
'ಕಿಸ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶ್ರೀಲೀಲಾ, 'ಭರಾಟೆ' ಚಿತ್ರದಲ್ಲಿ ಅಬ್ಬರಿಸಿದ ನಂತರ 'ದುಬಾರಿ' ಚಿತ್ರಕ್ಕೆ ಸಹಿ ಮಾಡಿದ್ದರು. ಏನ್ ಮೇಡಂ ನಿಮ್ಮ ಹೊಸ ವರ್ಷದ ಪ್ಲಾನ್ ಎಂದು ಕೇಳುವ ಹಾಗೇ ಇಲ್ಲ ಅನ್ಸುತ್ತೆ. ಮೆಡಿಕಲ್ ವ್ಯಾಸಂಗ ಮಾಡುತ್ತಲೇ ಸಿಕ್ಕಾಪಟ್ಟೆ ಸಿನಿಮಾ ಕತೆಗಳನ್ನು ಕೇಳುತ್ತಿದ್ದಾರೆ.
ಕನ್ನಡದ ಹುಡ್ಗಿ ಈಗ ಚಿನ್ನದ ರಾಯಭಾರಿ; ಬಿಟೌನ್‌ನಲ್ಲಿ 'ಭರಾಟೆ' ಹುಡುಗಿ
ಹೌದು! ಧ್ರುವ ಸರ್ಜಾಗೆ ಜೋಡಿಯಾಗಿ 'ದುಬಾರಿ' ಚಿತ್ರಕ್ಕೆ ಸಿಹಿ ಮಾಡಿದ ಬೆನ್ನಲ್ಲೇ, ಶ್ರೀಲೀಲಾ ಧನ್ವೀರ್ ಗೌಡ ಜೊತೆ 'ಬೈ ಟೂ ಲವ್' ಸಿನಿಮಾ ಚಿತ್ರಕರಣದಲ್ಲಿ ಪಾಲ್ಗೊಂಡಿದ್ದಾರೆ. ಮೊದಲು ಬಾರಿ ಒಂದಾಗಿರುವ ಈ ಮುದ್ದಾದ ಜೋಡಿಯನ್ನು ಮುಹೂರ್ತ ಕಾರ್ಯಕ್ರಮದಲ್ಲಿ ಕಂಡ ಸಿನಿ ಪ್ರೇಮಿಗಳು ಭಲೇ ಎಂದಿದ್ದಾರೆ.
ಶ್ರೀಲೀಲಾ ಕನ್ನಡ ಚಿತ್ರರಂಗದಲ್ಲಿ ಮಾತ್ರ ಬ್ಯುಸಿ ಎಂದು ತಿಳಿದುಕೊಳ್ಳಬೇಡಿ. ಯಾಕಂದ್ರೆ ನಭಾ ನಟೇಶ್, ರಶ್ಮಿಕಾ, ರಚಿತಾ ಆದ್ಮೇಲೆ ಶ್ರೀಲೀಲಾನೂ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ರಾಘವೇಂದ್ರ ರಾವ್ ಚಿತ್ರಕಥೆ, ಗೌರಿ ನಿರ್ದೇಶನ ಹಾಗೂ ಬಾಹುಬಲಿ ಅವರ ಪ್ರೊಡಕ್ಷನ್ ಸಂಸ್ಥೆ ಅಡಿಯಲ್ಲಿ ಮೂಡಿ ಬರುತ್ತಿರುವ 'ಪೆಳ್ಳಿ ಸಂದಡಿ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ತೆಲುಗು ನಟ ಶ್ರೀಕಾಂತ್ ಪುತ್ರ ರೋಷನ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.