
ಹೆಸರು ಸೌಮ್ಯಾ ಮೆನನ್. ಈಕೆ ಕೇರಳದ ಬ್ಯೂಟಿ. ಈಗಾಗಲೇ ಮಲಯಾಳಂನಲ್ಲಿ ಕಿನವಲ್ಲಿ, ಫ್ಯಾನ್ಸಿ ಡ್ರೆಸ್, ಚಿಲ್ಡ್ರನ್ ಪಾರ್ಕ್ ಹೀಗೆ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ.
"
ಡೆಡ್ಲಿ ಸೋಮ ಚಿತ್ರದ ಬಾಲ ನಟನೇ ಈಗ ಮುತ್ತಪ್ಪ ರೈ;ರವಿ ಶ್ರೀವತ್ಸ ಅವರ ಭೂಗತ ಲೋಕದ ಕತೆ!
ಈಗ ರವಿ ಶ್ರೀವತ್ಸ ನಿರ್ದೇಶನದ ಎಂಆರ್ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಶೋಭ ರಾಜಣ್ಣ ನಿರ್ಮಾಣದ, ಅವರ ಪುತ್ರ ದೀಕ್ಷಿತ್ ನಾಯಕನಾಗಿ ಲಾಂಚ್ ಆಗುತ್ತಿರುವ ಸಿನಿಮಾ ಇದು. ಇತ್ತೀಚೆಗಷ್ಟೆಬೆಂಗಳೂರಿನಲ್ಲಿ ಅದ್ದೂರಿ ಮುಹೂರ್ತ ನಡೆಯಿತು. ಚಿತ್ರರಂಗದ ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಮೂರು ಭಾಗಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ರೌಡಿಸಂ, ಭೂಗತ ಲೋಕದ ಜೊತೆಗೆ ಪ್ರೇಮ ಕತೆಯೂ ಇದೆಯಂತೆ. ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.
ಮುತ್ತಪ್ಪ ರೈ ಬಯೋಪಿಕ್ 'MR' ಚಿತ್ರದ ಮುಹೂರ್ತ!
‘ಮುತ್ತಪ್ಪ ರೈ ಸಿನಿಮಾ ಎಂಬ ಕಾರಣಕ್ಕೆ ಕೇವಲ ಫೈಟ್, ಸಾಹಸ ದೃಶ್ಯಗಳು, ಕ್ರೈಮ್ ಮಾತ್ರ ಇರಲ್ಲ. ಮುತ್ತಪ್ಪ ರೈ ಜೀವನದಲ್ಲಿ ಅದ್ಭುತ ಪ್ರೇಮ ಕತೆಯೂ ಇದೆ. ಇದನ್ನು ಆಪ್ತವಾಗಿ ಕಟ್ಟಿಕೊಡಬೇಕು. ಆ ನಿಟ್ಟಿನಲ್ಲಿ ನಾಯಕಿ ಪಾತ್ರಕ್ಕೆ ತುಂಬಾ ಮಹತ್ವ ಕೊಟ್ಟು ಆಯ್ಕೆ ಮಾಡಿದ್ದೇವೆ. ಸೌಮ್ಯಾ ಮೆನನ್ ನಾನು ಅಂದುಕೊಂಡಿರುವ ಪಾತ್ರಕ್ಕೆ ಸೂಕ್ತ ಅನಿಸಿದ್ದಾರೆ. ಸದ್ಯದಲ್ಲೇ ನಾಯಕಿ ಚಿತ್ರತಂಡ ಸೇರಿಕೊಳ್ಳಲಿದ್ದಾರೆ’ ಎನ್ನುತ್ತಾರೆ ರವಿ ಶ್ರೀವತ್ಸ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.