧ್ಯಮಗಳಲ್ಲಿ ಶ್ರೀದೇವಿ ತಂದೆ ಬೈರಪ್ಪ ಮಾತನಾಡಿದ್ದಾರೆ.
'ಮದುವೆಗೂ ಮುನ್ನ ಡಾ.ರಾಜ್‌ಕುಮಾರ್ ಅಕಾಡಮಿ ಮಾಡಿರುವುದು ನನ್ನ ಮಗಳು ಚೆನ್ನಾಗಿ ನಡೆಯುತ್ತಿತ್ತು, ಆದರೆ ಮಗಳನ್ನು ಕಳುಹಿಸಿ ಈ ರೀತಿ ಸಮಸ್ಯೆ ಶುರುವಾಗಲು ಅವರೇ ಕಾರಣ. ವಿದ್ಯಾಭ್ಯಾದ ಕ್ಷೇತ್ರದಲ್ಲಿ ಇರುವ ಕಾರಣ ಮುಂದೆ ಓದಬೇಕು ಎಂದು ದೊಡ್ಡವರು ಹೇಳಿದ ಕಾರಣ ಮಗಳು ಹೋಗಿದ್ದಾಳೆ. ಕಳೆದ ಡಿಸಂಬರ್‌ಗೆ ಯುವ ಮನೆ ಬಂದರು ಅಂದ್ರೆ ನೋಟಿಸ್ ಕೊಡುವ ಮೊದಲು. ಡಿಸೆಂಬರ್ ಕೊನೆ ಅಥವಾ ಜನವರಿ ಆರಂಭದಲ್ಲಿ ಡಿವೋರ್ಸ್ ಬೇಕು ಎಂದು ನೋಟಿಸ್ ಕಳುಹಿಸಿದ್ದರು. ಅಂದು ಸುಮ್ಮನೆ ಬಂದ್ರು ಹಾಗೆ ಹೋಗ್ತೀನಿ ಅಂದ್ರು ಅಷ್ಟೆ ಇದರ ಬಗ್ಗೆ ನನ್ನ ಜೊತೆ ಏನೂ ಮಾತನಾಡಿಲ್ಲ' ಎಂದು ಬೈರಪ್ಪ ಅವರು ಹೇಳಿದ್ದಾರೆ.
ಡಿವೋರ್ಸ್‌ಗೆ ನನಗೆ ಒಪ್ಪಿಗೆ ಇಲ್ಲ ಆದರೆ ಕಾನೂನು ಪ್ರಕಾರ ಏನು ನಡೆಯಲಿದೆ ಎಂದು ಕಾದು ನೋಡಬೇಕು. ರಾಜ್‌ಕುಮಾರ್ ಕುಟುಂಬಸ್ಥರು ಯಾರೂ ಬಂದು ಮಾತನಾಡಿಲ್ಲ, ಶಿವಣ್ಣ ಅವರ ಜೊತೆ ಮಾತನಾಡಬೇಕು ಅಂದುಕೊಂಡೆ ಆದರೆ ಆಗಲಿಲ್ಲ. ರಾಘವೇಂದ್ರ ರಾಜ್‌ಕುಮಾರ್ ಕೂಡ ಏನೂ ಮಾತನಾಡಿಲ್ಲ ಆದರೆ ಅವರು ಬಂದ್ರೆ ಮಾತನಾಡಬಹುದಿತ್ತು. ನನ್ನ ಜೊತೆ ಮಗಳು ಎನೂ ಹಂಚಿಕೊಂಡಿಲ್ಲ ಆದರೆ ಎಷ್ಟು ಹಿಂಸೆ ಕೊಟ್ಟಿದ್ದಾರೆ ಎಂದು ಆಕೆಗೆ ಮಾತ್ರ ಗೊತ್ತು. ತಂದೆ ನೋವು ಮಾಡಿಕೊಳ್ಳುತ್ತಾಳೆ ಎಂದು ಹೇಳಲಿಲ್ಲ ಸಮಸ್ಯೆ ಶುರುವಾದ ಮೇಲೆ ಕೇಳಿದ್ದಕ್ಕೆ ಸ್ವಲ್ಪ ಹೇಳಿದರು ಮತ್ತೆ ಅಳುವುದಕ್ಕೆ ಶುರು ಮಾಡುತ್ತಾಳೆ ಎಂದು ನಾವು ಏನೂ ಕೇಳಲಿಲ್ಲ. ಈಗ ನಾನು ಖುಷಿಯಾಗಿದ್ದೀನಿ ಎಂದು ಹೇಳುತ್ತಿದ್ದಾಳೆ ಮಗಳು ಎಂದಿದ್ದಾರೆ ಬೈರಪ್ಪ.