7 ವರ್ಷಗಳ ನಂತರ ದೃಶ್ಯಂ 2 ಚಿತ್ರೀಕರಣ ಆರಂಭ. ಮತ್ತೆ ರವಿಚಂದ್ರ ಪುತ್ರಿ ಪಾತ್ರದಲ್ಲಿ ಆರೋಹಿ ನಾರಾಯಣ್.
ಮಲಯಾಳಂನ ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಸಿನಿಮಾ ದೃಶ್ಯಂ ಕನ್ನಡದಲ್ಲೂ ರಿಮೇಕ್ ಮಾಡಲಾಗಿತ್ತು. ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಕನ್ನಡದಲ್ಲಿಯೂ ಸೂಪರ್ ಡೂಪರ್ ಹಿಟ್ ಕಂಡಿತ್ತು. ಚಿತ್ರ ತೆರೆಕಂಡ ಏಳು ವರ್ಷಗಳ ನಂತರ ಎರಡನೇ ಭಾಗ ಸೆಟ್ಟೇರುತ್ತಿದೆ. ಎರಡನೇ ಭಾಗದಲ್ಲೂ ನಟಿ ಆರೋಹಿ ನಾರಾಯಣ ಅಭಿನಯಿಸುತ್ತಿದ್ದಾರೆ.
'ಭೀಮಸೇನ ನಳ ಮಹಾರಾಜ' ಚಿತ್ರದ ನಂತರ ಮತ್ತೆ ಅದೇ ಜಾನರ್ ಹೊಂದಿರುವ 'ದೃಶ್ಯಂ 2' ಚಿತ್ರದಲ್ಲಿ ಆರೋಹಿ ಅಭಿನಯಿಸುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ. ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಉಳಿದ ಭಾಗ ಕೊಡಗಿನಲ್ಲಿ ನಡೆಯಲಿದೆ. ಅಲ್ಲಿ ಮಳೆ ಹೆಚ್ಚಿರುವ ಕಾರಣ ವಾತಾವರಣ ನೋಡಿಕೊಂಡು ಸೆಟ್ ಹಾಕಲಾಗುತ್ತದೆ. ನಿರ್ದೇಶಕ ಪಿ ವಾಸು ಅವರು ಆರೋಹಿಗೆ ಪಾತ್ರ ಅರ್ಥ ಮಾಡಿಕೊಂಡು ಅಭಿನಯಿಸುವುದಕ್ಕೆ ಸ್ವಾತಂತ್ರ್ಯ ನೀಡಿದ್ದಾರೆ ಎನ್ನಲಾಗಿದೆ.
ವಾಟ್ಸಪ್ ಡಿಪಿಯಿಂದ ದೃಶ್ಯ ಚಿತ್ರಕ್ಕೆ ಆಯ್ಕೆಯಾದೆ: ಆರೋಹಿ ನಾರಾಯಣ್ಎರಡನೇ ಭಾಗದ ವಿಶೇಷತೆಯೇ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. 'ಅನಂತ್‌ನಾಗ್ ಸರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ನನಗೆ ಖುಷಿ ಕೊಟ್ಟಿದೆ. ಆದರೆ ಅವರ ಜೊತೆ ನನ್ನ ದೃಶ್ಯಗಳಿಲ್ಲ ಎನ್ನುವ ನಿರಾಶೆಯೂ ಇದೆ,' ಎಂದು ಆರೋಹಿ ಖಾಸಗಿ ವೆಬ್‌ಸೈಟಿಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇನ್ನು ಚಿತ್ರದಲ್ಲಿ ಸಾಧು ಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಶಿವರಾಮ್, ನಾರಾಯಣ್ ಸ್ವಾಮಿ, ಲಾಸ್ಯಾ ನಾಗರಾಜ್, ಅಶೋಕ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.