
Toxic Secret Revealed: ರಾಕಿಂಗ್ ಸ್ಟಾರ್ಈಗ ವರ್ಲ್ಡ್ಸಿನಿ ಪ್ರೇಕ್ಷಕರನ್ನ ತಲುಪಿದ್ದಾರೆ. ಅದಕ್ಕೆ ಕಾರಣ ಕೆಜಿಎಫ್ ಸಿಮಾದಲ್ಲಿದ್ದ ವೈಲೆನ್ಸ್.. ಕೆಜಿಎಫ್ನಿಂದ ಯಶ್ ಮಾಸ್ ಸಿನಿಮಾಗಳಿಗೆ ಬಾಸ್ ಪಟ್ಟಕ್ಕೇರಿದ್ರು. ಆದ್ರೆ ಟಾಕ್ಸಿಕ್ಸ್ಯಾಂಪಲ್ಸ್ಗಳು ರಾಕಿ 'ರೊಮ್ಯಾನ್ಸ್ಕಿಂಗ್' ಎನ್ನುವಂತೆ ಮಾಡಿವೆ. ಬಟ್, ಯಶ್ತಮ್ಮ ಟಾಕ್ಸಿಕ್ ಚಿತ್ರದ ಬಗೆಗಿನ ದೊಡ್ಡ ಸೀಕ್ರೆಟ್ ಒಂದನ್ನ ಈಗ ಬಿಚ್ಚಿಟ್ಟಿದ್ದಾರೆ. ಅದೇನು ಗೊತ್ತಾ? ಈ ಸ್ಟೋರಿ ನೋಡಿ..
ಕಾಯ್ತಾ ಕಾಯ್ತಾ ಕಣ್ಣು ದಣಿದು ಹೋಗಿದ್ದ ಯಶ್ಅಭಿಮಾನಿಗಳಿಗೆ, ಇಡೀ ಇಂಡಿಯನ್ ಸಿನಿಪ್ರೇಮಿಗಳಿಗೆ ಅಸಲಿ ಹಬ್ಬ ಆಗಿದ್ದು, ಟಾಕ್ಸಿಕ್ ಸಿನಿಮಾದ ರೊಮ್ಯಾಂಟಿಕ್ ಹಾಡು. ‘ತಬಾಹಿ’ಯಲ್ಲಿ ಕಿಯಾರಾನಾ ತಬ್ಬಿ ಮುದ್ದಾಡಿದ್ರು ಯಶ್..
ಈ ತಬಾಹಿಯ ರಾಕಿ ರೊಮ್ಯಾನ್ಸ್ ನೋಡಿ ಹೌಹಾರಿದ್ರು ಫ್ಯಾನ್ಸ್.. ರಾಯನ ರೊಮ್ಯಾಂಟಿಕ್ ಎಪಿಸೋಡ್ ರಿವೀಲ್ ಆಗುತ್ತಿದ್ದಂತೆ ಯಶ್ ಮಾಸ್ಹೀರೋ ಮಾತ್ರವಲ್ಲ ಕಿಂಗ್ ಆಫ್ ರೊಮ್ಯಾನ್ಸ್ ಅಂತಾ ಇದಾರೆ. ಇದಕ್ಕೆ ಮತ್ತೆ ಬೆಂಕಿ ಹಚ್ಚಿದ್ದು ತಾರಾ ಸುತಾರಿಯಾ ಜೊತೆಗಿನ ಮನ ಮೋಹಕ ಹಾಡು..
ಈ ಮನ ಮೋಹಕ ಹಾಡು ಯಶ್ರೊಮ್ಯಾನ್ಸ್ನ ಮತ್ತೊಂದೆ ಲೆವೆಲ್ಗೆ ಕೊಂಡೊಯ್ತು. ಯಶ್ರೊಮ್ಯಾನ್ಸ್ ಜೊತೆ ಎಮೋಷನ್ ನ ಮಿಕ್ಸ್ ಮಾಡಿದ್ದು ರಿವಿಲ್ ಆಗಿತ್ತು. ರೊಮ್ಯಾಟಿಂಗ್ಹಾಡಿನಲ್ಲಿ ತಾರಾ ಸುತಾರಿಯಾ ಕಣ್ಣೀರಲ್ಲಿ ಯಶ್ ಮಿಕ್ಸ್ಆಗಿ ಇಲ್ಲಿ ಪ್ರಣಯದ ಜೊತೆ ಬಿಡಿಸಲಾಗದ ಪ್ರೀತಿ ಇದೆ ಅನ್ನೋದು ಗೊತ್ತಾಗಿತ್ತು. ಆದ್ರೆ ಯಶ್ ಇತ್ತೀಚೆಗೆ ಅಮೇರಿಕಾಗೆ ಹೋಗಿ ಬಂದ ಮೇಲೆ ಟಾಕ್ಸಿಕ್ ನ ಬೇರೆಯದ್ದೇ ಗುಟ್ಟು ರಟ್ಟಾಗಿದೆ.
