KETO Diet ಅಪಾಯಕಾರಿ; ಇದ್ದಕ್ಕಿದ್ದಂತೆ 16 ಕೆಜಿ ತೂಕ ಇಳಿಸಿಕೊಂಡ ಸ್ಪಂದನಾ!

By Vaishnavi Chandrashekar  |  First Published Aug 7, 2023, 12:08 PM IST

ಡಯಟ್ ಮಾಡುವುದರಿಂದ ಏನೆಲ್ಲಾ ಅಪಾಯವಿದೆ ಎಂದು ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿದ್ದಾರೆ.  


ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಘಾತದಿಂದ ಅಗಲಿದ್ದಾರೆ. ಸಹೋದರ ಸಹೋದರಿಯರ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿದ್ದ ಸ್ಪಂದನಾ ಶಾಪಿಂಗ್ ಮುಗಿಸಿಕೊಂಡು ಹೋಟೆಲ್‌ ರೂಮ್‌ಗೆ ತೆರಳುವಾಗ ಹೃದಯಾಘಾತವಾಗಿದೆ ಎಂದು ಆಪ್ತ ಮೂಲಗಳು ಹೇಳುತ್ತದೆ. ಆದರೆ ಯಾಕೆ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತವಾಗುತ್ತದೆ? ಎಂದು ಹೇಳಿದ್ದಾರೆ.

'ಯುವಕರು ಮತ್ತು ಯುವತಿಯರು ಕಣ್ಣು ಬಿಟ್ಟು ನೋಡಬೇಕು ಪೂರ್ವಜ್ಜರ ಪದ್ಧತಿ ಬಿಟ್ಟು ಹೊಸ ಪದ್ಧತಿಯನ್ನು ಫಾಲೋ ಮಾಡುತ್ತಿದ್ದಾರೆ. ಯುವರು KETO Diet ಆರಂಭ ಮಾಡುತ್ತಿದ್ದರು. ನಮ್ಮ ಹಿರಿಯರು ಉಪವಾಸ ಪದ್ಧತಿ ಫಾಲೋ ಮಾಡುತ್ತಿದ್ದರು ಶನಿವಾರ ಉಪವಾಸ ಸೋಮವಾರ ಉಪವಾಸ ಮಾಡುತ್ತಿದ್ದರು. ಉಪವಾಸ ಮಾಡುವುದರಿಂದ ಶರೀರಕ್ಕೂ ಮತ್ತು ಮನಸ್ಸಿಗೂ ಒಳ್ಳೆಯದಾಗುತ್ತಿತ್ತು ಭಗವಂತನನ್ನು ನೆನಪಿಸಿಕೊಂಡು ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದರು. ಆದರೆ ಈ ಮಾಡರ್ನ್‌ ಡಯಟ್ ಫಾಲೋ ಮಾಡಿ ತಪ್ಪು ಮಾಡಿಕೊಂಡರೂ ಬಾಲಿವುಡ್ ನಟಿ ಶ್ರೀದೇವಿ ಕೂಡ ಕೀಟೋ ಡಯಟ್ ಮಾಡುತ್ತಿದ್ದರು' ಎಂದು ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಹೃದ್ರೋಗ ತಜ್ಞ ಮಾತನಾಡಿದ್ದಾರೆ.

Tap to resize

Latest Videos

ನಮ್ದು ಲವ್ ಮ್ಯಾರೇಜ್‌ ಅಲ್ಲ ಪಕ್ಕಾ ಅರೇಂಜ್ಡ್‌ ಮ್ಯಾರೇಜ್; ವಿಜಯ್ ರಾಘವೇಂದ್ರ-ಸ್ಪಂದನಾ ಮ್ಯಾರೇಜ್ ಸ್ಟೋರಿ!

