ಮತ್ತೆ ಪ್ರಥಮ್ ಜೊತೆ ದರ್ಶನ್ ಫ್ಯಾನ್ಸ್‌ ಕಿರಿಕ್;ಮುಚ್ಕೊಂಡು ಇರೋಕೆ ಏನೋ ರೋಗ ನಿಮ್ಗೆ ಎಂದು ವಾರ್ನಿಂಗ್ ಕೊಟ್ಟ ನಟ!

Published : Nov 16, 2024, 10:38 AM IST
ಮತ್ತೆ ಪ್ರಥಮ್ ಜೊತೆ ದರ್ಶನ್ ಫ್ಯಾನ್ಸ್‌ ಕಿರಿಕ್;ಮುಚ್ಕೊಂಡು ಇರೋಕೆ ಏನೋ ರೋಗ ನಿಮ್ಗೆ ಎಂದು ವಾರ್ನಿಂಗ್ ಕೊಟ್ಟ ನಟ!

ಸಾರಾಂಶ

ಮತ್ತೆ ಒಳ್ಳೆ ಹುಡುಗ ಪ್ರಥಮ್ ಜೊತೆ ಕಿರಿಕ್ ಮಾಡಿಕೊಂಡ ದರ್ಶನ್ ಅಭಿಮಾನಿಗಳು. ಸಾಕ್ಷಿ ಸಮೇತ ದೂರು ನೀಡುವುದಾಗಿ ವಾರ್ನಿಂಗ್ ಕೊಟ್ಟ ದೇವಥಾ ಮನುಷ್ಯ....  

ಕನ್ನಟ ಚಿತ್ರರಂಗದ ನಟ, ನಿರ್ದೇಶಕ ಹಾಗೂ ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಎರಡನೇ ಸಲ ಕಿರಿಕ್ ಆಗಿದೆ. ಆದರೆ ಈ ಸಲ ತುಂಬಾ ಬೇಸರದಿಂದ ಸೋಷಿಯಲ್ ಮೀಡಿಯಾದಲ್ಲಿ ಘಟನೆಯನ್ನು ಪ್ರಥಮ್ ವಿವರಿಸಿ ಬರೆದುಕೊಂಡಿದ್ದಾರೆ. 

ಪ್ರಥಮ್ ಪೋಸ್ಟ್‌:

'ಸಂಜೆ ಗ್ರಾಮಾಂತರದ ಪ್ರತಿಷ್ಠಿತ ಹೋಟೆಲ್‌ನಲ್ಲಿ ಆಪ್ತರೊಟ್ಟಿಗೆ ಊಟಕ್ಕೆ ಕೂತಿದ್ದೆ. ಕೆಲವರು ಫೋಟೋ ತಗೊಂಡ್ರು; ಜೈ ಡಿ ಬಾಸ್ ಅಂತ ಬಲವಂತವಾಗಿ ಕೂಗೋಕೆ ಹೇಳಿ ಗಲಾಟೆ ಕೂಗಿದ್ರು; ಒಳ್ಳೇದಾಗ್ಲಪ್ಪ ಅಂದೆ; ಅಶ್ಲೀಲ ಪದ ಬಳಸಿ ಕೈ ಮೀಲಾಯಿಸೋಕೆ ಬಂದ್ರು. ಅಲ್ಲಿದ್ದ 8 ಜನ ಬೌನ್ಸರ್‌ ಆ ಗೂಂಡಾಗಳನ್ನು ಎಳೆದು ಹೊರಗೆ ತಳ್ಳಿದ್ರು; ಕ್ಷಮೆ ಕೇಳಿದ್ರು. ಬಿಟ್ಟಿದ್ದೀನಿ'

'ಕಳಪೆ' ಪಟ್ಟಕ್ಕೆ ಹೆದರಿ ಬಾತ್‌ರೂಮ್‌ನಲ್ಲಿ ಪ್ರಜ್ಞೆ ತಪ್ಪಿದ್ದು ನಾಟಕ; ಚೈತ್ರಾ ಕುಂದಾಪುರ ವಿರುದ್ಧ ನೆಟ್ಟಿಗರ ಆಕ್ರೋಶ

