ಟಾಲಿವುಡ್​ಗೆ ಹಾರಿತು 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ': ರಮ್ಯಾ ಔಟ್​, ರಶ್ಮಿ ಗೌತಮ್​ ಇನ್​!

By Suvarna News  |  First Published Aug 16, 2023, 6:16 PM IST

ಕನ್ನಡದ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರವು ತೆಲಗುವಿನಲ್ಲಿ ಡಬ್​ ಆಗಿದ್ದು ಇದೇ 26ರಂದು ಬಿಡುಗಡೆಯಾಗಲಿದೆ. ರಮ್ಯಾ ಬದಲು ಬೇರೆ ನಟಿ ಇದರಲ್ಲಿ ನಟಿಸುತ್ತಿದ್ದಾರೆ. 
 


ಕನ್ನಡದ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಚಿತ್ರ ಕಳೆದ ಜುಲೈ 21ರಂದು ಬಿಡುಗಡೆ ಆಗಿದ್ದು ಸಕತ್​ ಸುದ್ದಿ ಮಾಡುತ್ತಿದೆ. ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ಪ್ರಯತ್ನವಾಗಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಮೂಡಿಬಂತು. ರಮ್ಯಾ, ದಿಗಂತ್​, ಪವನ್​ ಕುಮಾರ್​, ರಿಷಬ್​ ಶೆಟ್ಟಿ ಮುಂತಾದವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರವನ್ನು ಹಿಟ್​ ಮಾಡುತ್ತಿದೆ. ‘ಗುಲ್ಮೊಹರ್ ಫಿಲ್ಮ್ಸ್’ ಹಾಗೂ ‘ವರುಣ್ ಸ್ಟುಡಿಯೋಸ್’ ಜೊತೆಯಾಗಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಿರ್ಮಿಸಿವೆ. ಕರ್ನಾಟಕದ ಅಕ್ಕ ಪಕ್ಕದ ರಾಜ್ಯಗಳು ಮಾತ್ರವಲ್ಲದೇ ವಿದೇಶದಲ್ಲಿಯೂ ಬಿಡುಗಡೆ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ವಿಮರ್ಶಾತ್ಮಕ ಮತ್ತು ಕಮರ್ಷಿಯಲ್ ಆಗಿ ಮೆಚ್ಚುಗೆ ಗಳಿಸುತ್ತಿದೆ. ಚಿತ್ರವು 20 ಕೋಟಿ ರೂ. ಗೂ ಹೆಚ್ಚು ಗಳಿಸಿದೆ ಎಂದು ವರದಿಯಾಗಿದೆ. 

ಎಲ್ಲರಿಗೂ ತಿಳಿದಿರುವಂತೆ ಚಿತ್ರದ ಬಿಡುಗಡೆಗೂ ಮುನ್ನವೇ ವಿವಾದಕ್ಕೂ ಈಡಾಯಿತು. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಮ್ಯಾ ಅವರು ಕೋರ್ಟ್​ ಮೆಟ್ಟಿಲೇರಿದ್ದರು. ವಿಶೇಷ ಎಂದರೆ ಈ ಹೊಸ ಹುಡುಗರ ಚಿತ್ರಕ್ಕೆ ಬೆಂಬಲವಾಗಿ ಹಲವು ಖ್ಯಾತ ನಟರು  ನಿಂತಿದ್ದರು. ರಮ್ಯಾ ಕೂಡ ಅ‍ವರ ಪರವಾಗಿಯೇ ನಿಂತಿದ್ದರು. ಆದರೆ ಸಿನಿಮಾ ರಿಲೀಸ್‌ಗೆ ಎರಡು ದಿನ ಮೊದಲು ಏನಾಯಿತೋ ಏನೋ, ರಮ್ಯಾ (Ramya) ಚಿತ್ರಕ್ಕೆ ತಡೆ ತಂದು ಬಿಟ್ಟರು. ತನ್ನ ದೃಶ್ಯ ಬಳಸಬಾರದು ಎಂದರು. ಇಲ್ಲದಿದ್ದರೆ ಕೋಟಿ ದುಡ್ಡು ಕೊಡಬೇಕು ಎಂದರು. ಸಣ್ಣ ಹುಡುಗರ ತಂಡ ಬೆಚ್ಚಿಬಿದ್ದಿತು. ಆದರೆ ಅವರ ಜೊತೆ ಇಡೀ ಚಿತ್ರರಂಗ ಇತ್ತು. ಸಿನಿಮಾ ವ್ಯಾಮೋಹಿಗಳಿದ್ದರು. ಅವರೆಲ್ಲರೂ ರಮ್ಯಾ ಅವರ ಈ ನಡೆಯನ್ನು ನೋಡಿ ಶಾಕ್‌ಗೆ ಒಳಗಾಗಿದ್ದು ಸುಳ್ಳಲ್ಲ. ಕೊನೆಗೆ ಎಲ್ಲವೂ ಬಗೆಹರಿದು ಚಿತ್ರ ಯಶಸ್ವಿಯಾಗಿ ಬಿಡುಗಡೆಯಾಗಿದೆ. ಇದೀಗ ಇದರ ತೆಲಗು ವರ್ಷನ್​ ಬಿಡುಗಡೆಗೊಳ್ಳಲು ಸಜ್ಜಾಗುತ್ತಿದೆ.

