ಜೈಲಿನಿಂದ ದರ್ಶನ್ ರಿಲೀಸ್ ಯಾವಾಗ ಗೊತ್ತಿಲ್ಲ? ಅಭಿಮಾನಿಗಳ ಒತ್ತಾಯಕ್ಕೆ ಹಳೆ ಸಿನಿಮಾಗಳು ರೀ-ರಿಲೀಸ್.
ದರ್ಶನ್ ಜೈಲುಪಾಲಾದ ಮೇಲೆ ಅವರ ಹಳೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರೀ ರಿಲೀಸ್ ಕಾಣುತ್ತಿದೆ. ಬಹುಶಃ ದರ್ಶನ್ ಜೈಲಿನಿಂದ ರಿಲೀಸ್ ಆಗೋವರೆಗೂ ಈ ರೀ -ರಿಲೀಸ್ ಪರ್ವ ಮುಂದುವರೆಯಲಿದೆ. ಸದ್ಯ ದರ್ಶನ್ ಹೈಕೋರ್ಟ್ಗೆ ಬೇಲ್ ಅರ್ಜಿ ಸಲ್ಲಿಸಿರೋ ಹೊತ್ತಲ್ಲೇ ಮತ್ತೊಂದು ಸಿನಿಮಾ ರೀ-ರಿಲೀಸ್ಗೆ ಸಜ್ಜಾಗಿದೆ.
ಯೆಸ್! ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಜೈಲು ಸೇರಿರೋ ದರ್ಶನ್ ಅದ್ಯಾವಾಗ ರಿಲೀಸ್ ಆಗ್ತಾರೆ ಅನ್ನೋದು ಗೊತ್ತಿಲ್ಲ. ಈಗಾಗ್ಲೇ ಸೆಷೆನ್ಸ್ ಕೋರ್ಟ್ ವಾದ-ವಿವಾದ ಆಲಿಸಿ ದರ್ಶನ್ ಬೇಲ್ ಅರ್ಜಿಯನ್ನು ರಿಜೆಕ್ಟ್ ಮಾಡಿದೆ. ದರ್ಶನ್ ಹೈಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಸೋ ಹೈಕೋರ್ಟ್ನಲ್ಲಿ ವಿಚಾರಣೆ ನಡೆದು ದರ್ಶನ್ ರಿಲೀಸ್ ಆಗೋದು ಯಾವಾಗ ಅನ್ನೋದಂತೂ ಖಚಿತವಾಗಿ ಗೊತ್ತಿಲ್ಲ. ದರ್ಶನ್ ಬಿಡುಗಡೆ ಆಗದೇ ಇದ್ರೆ ಏನಂತೆ ಅವರ ನಟನೆಯ ಹಳೆಯ ಸಿನಿಮಾಗಳು ಒಂದರ ಹಿಂದೆ ಒಂದು ಮರುಬಿಡುಗಡೆ ಆಗ್ತಾ ಇವೆ. ದರ್ಶನ್ ಜೈಲಿಗೆ ಹೋದ ಬೆನ್ನಲ್ಲೇ ಶಾಸ್ತ್ರಿ ಸಿನಿಮಾವನ್ನು ರೀ ರಿಲೀಸ್ ಮಾಡಲಾಗಿತ್ತು.
undefined
ಇಷ್ಟ ಬಂದಿದ್ದು ತರ್ಸ್ಕೊಂಡು ತಿನ್ಬೋದಿತ್ತು, ದೇವತೆ ರೀತಿ ಇದ್ದೆ; ತಂದೆ ನೆನೆದು ಕಣ್ಣೀರಿಟ್ಟ ನಟಿ
ಇನ್ನೂ ದರ್ಶನ್ ಆರಂಭಿಕ ದಿನಗಳಲ್ಲಿ ಮಾಡಿದ್ದ ಕರಿಯ ಮೂವಿ ಕೂಡ ರೀ ರಿಲೀಸ್ ಆಗಿತ್ತು. ಬಹುಶಃ ದರ್ಶನ್ ಜೈಲಿನಲ್ಲಿರೋ ಹೊತ್ತಲ್ಲಿ ಅವರ ಸಿನಿಮಾ ಮರುಬಿಡುಗಡೆ ಮಾಡಿದರೆ ಒಳ್ಳೆ ಲಾಭ ಮಾಡಿಕೊಳ್ಳಬಹುದು ಅಂತ ಕೆಲ ನಿರ್ಮಾಪಕರು, ವಿತರಕರು ಇಂತ ಪ್ರಯತ್ನ ಮಾಡಿದ್ದಾರೆ. ಆದರೆ ಒಂದೆರಡು ಶೋ ಹೌಸ್ಫುಲ್ ಆಗಿದ್ದು ಬಿಟ್ಟರೆ ಈ ಸಿನಿಮಾಗಳು ಅಂಥಾ ದೊಡ್ಡ ಕಲೆಕ್ಷನ್ ಏನೂ ಮಾಡಿಲ್ಲ. ಆದರೂ ರೀ ರಿಲೀಸ್ ಕ್ರೇಜ್ ಏನೂ ಕಮ್ಮಿಯಾಗಿಲ್ಲ. ಇತ್ತೀಚಿಗೆ ದರ್ಶನ್ ಸೋದರ ದಿನಕರ್ ನವಗ್ರಹ ಸಿನಿಮಾ ಮರುಬಿಡುಗಡೆಯಾಗಲಿದೆ ಅನ್ನೋ ವಿಷ್ಯ ಹಂಚಿಕೊಂಡಿದ್ದರು. 2008ರಲ್ಲಿ ಬಂದ ಈ ಸಿನಿಮಾಗೆ ಹೊಸರೂಪ ಕೊಟ್ಟು ಮತ್ತೆ ತೆರೆಗೆ ತರಲಾಗ್ತಾ ಇದೆಯಂತೆ.