ಹೌದು, ಟಾಕ್ಸಿಕ್ನ ಎರಡು ಹಾಡುಗಳು ಬಂದ ಮೇಲೆ ಈ ಸಿನಿಮಾದಲ್ಲಿ ಆಕ್ಷನ್ ವೈಲೆನ್ಸ್ಸಲ್ವ ಕಡಿಮೆ ಇದೆ, ಇಲ್ಲಿ ರೊಮ್ಯಾನ್ಸೇ ಹೆಚ್ಚು, ಯಶ್ಈ ಭಾರಿ ಶೃಂಗಾರದ ಜ್ವಾಲೆಯಲ್ಲಿ ಬೆಯ್ಯುತ್ತಾರೆ ಅಂತೆಲ್ಲಾ ಟಾಕ್ ಆಗಿದೆ. ಆದ್ರೆ ಯಶ್ಈಗ ಟಾಕ್ಸಿಕ್ ನ ಬೇರೆಯದ್ದೇ ಕಥೆ ಹೇಳಿದ್ದಾರೆ. ಹಾಲಿವುಡ್ನ ಮಾಧ್ಯಮವೊಂದಕ್ಕೆ ಮಾತನಾಡಿರೋ ಯಶ್, ಟಾಕ್ಸಿಕ್ನಲ್ಲಿ ಬರೀ ರೊಮ್ಯಾನ್ಸ್ ಮಾತ್ರ ಇಲ್ಲ, ಎಮೋಷನ್ ಜೊತೆ ಭರ್ಜರಿ ಆಕ್ಷನ್ ಇದೆ ಅಂತ ಹೇಳಿದ್ದಾರೆ.
ಹೌದು, ಯಶ್ಆ್ಯಕ್ಷನ್ ಸಿನಿಮಾ ಪ್ರೀಯ. ಯಶ್ಅವರಿಗೆ ಮಾಸ್ಲುಕ್ಜೊತೆ ಮಿಂಚಿ ಗೆಲ್ಲೋಕೆ ತುಂಬಾ ಇಷ್ಟ. ಆದ್ರೆ ಟಾಕ್ಸಿಕ್ನಲ್ಲಿ ಸ್ವಲ್ಪ ರೊಮ್ಯಾನ್ಸ್ ಹೆಚ್ಚಿದೆ. ಆದ್ರೆ ಅದಕ್ಕೂ ಹೆಚ್ಚು ವೈಲೆನ್ಸ್ ಇದೆ ಅನ್ನೋದು ಯಶ್ ಮಾತು. ಈ ಸಿನಿಮಾಗೆ ಹಾಲಿವುಡ್ನ ಸ್ಟಂಟ್ ಮಾಸ್ಟರ್ ಜೆ.ಜೆ ಪೆರ್ರಿ ಆ್ಯಕ್ಷನ್ ದೃಶ್ಯಗಳನ್ನ ಕಂಪೋಸ್ ಮಾಡಿದ್ದು, ರೊಮ್ಯಾನ್ಸ್ ಜೊತೆ ಬ್ಲೆಡ್ ಕೂಡ ಬ್ಲೆಂಡ್ ಆಗಿದೆ. ಅದಕ್ಕೆ ಈ ಸಿನಿಮಾದ ರಕ್ತಸಿಕ್ತ ಪೋಸ್ಟರ್ ಸಾಕ್ಷಿ..
ಆಗಸ್ಟ್ 8ಕ್ಕೆ ಟಾಕ್ಸಿಕ್ನ ರಕ್ತಸಿಕ್ತ ಟ್ರೈಲರ್ಬಿಡುಗಡೆ..!
ಗೀತು ಮೋಹನ್ ದಾಸ್ ನಿರ್ದೇಶನದ ಯಶ್ ಹಾಗು ಕೆವಿಎನ್ ಪ್ರೊಡಕ್ಷನ್ನ ಟಾಕ್ಸಿಕ್ನಲ್ಲಿ ವೈಲೆನ್ಸ್ ಎಷ್ಟಿದೆ ಅಂತ ಗೊತ್ತಾಗೋದೇ ಆಗಸ್ಟ್8ಕ್ಕೆ. ಅಂದು ಟಾಕ್ಸಿಕ್ನ 'ಪ್ಯಾನ್ ವರ್ಲ್ಡ್'ಟ್ರೈಲರ್ಬಿಡುಗಡೆ ಆಗುತ್ತಿದೆ. ಆ ಟ್ರೈಲರ್ನಲ್ಲಿ ಟಾಕ್ಸಿಕ್ನ ರಕ್ತಸಿಕ್ತ ಅಧ್ಯಾಯ ರಿವಿಲ್ ಆಗುತ್ತೆ ಅಂತ ಹೇಳಲಾಗ್ತಿದೆ. ಇನ್ನೇನು ಸ್ವಲ್ಪವೇ ದಿನಗಳು ಕಾದರೆ ಸಾಕು, ಬಂದೇ ಬಿಡುತ್ತೆ ಟ್ರೇಲರ್!
‘ಸಿನಿಮಾ ಹಂಗಾಮ’ ವಿಡಿಯೋ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.