14 ವರ್ಷದಿಂದ ಬದಲಾಗ್ದೆ ಇರೋದು ಕೊಹ್ಲಿ- ಟಿ ಶರ್ಟ್ ಬೆಲೆ: RCB ಯಾಕಿಷ್ಟ ಎಂದು ಸಿಂಪಲ್ ಸುನಿ ಭಾವುಕ ಪೋಸ್ಟ್

Published : May 22, 2023, 12:40 PM ISTUpdated : May 22, 2023, 12:41 PM IST
14 ವರ್ಷದಿಂದ ಬದಲಾಗ್ದೆ ಇರೋದು ಕೊಹ್ಲಿ- ಟಿ ಶರ್ಟ್ ಬೆಲೆ: RCB ಯಾಕಿಷ್ಟ ಎಂದು ಸಿಂಪಲ್ ಸುನಿ ಭಾವುಕ ಪೋಸ್ಟ್

ಸಾರಾಂಶ

14 ವರ್ಷದಿಂದ ಬದಲಾಗ್ದೆ ಇರೋದು ಅಂದರೆ ಕೊಹ್ಲಿ ಮತ್ತು ಟಿ ಶರ್ಟ್ ಬೆಲೆ ಎಂದು ನಿರ್ದೇಶಕ ಸಿಂಪಲ್ ಸುನಿ RCB ಯಾಕಿಷ್ಟ ಅಂತ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಚಾನ್ಸ್ ಮಿಸ್ ಆಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಅನುಭವಿಸಿದ ಆರ್‌ಸಿಬಿ ಟೂರ್ನಿಯಿಂದ ಹೊರಬಿದ್ದಿದೆ. ಈ ಬಾರಿಯೂ ಆರ್ ಸಿ ಬಿ ಕಪ್ ಗೆಲ್ಲುವ ಕನಸು ನುಚ್ಚುನೂರಾಗಿದೆ. ಆರ್ ಸಿ ಬಿ ಸೋಲಿನ ಬಳಿಕ ನಿರ್ದೇಶಕ ಸಿಂಪಲ್ ಸುನಿ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. ಕಪ್ ಗೆಲ್ಲದಿದ್ದರೂ ಆರ್ ಸಿ ಬಿ ಎಂದರೆ ಯಾಕಿಷ್ಟ ಎಂದು ಭಾವುಕ ಸಾಲು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಂಪಲ್ ಸುನಿ ಶೇರ್ ಮಾಡಿರುವ ಪೋಸ್ಟ್ ಹಿಗೆದೆ.  

'2008 ರಲ್ಲಿ IPL ಎನ್ನುವ ಟೂರ್ನಿ ಅನೌನ್ಸ್ ಆದಾಗ ಭಾರತದ 28 ರಾಜ್ಯಗಳಲ್ಲಿ ಕೇವಲ 8 ರಾಜ್ಯ ಮಾತ್ರ ಸೆಲೆಕ್ಟ್ ಆಗಿತ್ತು. ಅದರಲ್ಲೊಂದು ಆಯ್ಕೆ ಆಗಿದ್ದೂ ಕರ್ನಾಟಕದ ವಾಣಿಜ್ಯನಗರಿ 
ಬೆಂಗಳೂರು. ನಮ್ಮ ಮೊದಲ ಪ್ರೇಮ ಅದೇ. RCB ಗೆ BRAND ಆಗಿದ್ದು ರಾಹುಲ್ ದ್ರಾವಿಡ್. ಟೀಂಲ್ಲಿ ಇದ್ದಿದ್ದೂ ಅನಿಲ್ ಕುಂಬ್ಳೆ. ಇದಕ್ಕಿನ್ನಾ ಬೇರೇನೂ ಬೇಕು ಸಪೋರ್ಟ್ ಮಾಡಲು.
ಅಂಡರ್ 19 ವರ್ಲ್ಡ್ ಕಪ್ ವಿಜೇತ ಕ್ಯಾಪ್ಟನ್ ವಿರಾಟ್ ಅನ್ನೂ ಕೂಡ ದೆಹಲಿ ಖರೀದಿಸದ ಕಾರಣ RCB ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ನಮ್ಮ ಆಶಯದಷ್ಟು ಮನ್ನಣೆ ಕೊಟ್ಟಿಲ್ಲವಾದರೂ ಮನೀಶ್ ಪಾಂಡೆ. Kl ರಾಹುಲ್, ಶ್ರೀನಾಥ್ ಅರವಿಂದ್, ವಿನಯ್,  ಬಿನ್ನಿ, ಮಿಥುನ್, ವೈಶಾಕ್ ಹೀಗೆ ಹಲವಾರು ಲೋಕಲ್ ಪ್ಲೇಯರ್ಸ್‌ಗೆ ಕೂಡ rcb ಅಡಿಪಾಯ ಹಾಕಿದೆ' 

