
ಇಂದು (15 December 2024) ಕರುನಾಡ ಚಕ್ರವರ್ತಿ ಖ್ಯಾತಿಯ ನಟ ಶಿವರಾಜ್‌ಕುಮಾರ್ (Shiva Rajkumar) ನಟನೆಯ 'ಭೈರತಿ ರಣಗಲ್' ಚಿತ್ರವು (Bhairathi Ranagal) ಹಲವು ಕಡೆಗಳಲ್ಲಿ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದು, ಉತ್ತಮ ಕಲೆಕ್ಷನ್ ಮಾಡುವತ್ತ ಭೈರತಿ ರಣಗಲ್ ಹೆಜ್ಜೆ ಹಾಕಿದೆ ಎನ್ನಲಾಗುತ್ತಿದೆ. ನರ್ತನ್ ನಿರ್ದೇಶನದ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಈ ಚಿತ್ರವು ಶಿವಣ್ಣರ ಬದುಕಿನ ಹೊಸ ಮೈಲಿಗಲ್ಲು ಆದರೂ ಅಚ್ಚರಿಯೇನಿಲ್ಲ ಎನ್ನಲಾಗುತ್ತಿದೆ!
ಈ ಚಿತ್ರದ ಪ್ರಚಾರ ಕಾರ್ಯಕ್ಕೆ ನಾಯಕ ನಟ ಶಿವರಾಜ್‌ಕುಮಾರ್, ಶಿವಣ್ಣ ಪತ್ನಿ ಹಾಗೂ ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ (Geetha Shivarajkumar) ಇಬ್ಬರೂ ಹಲವು ಕಡೆ ಹೋಗಿದ್ದಾರೆ. ಹೋಂ ಪ್ರೊಡಕ್ಷನ್ ಆಗಿರುವ ಕಾರಣಕ್ಕೆ ನಟ ಶಿವಣ್ಣರ ಜೊತೆ ಗೀತಾ ಕೂಡ ಸಾಥ್ ನೀಡಿದ್ದಾರೆ. ಈ ವೇಳೆ ಸಂದರ್ಶನಗಳಲ್ಲಿ ಹಾಗೂ 'ಭೈರತಿ ರಣಗಲ್'ಪ್ರೀ-ರಿಲೀಸ್ ವೇಳೆ ನಟ ಶಿವರಾಜ್‌ಕುಮಾರ್ ಅವರು ತಮ್ಮ ತಾಯಿ ಪಾರ್ವತಮ್ಮ ರಾಜ್‌ಕುಮಾರ್ (Parvathamma Rajkumar) ಹಾಗೂ ಪತ್ನಿ ಗೀತಾ ಅವರಿಬ್ಬರನ್ನೂ ಹೋಲಿಸಿ ಮಾತನ್ನಾಡಿದ್ದಾರೆ. ಹಾಗಿದ್ದರೆ ಶಿವಣ್ಣ ಅದೇನು ಹೇಳಿದ್ದಾರೆ ನೋಡಿ..
ಅನುಶ್ರೀ ಮುಂದೆ ಮೈಸೂರಿನ ಶಕ್ತಿಧಾಮದಲ್ಲಿ ಪತ್ನಿ ಗೀತಾಗೆ ಕಣ್ಣೀರು ಹಾಕಿಸಿದ ಶಿವಣ್ಣ!