'ಯುವಕರು ಮಾಡರ್ನ್‌ ಶೈಲಿ ಫಾಲೋ ಮಾಡುತ್ತಿದ್ದಾರೆ ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ತಿಳಿಯುತ್ತಿಲ್ಲ ಈ ಕಿಟೋ ಡಯಟ್‌ನಲ್ಲಿ ಕಾರ್ಬೋಹೈಡ್ರೇಟ್ ತುಂಬಾ ಕಡಿಮೆ ಮಾಡುತ್ತಾರೆ ಪ್ರೋಟಿನ್‌ ಮತ್ತು ಫ್ಯಾಟ್‌ನ ಹೆಚ್ಚಿಗೆ ತೆಗೆದುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ ಮಲಬದ್ಧತೆ ಶುರುವಾಗುತ್ತದೆ ಮ್ರೈಕ್ರೋ ನ್ಯೂರಿಯಂಟ್ಸ್‌ ಕಡಿಮೆಯಾಗುತ್ತದೆ. ನಾವು ತರಕಾರಿ ಹಣ್ಣುಗಳನ್ನು ತೆಗೆದುಕೊಂಡಾಗ ಆರೋಗ್ಯ ಚೆನ್ನಾಗಿರುತ್ತದೆ. ಅದೆಲ್ಲಾ ಬಿಟ್ಟು ಹೈ ಫ್ಯಾಟ್‌ ಮತ್ತು ಪ್ರೋಟಿನ್ ಡಯಟ್ ಮಾಡುತ್ತಾರೆ ಇದರಿಂದ ಇದ್ದಕ್ಕಿದ್ದಂತೆ ತೂಕ ಇಳಿಯುತ್ತದೆ. ಹೆಣ್ಣು ಮಕ್ಕಳಿಗೆ ಮೆನೋಪಾಸ್ ಆಗುವವರೆಗೂ ದೇಹದಲ್ಲಿ ಹಾರ್ಮೋನ್‌ಗಳು ಪ್ರಡ್ಯೂಸ್ ಆಗುತ್ತದೆ ಇದೆಲ್ಲಾ ನಮಗೆ ಹೃದಯಾಘಾತ ಆಗದಂತೆ ಕಾಪಾಡುತ್ತದೆ. ಹೃತುಚಕ್ರ ನಿಂತ ಮೇಲೆ ಹೆಂಗಸರು ಮತ್ತು ಗಂಡಸರ ದೇಹ ಒಂದೇ ರೀತಿ ಇರುತ್ತದೆ. ಕರೋನಾ ವ್ಯಾಕ್ಸಿನ್ ತೆಗೆದುಕೊಂಡರೆ ಹೃದಯಾಘಾತ ಆಗುತ್ತದೆ ಎಂದು ಅನೇಕು ಹೇಳುತ್ತಿದ್ದಾರೆ ಅದರೆ ಅದು ಸುಳ್ಳು ಸುದ್ದು' ಎಂದು ವೈದ್ಯರು ಹೇಳಿದ್ದಾರೆ.  

ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ 2007, ಆಗಸ್ಟ್ 26 ರಲ್ಲಿ  ಪ್ರೀತಿಸಿ  ಮದುವೆಯಾಗಿದ್ದರು. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ದುರಂತ ನಡೆದಿದೆ.  2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು. ದಂಪತಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. ಸ್ಪಂದನಾ ಅವರ ಸಹೋದರ  ರಕ್ಷಿತ್ ಶಿವರಾಂ ಇತ್ತೀಚೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ಸ್ಪಂದನಾ ಸಹೋದರನ ಪರ ಪ್ರಚಾರ ನಡೆಸಿದ್ದರು.

ಥೈಲ್ಯಾಂಡ್ ನಲ್ಲಿ ನಿನ್ನೆ ಸಂಜೆ ಶಾಪಿಂಗ್ ಮುಗಿಸಿ ರೂಂಗೆ ಬರುವಾಗ ಈ ಘಟನೆ ನಡೆದಿದೆ.  ಹೃದಯಾಘಾತಕ್ಕೆ ಒಳಗಾಗಿದ್ದ ಸ್ಪಂದನಾರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

click me!