Puneeth Rajkumar ಹುಟ್ಟುಹಬ್ಬಕ್ಕೆ ಕ್ಷಣಗಣನೆ: 4000 ಚಿತ್ರಮಂದಿರಗಳಲ್ಲಿ 'ಜೇಮ್ಸ್‌' ಬಿಡುಗಡೆ

By Kannadaprabha News  |  First Published Mar 16, 2022, 10:45 AM IST

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಸಂಭ್ರಮಕ್ಕೆ ಇನ್ನೇನು ಒಂದೇ ದಿನ ಬಾಕಿ. ಮಾ.17 ಪುನೀತ್‌ ಅವರ ಹುಟ್ಟುಹಬ್ಬ. ಜೊತೆಗೆ ಅಪ್ಪು ನಟನೆಯ 'ಜೇಮ್ಸ್‌' ಸಿನಿಮಾ ಬಿಡುಗಡೆ. 


ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅಭಿಮಾನಿಗಳ (Fans) ಸಂಭ್ರಮಕ್ಕೆ ಇನ್ನೇನು ಒಂದೇ ದಿನ ಬಾಕಿ. ಮಾ.17 ಪುನೀತ್‌ ಅವರ ಹುಟ್ಟುಹಬ್ಬ (Birthday). ಜೊತೆಗೆ ಅಪ್ಪು ನಟನೆಯ 'ಜೇಮ್ಸ್‌' (James) ಸಿನಿಮಾ ಬಿಡುಗಡೆ. ಅಂದು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿ ಐದು ಭಾಷೆಗಳಲ್ಲಿ, 4 ಸಾವಿರ ಚಿತ್ರಮಂದಿರಗಳಲ್ಲಿ ‘ಜೇಮ್ಸ್‌’ ಚಿತ್ರ ಬಿಡುಗಡೆಯಾಗಲಿದೆ.

ಕೆನಡಾ, ಯೂರೋಪ್‌, ಯುಎಸ್‌ಎ, ಆಸ್ಪ್ರೇಲಿಯಾ ಸೇರಿ ಹೊರ ದೇಶಗಳ 72 ನಗರಗಳಲ್ಲಿ ‘ಜೇಮ್ಸ್‌’ ತೆರೆಗೆ ಬರುತ್ತಿದೆ. ಯುಎಸ್‌ನಲ್ಲಿ 270 ಸ್ಕ್ರೀನ್‌, ಆಸ್ಪ್ರೇಲಿಯಾದಲ್ಲಿ 150 ಸ್ಕ್ರೀನ್‌ ಸೇರಿ ಹೊರ ದೇಶಗಳಲ್ಲಿ ಒಟ್ಟು 1000 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುವುದಕ್ಕೆ ಸಜ್ಜಾಗಿದೆ. ವಿಶೇಷ ಎಂದರೆ ಆಸ್ಪ್ರೇಲಿಯಾ (Australia) ಸೆನ್ಸಾರ್‌ ಮಂಡಳಿಯಲ್ಲಿ (Censor Board) ಸೆನ್ಸಾರ್‌ ಮಾಡಿಕೊಂಡ ಮೊದಲ ಕನ್ನಡ ಸಿನಿಮಾ ‘ಜೇಮ್ಸ್‌’.