Tap to resize

Latest Videos

ರಮ್ಯಾಗೆ ತಪ್ಪು ದಾರಿ ತೋರಿಸಿದ್ಯಾರು? ರಾಜ್ ಬಿ ಶೆಟ್ಟಿ ಎಲ್ಲಿ ಬೆಂಕಿ ಬೀಳತ್ತೋ ನೋಡ್ಕೋಳೋಣ ಎಂದಿದ್ಯಾಕೆ?

ಹೌದು. ‘ಚಾಯ್ ಬಿಸ್ಕೆಟ್ ಫಿಲ್ಮ್ಸ್’ ಮತ್ತು ‘ಅನ್ನಪೂರ್ಣ ಸ್ಟುಡಿಯೋಸ್’ (Annapoorna studios) ಸಂಸ್ಥೆಗಳು ಜಂಟಿಯಾಗಿ ತೆಲುಗುವಿನಲ್ಲಿ ಚಿತ್ರ ಬಿಡುಗಡೆಗೆ ಸನ್ನದ್ಧರಾಗಿದ್ದಾರೆ. ಕನ್ನಡದ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಡಬ್ಬಿಂಗ್​ನಲ್ಲಿ ತಂಡ ಸಿದ್ಧಗೊಂಡಿದೆ. ಅಲ್ಲಿ ಇದರ ಹೆಸರು  ‘ಬಾಯ್ಸ್ ಹಾಸ್ಟೆಲ್’ ಎಂದು ಇಡಲಾಗುವುದು. ಕನ್ನಡದಲ್ಲಿ ರಿಲೀಸ್​ ಆದಾಗ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದರಿಂದ ಈ ಚಿತ್ರಕ್ಕೆ ಪಕ್ಕದ ರಾಜ್ಯದಿಂದಲೂ ಬೇಡಿಕೆ ಬಂತು. ಆಗಸ್ಟ್​ 26ರಂದು ಆಂಧ್ರ ಹಾಗೂ ತೆಲಂಗಾಣದಲ್ಲಿ ‘ಬಾಯ್ಸ್ ಹಾಸ್ಟೆಲ್’ ಬಿಡುಗಡೆ ಆಗಲಿದೆ.  ಈ ಸಿನಿಮಾಗೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಹಾಡುಗಳು ಸೂಪರ್ ಹಿಟ್​ ಆಗಿವೆ. ಇದನ್ನು ಅಲ್ಲಿಯ ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. 
 
ಆದರೆ ಚಿಕ್ಕದೊಂದು ಬದಲಾವಣೆಯನ್ನು ಡಬ್ಬಿಂಗ್​ನಲ್ಲಿ ಮಾಡಲಾಗಿದೆ. ಅದೇನೆಂದರೆ ಕನ್ನಡದ ವರ್ಷನ್​ನಲ್ಲಿ ರಮ್ಯಾ ಅವರ ಅತಿಥಿ ಪಾತ್ರ ಹೈಲೈಟ್​ ಆಯಿತು. ಆದರೆ ತೆಲುಗಿನಲ್ಲಿ ರಮ್ಯಾ ಔಟ್​ ಆಗಿದ್ದು ಅದರ ಬದಲು  ನಿರೂಪಕಿಯೂ ಆಗಿರುವ ರಶ್ಮಿ ಗೌತಮ್​ (Rashmi Gautham) ಈ  ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಆದ್ದರಿಂದ  ತೆಲುಗು ವರ್ಷನಲ್ಲಿ ರಮ್ಯಾ ಅವರು ಇರುವುದಿಲ್ಲ. ರಮ್ಯಾ ಬದಲಾಗಿ, ತೆಲಗುವಿನಲ್ಲಿ ರಶ್ಮಿ  ಗೌತಮ್​ ಉಪನ್ಯಾಸಕಿ ಆಗಲಿದ್ದಾರೆ.   ಇದಾಗಲೇ ಎಂಟಿಆರ್ ಮ್ಯೂಸಿಕ್ ಮೂಲಕ ‘ಬಾಯ್ಸ್ ಹಾಸ್ಟೆಲ್’ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಆಗಿದೆ.  

ಹಾಸ್ಟೆಲ್ ಹುಡುಗರಿಗೆ ರಮ್ಯಾ ನೋಟಿಸ್ ಭಾಗ್ಯ: ಈ ಸಿನಿಮಾ ಮೇಲೆ ಯಾಕೆ ಅನೇಕರಿಗೆ ಕಣ್ಣು?

ಅಂದಹಾಗೆ ಈ ಚಿತ್ರವು ಗಮನಾರ್ಹವಾಗಿ 500 ರಂಗಭೂಮಿ ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸಿದೆ. ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಸಹ ನಿರ್ವಹಿಸಿರುವ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅವರು ವರುಣ್ ಗೌಡ, ಪ್ರಜ್ವಲ್ ಮತ್ತು ಛಾಯಾಗ್ರಾಹಕ ಅರವಿಂದ್ ಎಸ್. ಕಶ್ಯಪ್ ಅವರ ಸಹಯೋಗದೊಂದಿಗೆ ಗುಲ್‌ಮೊಹರ್ ಫಿಲ್ಮ್ಸ್ ಮತ್ತು ವರನ್ ಸ್ಟುಡಿಯೋಸ್ ಬ್ಯಾನರ್‌ಗಳ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.
 

click me!