ಒಂದೇ ಹಾಡಿನಲ್ಲಿ ಕನ್ನಡದ 6 ನಟಿಯರು; ಮ್ಯೂಸಿಕಲ್ ಹಿಟ್ ಸಿನಿಮಾದ ಸೂಪರ್ ಸಾಂಗ್!

Published : Apr 05, 2025, 09:55 AM ISTUpdated : Apr 05, 2025, 10:45 AM IST
ಒಂದೇ ಹಾಡಿನಲ್ಲಿ ಕನ್ನಡದ 6 ನಟಿಯರು; ಮ್ಯೂಸಿಕಲ್ ಹಿಟ್ ಸಿನಿಮಾದ ಸೂಪರ್ ಸಾಂಗ್!

ಸಾರಾಂಶ

Kannada Movie Actress: ಒಂದೇ ಹಾಡಿನಲ್ಲಿ ರಚಿತಾ ರಾಮ್, ಸಂಯುಕ್ತ ಹೊರನಾಡ, ರಾಧಿಕಾ ಚೇತನ್, ಶಾನ್ವಿ ಶ್ರೀವಾಸ್ತವ್, ಭಾವನಾ ರಾವ್ ಮತ್ತು ಶ್ರದ್ಧಾ ಶ್ರೀನಾಥ್ ಹೆಜ್ಜೆ ಹಾಕಿದ್ದಾರೆ.

ಬೆಂಗಳೂರು: 90ರ ದಶಕದಲ್ಲಿ ಮಲ್ಟಿ ಸ್ಟಾರ್‌ ನಟನೆಯ ಸಿನಿಮಾಗಳು ಹೆಚ್ಚಾಗಿ ಬರುತ್ತಿದ್ದವು. ಇಂದು ಕ್ರಮೇಣ ಈ ಟ್ರೆಂಡ್ ಕಡಿಮೆಯಾಗಿದೆ. ಜೇನುಗೂಡು, ಹಬ್ಬ, ಕೋದಂಡರಾಮ, ಕೋತಿಗಳು ಸಾರ್ ಕೋತಿಗಳು, ಪಾಂಡವರು, ಒಡಹುಟ್ಟಿದವರು, ಸಂಯುಕ್ತ ಹೀಗೆ ಹಲವು ಮಲ್ಟಿ ಸ್ಟಾರ್ ನಟನೆಯ ಚಿತ್ರಗಳು ಬಿಡುಗಡೆಯಾಗಿ ಯಶಸ್ವಿಯಾಗಿವೆ. ಇಂದು ಸೂಪರ್ ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ತರುವ ಪ್ರಯತ್ನಗಳು ಕಡಿಮೆಯಾಗಿವೆ. ಆದ್ರೆ ನಿರ್ದೇಶಕ ಪ್ರೇಮ್, ಒಂದೇ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ತಂದಿದ್ದರು. ಈ ಇಬ್ಬರು ಸ್ಟಾರ್‌ಗಳು ನಟನೆಯ ವಿಲನ್ ಮ್ಯೂಸಿಕಲ್ ಹಿಟ್ ಸಿನಿಮಾವಾಗಿತ್ತು.

ಈ ಚಿತ್ರದಲ್ಲಿ ಆಮಿ ಜಾಕ್ಸನ್ ಪ್ರಮುಖ ನಟಿಯಾಗಿ ಕಾಣಿಸಿದ್ದರು. ಚಿತ್ರ ಬೋಲೋ ಬೋಲೋ  ರಾಮಪ್ಪ ಹಾಡಿನಲ್ಲಿ ಶಿವರಾಜ್‌ಕುಮಾರ್ ಜೊತೆಯಲ್ಲಿ ಬರೋಬ್ಬರಿ ಆರು ನಟಿಯರು ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ಶಿವರಾಜ್‌ಕುಮಾರ್‌ ಮದುವೆಗೆ ಹೆಣ್ಣು ಹುಡುಕುತ್ತಿರುತ್ತಾರೆ. ಕಥೆಯ ರೂಪದಲ್ಲಿರುವ ಈ ಹಾಡಿನಲ್ಲಿ ರಚಿತಾ ರಾಮ್, ಸಂಯುಕ್ತ ಹೊರನಾಡ, ರಾಧಿಕಾ ಚೇತನ್, ಶಾನ್ವಿ ಶ್ರೀವಾಸ್ತವ್, ಭಾವನಾ ರಾವ್ ಮತ್ತು ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ.

ರಚಿತಾ ರಾಮ್
ಮಂಡ್ಯ ಹುಡುಗಿಯಾಗಿ ರಚಿತಾ ರಾಮ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆಯಲ್ಲಿ ಬುಲ್ ಬುಲ್ ರಚಿತಾ ರಾಮ್ ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದಾರೆ. 

ಸಂಯುಕ್ತಾ ಹೊರನಾಡ್
ಇದೇ ಹಾಡಿನಲ್ಲಿ ನಟಿ ಸಂಯುಕ್ತಾ ಹೊರನಾಡ್ ಮೈಸೂರು ಹುಡುಗಿಯಾಗಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮೈಸೂರು ಹುಡುಗಿ ಬೇಡ ಕಣವ್ವ.. ಚಾಮುಂಡಿ ರೂಪ ಎಂದು ಶಿವರಾಜ್‌ಕುಮಾರ್ ಹೇಳುತ್ತಾರೆ.