Tap to resize

Latest Videos

undefined

ರಾರಾಜಿಸುತ್ತಿರುವ ಪುನೀತ್‌ ಕಟೌಟ್‌ಗಳು: ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಚಿತ್ರಮಂದಿರಗಳ ಮುಂದೆ ಪುನೀತ್‌ ರಾಜ್‌ಕುಮಾರ್‌ ಅವರ ಬೃಹತ್‌ ಕಟೌಟ್‌ಗಳು (Cutouts) ರಾರಾಜಿಸುತ್ತಿವೆ. ‘ಜೇಮ್ಸ್‌’ ಚಿತ್ರದ ಕಟೌಟ್‌ ಜತೆಗೆ ಇಲ್ಲಿಯವರೆಗೂ ಪುನೀತ್‌ ನಟಿಸಿದ ಎಲ್ಲಾ ಚಿತ್ರಗಳ ಪೋಸ್ಟರ್‌ (Poster) ಹಾಗೂ ಕಟೌಟ್‌ಗಳಿಂದ ಅಭಿಮಾನಿಗಳು ಚಿತ್ರಮಂದಿರಗಳನ್ನು ಅಲಂಕರಿಸಿದ್ದಾರೆ. ಬೆಂಗಳೂರಿನ ವೀರೇಶ್‌, ಸಿದ್ದೇಶ್ವರ ಹಾಗೂ ವೀರಭದ್ರ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳ ಜಾತ್ರೆ ಜೋರಾಗಿ ಇದೆ. ಮಂಡ್ಯದಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌, ಡಾ ರಾಜ್‌ಕುಮಾರ್‌ (Dr.Rajkumar) ಜತೆಗೆ ಸೋಲ್ಜರ್‌ ಗೆಟಪ್‌ನಲ್ಲಿರುವ ಪುನೀತ್‌ ಅವರ ಕಟೌಟ್‌ ಕಳೆದ ಎರಡು ವಾರಗಳ ಹಿಂದೆಯೇ ಹಾಕಲಾಗಿದೆ.

James 2022: ಪುನೀತ್ ರಾಜ್‍ಕುಮಾರ್ ಪವರ್‌ಪ್ಯಾಕ್ಡ್ ಚಿತ್ರಕ್ಕೆ ಸೆನ್ಸಾರ್‌ನಿಂದ ಯು/ಎ ಸರ್ಟಿಫಿಕೇಟ್

ಅಭಿಮಾನಿಗಳಿಂದ ಅಭಿಮಾನಿಗಳಿಗೆ ಮನವಿ: ಪುನೀತ್‌ ರಾಜ್‌ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ರೀತಿಯಲ್ಲಿ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಂಚಿಕೊಳ್ಳದಂತೆ ಅಭಿಮಾನಿಗಳೇ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ‘ಪುನೀತ್‌ ಅವರು ನಮ್ಮನ್ನು ಬಿಟ್ಟು ಹೋಗಿಲ್ಲ. ಅವರು ನಮ್ಮ ಜತೆಗೆ ಇದ್ದಾರೆ. ಹೀಗಾಗಿ ಅವರಿಗೆ ಶ್ರದ್ಧಾಂಜಲಿ ಹೇಳುವ ರೀತಿಯಲ್ಲಿ ಪೋಟೋ, ಕಟೌಟ್‌, ಪೋಸ್ಟರ್‌ಗಳನ್ನು ಹಾಕಬೇಡಿ’ ಎಂದು ಪುನೀತ್‌ ಅಭಿಮಾನಿಗಳು ಎಲ್ಲರಿಗೂ ಮನವಿ ಮಾಡಿಕೊಂಡಿದ್ದಾರೆ.



ಪುನೀತ್‌ಗಾಗಿ ಸೀಟು ಕಾಯ್ದಿರಿಸಿರುವ ಚಿತ್ರಮಂದಿರ:
ಬೆಂಗಳೂರಿನ (Bengaluru) ವೀರಭದ್ರೇಶ್ವರ ಚಿತ್ರಮಂದಿರದಲ್ಲಿ (Veerabhadreshwara Theatre) ಪುನೀತ್‌ ರಾಜ್‌ಕುಮಾರ್‌ ಅವರಿಗಾಗಿ ಚಿತ್ರಮಂದಿರದ ಮೊದಲನೇ ಸಾಲಿನ 17ನೇ ನಂಬರ್‌ ಸೀಟನ್ನು ಮುಂಗಡವಾಗಿ ಬುಕ್‌ ಮಾಡಲಾಗಿದೆ. ಒಂದು ವಾರದ ಹಿಂದೆಯೇ ಹೀಗೆ ಪುನೀತ್‌ ಅವರಿಗಾಗಿ ಸೀಟು ಕಾಯ್ದರಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral) ಆಗಿದೆ.

