ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾ ಬಘೀರ. ಪ್ರಶಾಂತ್ ನೀಲ್ ಕಥೆ, ಡಾ.ಸೂರಿ ನಿರ್ದೇಶನ, ಅಜನೀಶ್ ಲೋಕನಾಥ್ ಮ್ಯೂಸಿಕ್ನಲ್ಲಿ ಮಾಸ್ ಸಾಂಗ್.
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ರಿಲೀಸ್ಗೆ ಎರಡು ವಾರ ಬಾಕಿ. ಅರೇ ರಿಲೀಸ್ ಇಷ್ಟು ಹತ್ತಿರದಲ್ಲಿದ್ದರು ಇನ್ನೂ ಪಬ್ಲಿಸಿಟಿ ಇಲ್ಲವಲ್ಲಾ ಅಂತ ಫ್ಯಾನ್ಸ್ ಮಾತನಾಡ್ತಿರೋ ಹೊತ್ತಲ್ಲೇ, ಬಘೀರ ತನ್ನ ಸಾಂಗ್ ಮೂಲ ಭರ್ಜರಿ ಸೌಂಡ್ ಮಾಡಿದ್ದಾನೆ. ಬಘೀರನ ರುಧಿರ ಧಾರಾ ಅನ್ನೋ ಮಾಸ್ ಸಾಂಗ್ ರಿಲೀಸ್ ಆಗಿದ್ದು, ಟ್ರೆಂಡ್ ಸೃಷ್ಟಿಸ್ತಾ ಇದೆ.
ಯೆಸ್! ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದೆ. ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಿಸಿರೋ ಈ ಸಿನಿಮಾ ಮೇಲೆ ಪ್ರೇಕ್ಷಕರಿಗೆ ದೊಡ್ಡ ನಿರೀಕ್ಷೆ ಇದೆ. ಮೂರು ವರ್ಷಗಳ ಬಳಿಕ ಬರ್ತಾ ಇರೋ ಶ್ರೀಮುರಳಿ ನಟನೆಯ ಸಿನಿಮಾ ಇದು. ಸಹಜವಾಗೇ ಶ್ರೀಮುರುಳಿ ಫ್ಯಾನ್ಸ್ಗೆ ಚಿತ್ರದ ಬಗ್ಗೆ ದೊಡ್ಡ ಹೋಪ್ ಇದೆ. ಆದ್ರೆ ರಿಲೀಸ್ ಇಷ್ಟು ಹತ್ತಿರ ಬಂದ್ರೂ ಇನ್ನೂ ಪ್ರಚಾರ ಮಾಡ್ತಿಲ್ಲವಲ್ಲ ಅಂತ ಫ್ಯಾನ್ಸ್ ಬೇಸರಗೊಂಡಿದ್ದರು. ಅವರ ಬೇಸರ ತಣಿಸುವಂತೆ ,ಮೂಡಿಬಂದಿದೆ ಬಘೀರ ಮೊದಲ ಸಾಂಗ್.
undefined
ಹಳೇ ಸಿನಿಮಾ ರೀ- ರಿಲೀಸ್ ಬಿಟ್ರೆ ಬೇರೆ ಗತಿಯಿಲ್ಲ; ದರ್ಶನ್ 'ನಮ್ಮ ಪ್ರೀತಿಯ ರಾಮು' ಮರುಬಿಡುಗಡೆ!
ಬಘೀರ ಸಿನಿಮಾಗೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಶ್ರೀಮುರಳಿ ಪಾತ್ರದ ಝಲಕ್‌ನ ಬಿಚ್ಚಿಟ್ಟಿರುವ ಈ ಹಾಡು ಫ್ಯಾನ್ಸ್ಗೆ ಕಿಕ್ ಕೊಡ್ತಾ ಇದೆ. ರುಧಿರ ಧಾರಾ ಹಾಡಿಗೆ ಅನಿರುದ್ಧ್ ಶಾಸ್ತ್ರಿ ಧ್ವನಿಯಾಗಿದ್ದು ಹಾಡು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಆಗಿದೆ. ಬಘೀರ ಮೊದಲ ಸಾಂಗ್ ನೋಡಿದವರು ಇದರಲ್ಲಿ ಅದ್ಭುತ ಕಂಟೆಂಟ್ ಇರುವಂತಿದೆ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಅದರಲ್ಲೂ ಈ ಸಿನಿಮಾಗೆ ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್ ಕಥೆಯನ್ನ ರೆಡಿ ಮಾಡಿಕೊಟ್ಟಿದ್ದಾರೆ. ನೀಲ್ ಹೆಣೆದಿರೋ ಉಗ್ರ ವೀರಾವೇಷದ ಕಥೆಗೆ ಡಾ.ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. ಬಘೀರಗೆ ಸಿನಿಮಾಗಾಗಿ ಮೂರು ವರ್ಷಗಳ ಸಮಯ ಕೊಟ್ಟಿರೋ ಶ್ರೀಮುರಳಿ, ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಲ್ಲಿ ಖಾಕಿಧಾರಿಯ ಪಾತ್ರದಲ್ಲಿ ಶ್ರೀಮುರುಳಿ ಮಿಂಚಿದ್ದು ಭರ್ಜರಿ ಌಕ್ಷನ್ ಡ್ರಾಮಾದೊಂದಿಗೆ ಫ್ಯಾನ್ಸ್ ಮುಂದೆ ಬರ್ತಾ ಇದ್ದಾರೆ.
ಇಷ್ಟ ಬಂದಿದ್ದು ತರ್ಸ್ಕೊಂಡು ತಿನ್ಬೋದಿತ್ತು, ದೇವತೆ ರೀತಿ ಇದ್ದೆ; ತಂದೆ ನೆನೆದು ಕಣ್ಣೀರಿಟ್ಟ ನಟಿ
ಇದೇ ಅಕ್ಟೋಬರ್ 31ಕ್ಕೆ ಬಘೀರ ಪ್ರೇಕ್ಷಕರ ಎದುರು ಬರಲಿದೆ. ಸದ್ಯ ಸಾಂಗ್ ಮೂಲಕ ಸೌಂಡ್ ಶುರುಮಾಡಿರೋ ಬಘೀರ , ಥಿಯೇಟರ್ ಅಂಗಳದಲ್ಲಿ ಘರ್ಜಿಸೋ ತಯಾರಿಯಲ್ಲಿದ್ದಾನೆ. ಬಘೀರನ ಅಬ್ಬರ ಕಾಣೋದಕ್ಕೆ ನೀವು ಕೂಡ ಸಜ್ಜಾಗಿ.