ರಾಧಿಕಾ ಚೇತನ್ 
ಇನ್ನು ರಂಗಿತರಂಗ ಖ್ಯಾತಿಯ ರಾಧಿಕಾ  ಚೇತನ್ ಸಹ ವಿಲನ್ ಚಿತ್ರದ ಹಾಡಿನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಕೊಡಗಿನ ಶೈಲಿಯಲ್ಲಿ ಸೀರೆ ಧರಿಸಿ, ಕೈಯಲ್ಲಿ ಕೋವಿ ಹಿಡಿದು ರಗಡ್ ಲುಕ್ ನೀಡಿದ್ದಾರೆ. ಕೊಡಗಿನ ಕುವರಯಾಗಿ ತುಂಬಾ ಸುಂದರವಾಗಿ ರಾಧಿಕಾ ಚೇತನ್ ಕಾಣಿಸಿದ್ದಾರೆ. ಕೊಡಗಿನವಳು ಅಂತ ಬೇಡ ಅಕ್ಕ. ಕೈಯಲ್ಲಿ ಕೋವಿ ನೋಡಕ್ಕ ಎಂದು ಶಿವರಾಜ್‌ಕುಮಾರ್ ಹಾಡಿನಲ್ಲಿ ಹೇಳುತ್ತಾರೆ.

ಶಾನ್ವಿ ಶ್ರೀವಾಸ್ತವ್
ಇನ್ನು ಕ್ಯೂಟ್ ಗರ್ಲ್ ಶಾನ್ವಿ ಶ್ರೀವಾಸ್ತವ್ ಮಾಡರ್ನ್ ಡ್ರೆಸ್‌ನಲ್ಲಿ ಮಿಂಚಿದ್ದು, ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದಾರೆ. ಬೆಂಗಳೂರು ಹುಡುಗಿ ನೋಡ್ಲಾ ಮಗ... ಮಂಡಿಗಟ್ಟ ಲಂಗ ಹಾಕವ್ಳೆ ಎಂದು ಹೇಳುತ್ತಾರೆ. ಇದಕ್ಕೆ ಶಿವರಾಜ್‌ಕುಮಾರ್ ಬೆಂಗಳೂರು ಹುಡುಗಿಯೂ ಬೇಡ, ಕುಡುಕೊಂಡು ಬಂದು ಹೊಡಿತಾಳೆ ಅಂತಾರೆ.

ಇದನ್ನೂ ಓದಿ: ರಶ್ಮಿಕಾಗೆ ಮುಟ್ಟಿ ನೋಡ್ಕೊಳ್ಳೋ ಹಾಗೆ ತಿರುಗೇಟು ಕೊಟ್ಟಿದ್ರೊಮ್ಮೆ ರಿಷಬ್!

ಭಾವನಾ ರಾವ್
ಇನ್ನು ಭಾವನಾ ರಾವ್ ಉತ್ತರ ಕರ್ನಾಟಕ ಶೈಲಿಯಲ್ಲಿ ಕಚ್ಚೆ ಧರಿಸಿ  ಹುಬ್ಬಳ್ಳಿ ಪೋರಿಯಾಗಿ ಮಿಂಚಿದ್ದಾರೆ. ಶಿವರಾಜ್‌ಕುಮಾರ್ ನನಗೆ ಹುಬ್ಬಳ್ಳಿ ಹುಡುಗಿ ಬೇಡ, ಖಾರ ಜಾಸ್ತಿ ಎಂದು ಶಿವರಾಜ್‌ಕುಮಾರ್ ಹೇಳುತ್ತಾರೆ.

ಶ್ರದ್ಧಾ ಶ್ರೀನಾಥ್ 
ಇನ್ನೂ ಶ್ರದ್ಧಾ ಶ್ರೀನಾಥ್ ಕೈಯಲ್ಲಿ ಮೀನು ಹಿಡಿದುಕೊಂಡು ಕುಡ್ಲದ ಕುವುರಿಯಾಗಿ ಕಾಣಿಸಿದ್ದಾರೆ. ಮಂಗಳೂರು ಹುಡುಗಿಯೂ ಬೇಡ ಕಣೇ, ಸಿನಿಮಾ ಶೋಕಿ ಜಾಸ್ತಿ ಎಂದು ಶಿವರಾಜ್‌ಕುಮಾರ್ ಹಾಡಿನಲ್ಲಿ ಹೇಳುತ್ತಾರೆ.

ಇದನ್ನೂ ಓದಿ: ಕಿಪಿ ಕೀರ್ತಿಗೆ ಕೂಡಿಬಂತು ಕಂಕಣ ಭಾಗ್ಯ; ಯಾರೆಲೆ ನಿನ್ನ ಮೆಚ್ಚಿದವನು, ತಾಳಿ ಕಟ್ಟುವವನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!