'ಬ್ಯಾಂಗ್' ಚಿತ್ರದಲ್ಲಿ ಡಾನ್: ನಟನೆಗೆ ಎಂಟ್ರಿ ಕೊಟ್ಟ ಗಾಯಕ ರಘು ದೀಕ್ಷಿತ್!

Suvarna News   | Asianet News
Published : Jul 16, 2021, 12:34 PM ISTUpdated : Jan 18, 2022, 04:45 PM IST
'ಬ್ಯಾಂಗ್' ಚಿತ್ರದಲ್ಲಿ ಡಾನ್: ನಟನೆಗೆ ಎಂಟ್ರಿ ಕೊಟ್ಟ ಗಾಯಕ ರಘು ದೀಕ್ಷಿತ್!

ಸಾರಾಂಶ

ನಟನೆಗೆ ಎಂಟ್ರಿ ಕೊಟ್ಟಿರುವ ಗಾಯಕ ರಘು ದೀಕ್ಷಿತ್ ಪಾತ್ರದ ಬಗ್ಗೆ ರಿವೀಲ್ ಆಗಿದೆ. ಸ್ಟೈಲಿಶ್ ಗಾಯಕ ಈಗ ಸ್ಟೈಲಿಶ್ ವಿಲನ್ .....

ನಟಿ ಶಾನ್ವಿ ಶ್ರೀವಾಸ್ತವ ಅಭಿನಯದ 'ಬ್ಯಾಂಗ್' ಚಿತ್ರದಲ್ಲಿ ಗಾಯಕ ರಘು ದೀಕ್ಷಿತ್ ಸ್ಟೈಲಿಶ್ ಗ್ಯಾಂಗ್‌ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೆಲವೊಂದು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರಘು ಇದೇ ಮೊದಲ ಬಾರಿ ತೆರೆ ಮೇಲೆ ಹೆಚ್ಚಿನ ಸಮಯ ಹಾಗೂ ಸ್ಕೋಪ್ ಹೊಂದಿರುವ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ವೇದಿಕೆ ಮೇಲೆ ಪಂಚೆ ತೊಟ್ಟು ಬಂದ ಗಾಯಕ ಗ್ಯಾಂಗ್‌ಸ್ಟರ್ ಆಗಿ ಹೇಗೆ ಬರಲಿದ್ದಾರೋ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಬ್ಯಾಂಗ್ ಚಿತ್ರದ ಡೈರೆಕ್ಟರ್ ರಿತ್ವಿಕ್ ಮುರಳೀಧರ್ ಮತ್ತು ನಿರ್ದೇಶಕ ಶ್ರೀಗಣೇಶ್ ಸ್ಟೈಲಿಶ್ ವಿಲನ್ ಪಾತ್ರದಲ್ಲಿ ನಟಿಸಲು ರಘು ದೀಕ್ಷಿತ್ ಅವರನ್ನು ಆರಂಭದಲ್ಲಿ ಸಂಪರ್ಕಿಸಿದ್ದಾಗ, 'ಸುಮ್ಮನೆ ತಲೆ ತಿನ್ನಬೇಡಿ ಎದ್ದು ಹೋಗಿ,' ಎಂದಿದ್ದರಂತೆ. ಒಳ್ಳೆಯ ಮನಸ್ಸಿರುವ ಸ್ಟೈಲಿಶ್ ಡಾನ್ ಪಾತ್ರ ಇದಾಗಿದ್ದು, ರಘುನೇ ಮಾಡಬೇಕೆಂದು ಒಪ್ಪಿಸಿದ್ದಾರಂತೆ. ಡಾನ್ ಪಾತ್ರ ಆಗಿರುವ ಕಾರಣ ರಘು ಚಿತ್ರದಲ್ಲಿ ಫೈಟಿಂಗ್ ಮಾಡಬೇಕಿದೆ. ಹೀಗಾಗಿ ಈಗಿಂದಲೇ ಮಾರ್ಷಲ್ ಆರ್ಟ್ಸ್‌ ಹಾಗೂ ಫೈಟಿಂಗ್ ದೃಶ್ಯಗಳಲ್ಲಿ ನಟಿಸಲು ಪ್ರಾಕ್ಟಿಸ್ ಮಾಡುತ್ತಿದ್ದಾರಂತೆ. 

ರಾಜ್‌ಕುಮಾರ್ ಮೊಮ್ಮಗಳ ಚಿತ್ರಕ್ಕೆ ರಘು ದೀಕ್ಷಿತ್ Rap ಸಾಂಗ್; 'ಈ ನಶೆಯೂ ಹೇಳಿದೆ ಪತ್ತೆಯಾ..'

'ಕ್ರಿಯೇಟಿವ್ ಮನಸ್ಸು ಸುಮ್ಮನೆ ಇರಬಾರದು ಎಂದು ಒಪ್ಪಿಕೊಂಡಿದ್ದೇನೆ. ಜನ ಇಷ್ಟ ಪಡುವಂತಹ ಪಾತ್ರ ಇದಾಗುತ್ತದೆ ಎಂಬ ನಂಬಿಕೆ ಇದೆ. ಬ್ಯಾಂಗ್ ಚಿತ್ರದಲ್ಲಿ ನನ್ನದು ವಿಶೇಷವಾದ ಪಾತ್ರ. ಅದಕ್ಕಾಗಿ ಕೊಂಚ ದಪ್ಪ ಆಗಿದ್ದೇನೆ. ಮುಂದಿನ ದಿನಗಳಲ್ಲಿ ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತಾ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಳ್ಳುತ್ತೇನೆ. ವಯಸ್ಸಾದ ಮೇಲೆ ಚಿಕ್ಕ ಮಕ್ಕಳಿಗೆ ನಾನು ಇಷ್ಟೆಲ್ಲಾ ಕೆಲಸಗಳನ್ನು ಮಾಡಿದ್ದೆ ಎಂದು ಹೇಳಬೇಕು,' ಎಂದು ರಘು ದೀಕ್ಷಿತ್ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್