ಹಾಡುಗಳ ಅರ್ಪಣೆ: ಪುನೀತ್‌ ರಾಜ್‌ಕುಮಾರ್‌ ಅವರಿಗಾಗಿಯೇ ವಿಶೇಷವಾದ ಹಾಡುಗಳು ಮೂಡಿ ಬಂದಿವೆ. ನಿರ್ದೇಶಕ ಪವನ್‌ ಒಡೆಯರ್‌ (Pawan Wadeyar) ರಚನೆಯ ‘ಪವರಿಸಂ’ ಹಾಡು ಎಂಆರ್‌ಟಿ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗಿದೆ. ರಾಕ್‌ಲೈನ್‌ ವೆಂಕಟೇಶ್‌ (Rockline Venkatesh) ಈ ಹಾಡನ್ನು ನಿರ್ಮಿಸಿದ್ದು, ಶ್ರೀಹರ್ಷ (Sriharsha) ಹಾಡಿದ್ದಾರೆ. ಡಿ ಇಮಾನ್‌ (D.Imman) ಸಂಗೀತ ಸಂಯೋಜನೆ ಮಾಡಿದ್ದಾರೆ.

James 2022: ಮಾ.17ರಂದು ಏಕಕಾಲಕ್ಕೆ 5 ಭಾಷೆಯಲ್ಲಿ ಪುನೀತ್‌ ಸಿನಿಮಾ ಬಿಡುಗಡೆ

ಮತ್ತೊಬ್ಬ ನಿರ್ದೇಶಕ ಕಾಂತ ಕನ್ನಲ್ಲಿ (Kantha Kannalli) ‘ಮಹಾನುಭಾವ’ (Mahanubhava) ಹೆಸರಿನಲ್ಲಿ ಹಾಡು ರೂಪಿಸಿದ್ದಾರೆ. ಶ್ರೀಧರ್‌ ವಿ ಸಂಭ್ರಮ (Sridhar V Sambhram) ಸಂಗೀತದಲ್ಲಿ ಈ ಹಾಡು ಮೂಡಿ ಬಂದಿದ್ದು, ಗಾಯಕರಾದ ವಿಜಯ್‌ ಪ್ರಕಾಶ್‌, ಶಂಕರ್‌ ಮಹಾದೇವನ್‌, ಸೋನು ನಿಗಮ್‌, ಕೈಲಾಶ್‌ ಖೇರ್‌ ‘ಮಹಾನುಭಾವ’ ಹಾಡಿಗೆ ಧ್ವನಿಯಾಗಿರುವುದು ವಿಶೇಷ. ಸುನೀಲ್‌ ಬಿ ಎನ್‌ ಈ ಹಾಡನ್ನು ನಿರ್ಮಿಸಿದ್ದಾರೆ. ಸಂಭ್ರಮ ಸ್ಟುಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಹಾಡನ್ನು ನೋಡಬಹುದು.

ಜೇಮ್ಸ್‌ ಜತೆ ಬೈರಾಗಿ: ಶಿವರಾಜ್‌ಕುಮಾರ್‌ (Shivarajkumar) ನಟನೆಯ 'ಬೈರಾಗಿ' (Bairagi) ಚಿತ್ರದ ಟೀಸರ್‌ (Teaser) 'ಜೇಮ್ಸ್‌' ಚಿತ್ರದ ಜತೆಗೆ ಬಿಡುಗಡೆ ಆಗುತ್ತಿದೆ. ಇದು ಶಿವಣ್ಣ ನಟನೆಯ 123ನೇ ಚಿತ್ರವಾಗಿದ್ದು, ಕೃಷ್ಣ ಸಾರ್ಥಕ್‌ ನಿರ್ಮಾಣದ, ವಿಜಯ್‌ ಮಿಲ್ಟನ್‌ ನಿರ್ದೇಶನದ ಸಿನಿಮಾ.

click me!