ಹೌದು! ನವಗ್ರಹ ರೀ ರಿಲೀಸ್ ಬೆನ್ನಲ್ಲೇ ದರ್ಶನ್ ನಟನೆಯ ನಮ್ಮ ಪ್ರೀತಿಯ ರಾಮು ಕೂಡ ಮರುಬಿಡುಗಡೆಗೆ ಸಜ್ಜಾಗ್ತಿರೋ ಸುದ್ದಿ ಬಂದಿದೆ. ಅಂದ್ಹಾಗೇ ನಮ್ಮ ಪ್ರೀತಿಯ ರಾಮು ದರ್ಶನ್ ಅಭಿನಯದ ಒಂಬತ್ತನೇ ಚಿತ್ರ. ಎಲ್ಲರೂ ದರ್ಶನ್ ಕೈಯಲ್ಲಿ ಲಾಂಗ್ ಕೊಡ್ತಾ ಇದ್ದ ಟೈಂ ನಿರ್ದೇಶಕರಾದ ಸಂಜಯ್ ಮತ್ತು ವಿಜಯ್ ದರ್ಶನ್ ಒಳಗಿನ ನಿಜವಾದ ಕಲಾವಿದನನ್ನು ಹೊರತರುವ ಪ್ರಯತ್ನ ಮಾಡಿದ್ದರು. ದರ್ಶನ್ನ ಕುರುಡು ಹಾಡುಗಾರನ ಪಾತ್ರದಲ್ಲಿ ತೋರಿಸಿದ್ದರು. ದರ್ಶನ್ ಕೂಡ ಈ ಚಿತ್ರಕ್ಕೆ ತಮ್ಮ ತನು-ಮನ ಅರ್ಪಿಸಿ ಕೆಲಸ ಮಾಡಿದ್ದರು. ಕಣ್ಣಿನ ಗುಡ್ಡೆಗಳನ್ನು ಮೇಲಕ್ಕೆ ಮಾಡಿ ಪಾತ್ರಕ್ಕೆ ಜೀವ ತುಂಬಿದರು. ಆದರೆ, ದುರಾದೃಷ್ಟ .. ದರ್ಶನ್ ಅವರನ್ನು ಹೊಡಿ, ಬಡಿ ಚಿತ್ರಗಳಲ್ಲಿ ನೋಡಿ ಮೆಚ್ಚಿಕೊಂಡಿದ್ದ ಅನೇಕರು ಈ ಹೊಸ ಅವತಾರವನ್ನ ಒಪ್ಪಲಿಲ್ಲ. ಬಾಕ್ಸಾಫೀಸ್‌ನಲ್ಲಿ ಈ ಚಿತ್ರ ಗೆಲ್ಲಲಿಲ್ಲ.
ಪಾರ್ಕ್‌ನಲ್ಲಿ ಹಾಟ್ ಪೋಸ್ ಕೊಟ್ಟ ಸೋನು ; ಡೀಪ್ ಜಾಸ್ತಿ ಆಯ್ತು, ಟಾಪ್ ತುಂಡ ಆಯ್ತು ಎಂದು
ಇದೀಗ ದರ್ಶನ್ ಜೈಲಲ್ಲಿರೋ ಹೊತ್ತಲ್ಲಿ ಈ ರಾಮು ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗಿದ್ದಾನೆ. ಒಟ್ಟಾರೆ ಸದ್ಯದ ಮಟ್ಟಿಗೆ ದರ್ಶನ್ ಜೈಲಿಂದ ಯಾವಾಗ ರಿಲೀಸ್ ಅನ್ನೋದು ಯಾರಿಗೂ ಗೊತ್ತಿಲ್ಲ. ಅಲ್ಲಿವರೆಗೂ ದಾಸನ ಫ್ಯಾನ್ಸ್ಗೆ ಹಳೇ ಸಿನಿಮಾಗಳೇ ಗತಿ ಅನ್ನುವಂತೆ ಆಗಿದೆ.