'ಜನುಮದ ಜೋಡಿ' ಚಿತ್ರದ ನಿರ್ಮಾಪಕಿ ನನ್ನ ತಾಯಿ. 'ಭೈರತಿ ರಣಗಲ್' ಚಿತ್ರದ ನಿರ್ಮಾಪಕಿ ನನ್ನ ಶ್ರೀಮತಿ. ಪತ್ನಿಯೂ ಒಮ್ಮೊಮ್ಮೆ ತಾಯಿ ಆಗ್ತಾರೆ. ನನ್ನ ಪಾಲಿಗೆ ನನ್ನ ಶ್ರೀಮತಿ ಗೀತಾ ಎಲ್ಲವೂ ಆಗಿದ್ದಾರೆ. ಎಲ್ಲಾ ರೀತಿಯಲ್ಲೂ ಚೆನ್ನಾಗಿ ನೋಡ್ಕೋತಾರೆ. ನನ್ನ ತಾಯಿ ಇಲ್ಲದಿದ್ದರೂ ಆ ತಾಯಿ ಸ್ಥಾನವನ್ನು ಗೀತಾ ತುಂಬುತ್ತಿದ್ದಾರೆ. ಅದಕ್ಕೆ ನಾನು ಯಾವತ್ತೂ ಚಿರೃಉಣಿಯಾಗಿರುತ್ತೇನೆ' ಎಂದು ಭೈರತಿ ರಣಗಲ್ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್ ಅವರು ತಾಯಿ ಹಾಗೂ ಪತ್ನಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಆದರೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು 'ಶಿವಣ್ಣ ಅವರು ಭಾವನಾತ್ಮಕವಾಗಿ ಹಾಗೆ ಹೇಳಿದ್ದಾರೆ, ಅದರಲ್ಲಿ ತಪ್ಪಿಲ್ಲ. ಆದರೆ ಸತ್ಯ ಸಂಗತಿ ಏನೆಂದರೆ ತಾಯಿ ಹಾಗು ಪತ್ನಿ ಇಬ್ಬರೂ ಒಂದೇ ಆಗಲು ಸಾಧ್ಯವೇ ಇಲ್ಲ. ಯಾರ ಸ್ಥಾನವನ್ನೂ ಇನ್ಯಾರೂ ರೀಪ್ಲೇಸ್ ಮಾಡಲು ಸಾಧ್ಯವಿಲ್ಲ. ಸಿಂಪಲ್ ಆಗಿ ಹೇಳಬೇಕು ಎಂದರೆ ಇದೊಂಥರಾ ಪ್ಯಾಂಟ್-ಶರ್ಟ್ ಹೋಲಿಕೆ ಮಾಡಿದಂತೆ. ಪ್ಯಾಂಟ್ ಹಾಗೂ ಶರ್ಟ್ ಸಂಪೂರ್ಣ ಭಿನ್ನ. ಆಯಾ ಸಂದರ್ಭ, ಸಮಯಕ್ಕೆ ಸರಿಯಾಗಿ ಎರಡೂ ಮುಖ್ಯವೇ. ಆದರೆ ಅವೆರಡೂ ಒಂದೇ ಆಗಲಿಕ್ಕೆ ಅಥವಾ ಒಂದು ಇನ್ನೊಂದರ ಬದಲು ಬರೋದಕ್ಕೆ ಸಾಧ್ಯವಿಲ್ಲ' ಎಂದಿದ್ದಾರೆ.
ಶಂಕರ್ ನಾಗ್ ಸಾವಿನ ಬಗ್ಗೆ ಇಂದಿಗೂ ಸಂಶಯ ಯಾಕೆ? ಅಲ್ಲಿ ಉತ್ತರ ಸಿಗದ ಪ್ರಶ್ನೆಗಳು ಇವೆಯಲ್ಲ!
ಒಟ್ಟಿನಲ್ಲಿ, ನಟ ಶಿವಣ್ಣರ ಸಿನಿಮಾ ಜರ್ನಿಯಲ್ಲಿ ಈ ಭೈರತಿ ರಣಗಲ್ ಹೊಸ ಮೈಲಿಗಲ್ಲು ಆಗಲು ಹೊರಟಿದೆ. ಇದೇ ವೇಳೆ ಶಿವಣ್ಣರಿಗೆ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಎದುರಾಗಿದ್ದು ಅವರು ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದಾರೆ. 'ಜನವರಿಯಲ್ಲಿ ಅಮೆರಿಕಾಗೆ ಹೋಗಿ ಟ್ರೀಟ್‌ಮೆಂಟ್ ಹಾಗೂ ಸರ್ಜರಿಗೆ ಒಳಗಾಗಲಿದ್ದೇನೆ' ಎಂದು ಸ್ವತಃ ನಟ ಶಿವರಾಜ್‌ಕುಮಾರ್ ಹಲವು ಕಡೆಗಳಲ್ಲಿ ಹೇಳಿದ್ದಾರೆ. ಬಳಿಕ, ಈಗಾಗಲೆ ಒಪ್ಪಿಕೊಂಡಿರುವ ಸಿನಿಮಾಗಳ ಶೂಟಿಂಗ್‌ನಲ್ಲಿ ಶಿವಣ್ಣ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಸದ್ಯ ಕರುನಾಡಿನಲ್ಲಿ ಭೈರತಿ ರಣಗಲ್ ಹಬ್ಬ ನಡೆಯುತ್ತಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.