
ಬೆಂಗಳೂರು(ಜು.16): ನಟ ದರ್ಶನ್ ಒಳ್ಳೆಯ ವ್ಯಕ್ತಿ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಡಿಬಾಸ್‌ನನ್ನು ಸಮರ್ಥಿಸಿಕೊಂಡಿರು ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿರೋ ವಿಚಾರದ ಬಗ್ಗೆ ಈಗ ಬಿಸಿ ಪಾಟೀಲ್ ಅವರೂ ಮಾತನಾಡಿದ್ದಾರೆ.
ದರ್ಶನ್ ಅವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ, ದರ್ಶನ್ ಬಹಳ ಕಷ್ಟದಿಂದ ಬೆಳೆದು ಈ ಮಟ್ಟಕ್ಕೆ ಬಂದಿದಾರೆ. ಅವರ ತೇಜೋವಧೆ ಮಾಡಲು ಕೆಲವರು ಪ್ರಯತ್ನ ಪಟ್ಟಂತೆ ಕಾಣುತ್ತದೆ. ಹೊಸಬರನ್ನು ಚಿತ್ರರಂಗದಲ್ಲಿ ಪ್ರೋತ್ಸಾಹ ಮಾಡುವ ಕೆಲಸ ದರ್ಶನ್ ಮಾಡ್ತಿದಾರೆ ಎಂದಿದ್ದಾರೆ.
ಒಂದಾದ್ರು ಉಮಾಪತಿ-ಭೂಪತಿ..! ಸ್ನೇಹಿತರು ರಾಜಿ
ಯಾವುದೇ ಕಾರಣಕ್ಕೂ ದರ್ಶನ್ ಅವರನ್ನು ಕೃಷಿ ಇಲಾಖೆ ರಾಯಭಾರಿ ಸ್ಥಾನದಿಂದ ಕೈ ಬಿಡಲ್ಲ. ಪೋಲೀಸ್ ಇಲಾಖೆ ಯಾರ ಕೈ ನಲ್ಲೂ ಇಲ್ಲ. ಅವರ ಕೆಲಸ ಅವರು ಮಾಡ್ತಾರೆ ಎಂದಿದ್ದಾರೆ ಸಚಿವ.
ತಲೆ ತೆಗೆಯುತ್ತೇನೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ರೆಕ್ಕೆ ಪುಕ್ಕ ಹುಟ್ಟಿಕೊಳ್ತಾವೆ ಎಂಬ ಮಾತಿಗೆ ಅವರು ತಲೆ ಕಡೀತೀನಿ ಅಂದಿದ್ದಾರೆ ಅಷ್ಟೇ. ಅದು ಯಾವುದೇ ವ್ಯಕ್ತಿ ಯನ್ನು ಗಮನದಲ್ಲಿಟ್ಟುಕೊಂಡು ಹೇಳಿದ ಮಾತಲ್ಲ ಎಂದು ಬಿ ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.