ಹೋಟೆಲ್‌ನ ಎಲ್ಲಾ ಸಿಬ್ಬಂದಿ ಹಾಗೂ ಮ್ಯಾನೇಜರ್‌ ಮನವಿ ಮೇರೆಗೆ ನಾನು ಕಂಪ್ಲೇಂಟ್ ಕೊಡಬಾರದು ಅಂತ ನಿರ್ಧರಿಸಿದೆ. ನಮ್ಮ ಪಾಡಿಗೆ ನಾವಿದ್ದೇವೆ ನಿಮ್ಮ ಪಾಡಿಗೆ ನೀವಿರಿ. ದರ್ಶನ್ ಸರ್ ಅವ್ರ ಪಾಡಿಗೆ ಇದ್ದಾರೆ ಆದರೆ ಈ ಮಿನಿ ಗೂಂಡಾಗಳ ನಿಗರಾಟ ನೋಡೋಕಾಗ್ತಿಲ್ಲ. ಹೇಗಿದ್ರೂ ಹೋಟೆಲ್‌ನಲ್ಲಿ ಸಿಸಿಟಿವಿ ಇದೆ. ಇದು ಹೀಗೆ ಮುಂದುವರೆದರೆ ನಾನಂತು ಸುಮ್ಮನೆ ಕೂರಲ್ಲ. ಈ ದರ್ಶನ್ ಸರ್ ಅವರ ಪಾಡಿಗೆ ಅವರಿದ್ರೂ ಈ ಮಿನಿ ಗೂಂಡಗಳು ನೆಮ್ಮದಿಯಾಗಿರೋಕೆ ಬಿಡಲ್ಲ ಅನ್ಸುತ್ತೆ. ಎಲ್ಲವೂ ಸಿಸಿಟಿವಿ ರೆಕಾರ್ಡ್ ಆಗಿದೆ ಒತ್ತಾಯದಿಂದ ಜೈ ಡಿ ಬಾಸ್ ಅನ್ನಿಸೋದು ಬಲವಂತವಾಗಿ ಅಶ್ಲೀಲ ಪದ ಬಳಸೋದು ನೋಡ್ತಾ ಇರೋಕಾಗಲ್ಲ. ನಾನು ಒಂದು ಕಂಪ್ಲೇಂಟ್ ಕೊಟ್ರೆ ಕಂಬಿ ಎಣಿಸಬೇಕಾಗುತ್ತದೆ. ಮುಚ್ಕೊಂಡು ಮೈ ಬಗ್ಗಿಸಿ ದುಡಿದು ಚೆನ್ನಾಗಿ ಬದುಕಿ. 

ಕೈ ತುಂಬಾ ಸಂಬಳ ಸಿಗೋ ಕೆಲಸ ಬಿಟ್ಟು ಸೀರಿಯಲ್ ಒಪ್ಪಿದ್ದಕ್ಕೆ 'ಕರಿಮಣಿ' ನಟಿ ಸ್ಪಂದನಾ

ಇದು 2ನೇ ಟೈಂ ಆಗುತ್ತಿರುವುದು. ನಾನು ಒಂದು ಕಂಪ್ಲೇಂಟ್ ಕೊಟ್ರೆ ಚೈಲು ಕೇಸ್ ಅಂತ ಅಲಿಬೇಕಾಗುತ್ತದೆ. ಅಲ್ಲಿದ್ದ ನಾಲ್ಕು ಪುಡಿರೌಡಿಗಳ ಫ್ಯಾಮಿಲಿ ನೆನಪಿಸಿಕೊಂಡು ಸುಮ್ಮನಿದ್ದೀನಿ. ಕಿರುಚಾಡಿದ್ದ ವಿಡಿಯೋ, ಮಿಸ್‌ ಬಿಹೇವ್‌ ಮಾಡಿದ್ದು ಎಲ್ಲವೂ ಇದೆ. ಸುಮ್ಮನೆ ಮುಚ್ಕೊಂಡು ಇರೋಕೆ ಏನೋ ರೋಗ ನಿಮ್ಗೆ? ಬದುಕು ಸುಂದರವಾದದ್ದು ಹಾಳು ಮಾಡಿಕೊಳ್ಳಬೇಡಿ. 

 

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