
ಈಗಷ್ಟೇ ಮುಹೂರ್ತ ಮುಗಿಸಿಕೊಂಡ ಎಸ್‌ಎಲ್‌ವಿ- ಸಿರಿ ಲಂಬೋದರ ವಿವಾಹ ಚಿತ್ರತಂಡ ಸುದ್ದಿಗೋಷ್ಟಿ ಕರೆದಿತ್ತು. ಈ ವೇಳೆ ಸಿನಿಮಾದ ಬಗ್ಗೆ ಮಾತನಾಡಿದ ಸೌರಭ್, ‘ಇದೊಂದು ಸಂಪೂರ್ಣ ಕೌಟುಂಬಿಕ ಮನರಂಜನೆ ನೀಡುವ ಸಿನಿಮಾ. ರಂಗಭೂಮಿಯ ಗೆಳೆಯರೆಲ್ಲ ಸೇರಿ ಚಿತ್ರ ಮಾಡುತ್ತಿದ್ದೇವೆ. ಹಲವರು ಬಂಡವಾಳ ಹೂಡಿದ್ದಾರೆ. ಸೆ.13ರಿಂದ 40 ದಿನಗಳ ಕಾಲ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ’ ಎಂದರು.
ನಾಯಕ ಅಂಜನ್ ಭಾರದ್ವಾಜ್, ‘ಕತೆಗಳೇ ಪಾತ್ರವನ್ನು ಆರಿಸುತ್ತವೆ. ಈ ಕತೆ ಆರಿಸಿದ ಪಾತ್ರ ನಾನು. ಸಿನಿಮಾ ನನ್ನ ಪ್ರತಿದಿನದ ಕನಸು. ರಿಸಲ್‌ಟ್ಗಿಂತ ಪ್ರೊಸೆಸ್ ಕಡೆಗೇ ನಮ್ಮೆಲ್ಲರ ಗಮನವಿರುತ್ತದೆ. ನಾನಿಲ್ಲಿ ವೆಡ್ಡಿಂಗ್ ಪ್ಲಾನರ್ ಸಂಜಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.
ನಾಯಕಿ ದಿಶಾ ರಮೇಶ್, ‘ಸಿನಿಮಾ ನಟನೆಯ ಅನುಭವವಿದ್ದರೂ ನಾನು ಪ್ರತೀ ಸಿನಿಮಾವನ್ನೂ ಜೀರೋದಿಂದ ಶುರು ಮಾಡ್ತೀನಿ. ಇದರಿಂದ ಕಲಿಕೆ, ಹುಡುಕಾಟ ಸಾಧ್ಯವಾಗುತ್ತೆ’ ಎಂದರು. ವರ್ಸ್ಯಾಟೊ ವೆಂಚರ್ಸ್, ಪವಮಾನ ಕ್ರಿಯೇಶನ್‌ಸ್, ಧೂಪದ ದೃಶ್ಯ ತಂಡಗಳು ಚಿತ್ರ ನಿರ್ಮಿಸಿವೆ.
ಹಿರಿಯ ಕಲಾವಿದ ಸಿಹಿಕಹಿ ಚಂದ್ರು, ಮಾಸ್ಟರ್ ಆನಂದ್, ಹರೀಶ್ ಪ್ರಭಾತ್, ಸುಂದರ್ ವೀಣಾ, ಸಿನಿಮಟೋಗ್ರಾಫರ್ ಕಿಟ್ಟಿ ಕೌಶಿಕ್ ಮತ್ತು ಚಿತ್ರತಂಡದವರು ಉಪಸ್ಥಿತರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.