Spandana Vijay Death: ಸ್ಪಂದನಾ ವಿಜಯರಾಘವೇಂದ್ರ ನಿಧನ, ದೊಡ್ಡಪ್ಪ ಬಿಕೆ ಹರಿಪ್ರಸಾದ್ ರಿಯಾಕ್ಷನ್

By Gowthami K  |  First Published Aug 7, 2023, 12:38 PM IST

ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ನಿಧನಕ್ಕೆ ದೊಡ್ಡಪ್ಪ ಬಿಕೆ ಹರಿಪ್ರಸಾದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು (ಆ.7): ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ನಿಧನಕ್ಕೆ ಬಿಕೆ ಹರಿಪ್ರಸಾದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬಿಕೆ ಹರಿಪ್ರಸಾದ್ ಸ್ಪಂದನಾ ಅವರ ದೊಡ್ಡಪ್ಪನಾಗಿದ್ದು, ಪ್ರವಾಸ ಯಾವಾಗ ಹೋಗಿದ್ದರು ಗೊತ್ತಿಲ್ಲ. ಅವರ ಕಸಿನ್ಸ್ ಮತ್ತು ಪ್ರೆಂಡ್ಸ್ ಹೋಗಿದ್ದರು. ಅಲ್ಲಿ ವಿಜಯರಾಘವೇಂದ್ರ ಅವರ ಶೂಟಿಂಗ್ ಕೂಡ ಇತ್ತು. ಶೂಟಿಂಗ್ ಮುಗಿಸಿ ಜಾಯಿನ್ ಆಗೋ ಹೊತ್ತಿಗೆ ಈ ರೀತಿ ಆಗಿದೆ.  ಹೃದಯಾಘಾತ ಎಂದು ತಿಳಿದುಬಂದಿದೆ.  ರಾತ್ರಿ ವಿಷಯ ಗೊತ್ತಾಗಿದೆ. ಶೂಟಿಂಗ್ ಗಮನಿಸಿಕೊಂಡು ಅಲ್ಲೇ ಜಾಯಿನ್ ಆಗಿದ್ದಾರೆ ಎಂದಿದ್ದಾರೆ.

Breaking: ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ

Tap to resize

Latest Videos

ಸ್ಪಂದನಾ ತಂದೆ ಬಿ.ಕೆ ಶಿವರಾಮ್ ಅವರು ಬ್ಯಾಂಕ್‌ಕ್‌ಗೆ ಹೋಗ್ತಾರ ಎಂಬ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್ , ಇಲ್ಲ. ನಾನೇ ಅಲ್ಲಿಗೆ ಹೋಗ್ತಿನಿ. ಪ್ರಯತ್ನ ಮಾಡ್ತಿದ್ದೀನಿ  ಎಂದಿದ್ದಾರೆ. ಸದ್ಯ ಪೋಸ್ಟ್ ಮಾರ್ಟ್ಂ ಆಗುತ್ತಿದೆ. ಬಳಿಕ ರಿಪೂರ್ಟ್ ಬರುತ್ತದೆ ಎಂದಿದ್ದಾರೆ. ಡಯೆಟ್ ಏನೂ ಇಲ್ಲ. ಆಕೆ ಸ್ಪಲ್ಪ ವೀಕ್ ಇದ್ದಳು. ಯಾವುದೇ ರೂಮರ್ಸ್ ಹಬ್ಬಿಸಬೇಡಿ. ವೈಯಕ್ತಿಕ ಜೀವನವಿದೆ. ಮಗ ಪ್ರವಾಸಕ್ಕೆ ಹೋಗಿಲ್ಲ. ಅವನು ಇಲ್ಲೇ ಇದ್ದಾನೆ. ನಾಳೆ ಆದಷ್ಟು ಬೇಗ ಪಾರ್ಥಿವ ಶರೀರವನ್ನು ತರುವ ಪ್ರಯತ್ನ ನಡೆಸುತ್ತಿದ್ದೇವೆ. ಬಂದ ನಂತರ ಅಂತ್ಯ ಸಂಸ್ಕಾರದ ಬಗ್ಗೆ ಕುಟುಂಬ ನಿರ್ಧಾರ ಮಾಡಲಿದೆ ಎಂದಿದ್ದಾರೆ.

ಇನ್ನು ಸ್ಪಂದನಾ ವಿಜಯ್ ಪಾರ್ಥಿವ ಶರೀರವನ್ನು ಬೆಂಗಲೂರಿಗೆ ತರುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು. ನಟ ರಾಘವೇಂದ್ರ ರಾಜ್‌ಕುಮಾರ್ ಅವರ ನಿವಾಸಕ್ಕೆ ಪೊಲೆಂಡ್ ರಾಯಭಾರ ಕಛೇರಿ ಸಿಬ್ಬಂದಿ ಭೇಟಿ ನೀಡಿದ್ದಾರೆ. ಥೈಲ್ಯಾಂಡ್ ರಾಯಭಾರಿ ಜೊತೆ ರಾಘಣ್ಣ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.  ರಾಯಭಾರ ಕಛೇರಿಯಲ್ಲಿ ಸಂಬಂಧಿಯೊಬ್ಬರು ಕೆಲಸ ಮಾಡುತ್ತಿದ್ದು, ಅವರ ಮುಖಾಂತ ಮಾತುಕತೆ ನಡೆದಿದೆ ಎಂದು ವರದಿ ತಿಳಿಸಿದೆ.

RIP Spandana Vijay: ಸ್ಪಂದನಾ ನಿಧನಕ್ಕೆ ಗಣ್ಯರ ಸಂತಾಪ, ಥಾಯ್ಲೆಂಡ್‌ನಲ್ಲಿ ಮರಣೋತ್ತರ ಪರೀಕ್ಷೆ

ಬ್ಯಾಂಕಾಂಕ್‌ ಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಸ್ಪಂದನಾ ವಿಜಯ್ ರಾಘವೇಂದ್ರ ಅವರು ಆ.6ರಂದು ಲೋ ಬಿಪಿಯಾಗಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ನಾಳೆ ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರವನ್ನು ತೆಗೆದುಕೊಂಡು ಬರಲಾಗುತ್ತದೆ. ಬಳಿಕ ಅಂತ್ಯಸಂಸ್ಕಾರದ ಬಗ್ಗೆ ಕುಟುಂಬಸ್ಥರು ತೀರ್ಮಾನ ಕೈಗೊಳ್ಳಲಿದ್ದಾರೆ. 

click me!