
ಡಾಲಿ ಧನಂಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ರಘು ಮುಖರ್ಜಿ...ದೊಡ್ಡ ತಾರಾ ಬಳಗವನ್ನೇ ಹೊಂದಿರುವ ಹೆಡ್‌ಬುಷ್ ಚಿತ್ರ ತಂಡಕ್ಕೆ ನಟಿ ಶ್ರುತಿ ಹರಿಹರನ್ ಸೇರ್ಪಡೆಯಾಗಿದ್ದಾರೆ. ದೊಡ್ಡ ಬ್ರೇಕ್ ತೆಗೆದುಕೊಂಡು, ಪರ್ಸನಲ್ ಲೈಫ್‌ನಲ್ಲಿ ಬ್ಯುಸಿಯಾಗಿದ್ದ ಶ್ರುತಿ ಈ ಚಿತ್ರಕಥೆ ಒಪ್ಪಿಕೊಳ್ಳಲು ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ.
'ಧನಂಜಯ್ ನನಗೆ ಮೊದಲು ಕರೆ ಮಾಡಿ ಈ ಪಾತ್ರಕ್ಕೆ ನಾನೇ ಸೂಕ್ತ ಎಂದು ಹೇಳಿದ್ದರು. ನಾನು ಮಗಳ ಬಗ್ಗೆ ಗಮನ ಹರಿಸುತ್ತಿದ್ದ ಕಾರಣ ಪಾತ್ರ ಆಯ್ಕೆ ಬಗ್ಗೆ ತುಂಬಾ ಚಾಲೆಂಜಿಂಗ್ ಆಗಿತ್ತು. ಈ ಹಿಂದೆ ಮಾಡಿರುವ ಪಾತ್ರಗಳನ್ನು ಮತ್ತೆ ಮಾಡಲು ನನಗೆ ಮೂಡ್ ಇರಲಿಲ್ಲ. ಕೊನೆಗೂ ನಾನು ಹೆಡ್‌ಬುಷ್ ಮುಖ್ಯ ತಂಡವನ್ನು ಭೇಟಿ ಮಾಡಿ, ಕಥೆ ಕೇಳಿದೆ. ಪಾತ್ರ ಹೇಗೆ ಬರೆದಿದ್ದಾರೆ ಹಾಗೂ ಆನ್‌ಸ್ಕ್ರೀನ್ ಹೇಗೆ ಕಾಣಿಸುತ್ತೇನೆ ಎಂದು ತಿಳಿದುಕೊಂಡೆ. ನಾನು ತುಂಬಾ ಸ್ಟ್ರಾಂಗ್, ಬೋಲ್ಡ್ ಆಗಿ ಹೊರ ಬರುತ್ತಿರುವ ಕಾರಣ ನನ್ನ ಪಾತ್ರವನ್ನು ನನಗೆ ತಕ್ಕಂತೆ ಬದಲಾಯಿಸಿಕೊಳ್ಳಲು ಇಡೀ ತಂಡ ಅನುಮತಿ ನೀಡಿತ್ತು,' ಎಂದು ಶ್ರುತಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.
'ನಾನು ನನ್ನ ನಿಜ ಜೀವನದ ಪಾತ್ರವನ್ನು ಆನ್ ಸ್ಕೀನ್‌ನಲ್ಲಿ ಎಂದೂ ಮಾಡಿರಲಿಲ್ಲ. ನಿಜ ಜೀವನದ ಪಾತ್ರದ ಜೊತೆ ಸ್ವಲ್ಪ ಇಮ್ಯಾಜಿನೇಷನ್ ಸೇರಿಸಲಾಗಿದೆ. ನಾನು ಅಗ್ನಿ ಶ್ರೀಧರ್ ಸರ್‌ನ ಪದೇ ಪದೇ ಕೇಳುತ್ತಿದ್ದೆ, ಯಾವ ಕಾರಣಕ್ಕೆ ಆಕೆ ಈ ರೀತಿ ಮಾಡಿದಲು ಇದರ ಹಿಂದಿನ ಉದ್ದೇಶ ಏನು ಎಂದು. 70ರ ದಶಕದ ಮಹಿಳೆಯ ಪಾತ್ರಕ್ಕೆ ಜೀವ ತುಂಬಲಿದ್ದೇನೆ,' ಎಂದು ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.