'ಅಲ್ಲಿಂದ ಶುರುವಾದ ನಮ್ಮ ಅಭಿಮಾನ. ಒಂದೊಂದೇ ಮೆಟ್ಟಿಲು ಏರುತ್ತಾ. ABD, gayle kohli ಇವರ ಆಟಗಳಿಗೆ, Recordಗಳಿಗೆ,  Nailbitting finish ಪ್ಲೇಯರ್ಸ್ ನಮಗೆ thanks ಹೇಳುವ ಬಗೆ. ಕೊಹ್ಲಿಯನ್ನು ಬೇರೆ ಜೆರ್ಸಿ ಯಲ್ಲೂ ನೆನೆಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಹೇಳಿಕೆಗಳು. ಹಾಗೂ ಇನ್ನಿತರ ಬೆಳವಣಿಗಳು ನಮ್ಮನ್ನೂ ಎಂದಿಗೂ ಬಿಡದ ನಿಷ್ಠಾವಂತ ಅಭಿಮಾನಿ ಮತ್ತು 
ಅತ್ಯಂತ ರಿಚ್ ಅಭಿಮಾನಿಗಳಾದೆವು' 

'ಗೆದ್ದೆತ್ತಿನ ಬಾಲ ಹಿಡಿಯೋರು ಗೆಲ್ಲೋವರೆಗೂ. ಆದ್ರೆ ಸೋತಗಲೂ ಜೊತೆ ಇರುವವರು ಸಾಯುವವರೆಗೂ. ನಮಗೆ cup ಗೆಲ್ಲುವ  ಹಂಬಲ. ಆದರೆ ಗೆಲ್ಲದಿದ್ದರೂ ನಿಯತ್ತಿನ ತಂಡ ಎನ್ನುವ ಬಲ. ಪ್ಲೇಯರ್ಸ್ ಗುರಾಯಿಸುವಾಗ, ಬಯ್ಯುವಾಗ ಅಭಿಮಾನಿಗಳು ಒಳಗೊಳಗೆ ಬೈತಾನೆ. ಆದರೆ ನಮ್ಮ ಫ್ಯಾನ್ಸ್ rcbiansಗೆ ವಿರೋಧಿ ತಂಡದ ಅಟಗಾರರು ಬೈದರೆ ನಮ್ಮ ಪರವಾಗಿ ಕೊಹ್ಲಿ ನೇ ಬೈತಾನೆ. ಅದು ಆಟಗಾರ ಆದರೂ ಸರಿ. Member of parliment ಆದ್ರೂ ಸರಿ. ಮ್ಯಾಂಗೋ ಮಾರುವವನಾದ್ರೂ ಸರಿ' ಎಂದು ಹೇಳಿದ್ದಾರೆ. 

LSG vs RCB: ಮುಂದಿನ ಸಲ ಬನ್ನಿ, Rcbians ಜಾತ್ರೆನೆ ಮಾಡ್ತಾರೆ: ಗಂಭೀರ್ ಪಡೆಗೆ ಸಿಂಪಲ್ ಸುನಿ ಸವಾಲ್

Fultoss ಹಾಕ್ತಾರೆ. Commentry ಮಾಡುವವರನ್ನು ಕರೆದು ಆಡಿಸುತ್ತಾರೆ. ಚಾನ್ಸ್ ಮೇಲೆ ಚಾನ್ಸ್ ಕೊಡ್ತಾರೆ. ಸ್ಕೌಟಿಂಗ್ ಸರಿ ಇಲ್ಲಾ. ಲೋಕಲ್ ಪ್ಲೇಯರ್ಸ್ ಗೆ ವಾಲ್ಯೂ ಕೊಡೋಲ್ಲ. Bangalore ಬೆಂಗಳೂರು ಆಗಿಲ್ಲ. ಈ ರೀತಿ ಹಲವು ಮಿಸ್ಟೇಕ್ ಇದ್ದರೂ RCB ನಮ್ಮ ಮಗು. ಸ್ವಲ್ಪ ರಚ್ಚೆ. ಕೊನೆ ಬೆಂಚ್. ಆಗಾಗ ಫೇಲ್. ಏನೇ ಆದರೂ ಅದು ನಮ್ಮ ಮಗು. ಯಾವುದೋ ಮಗು ರ್ಯಾಂಕ್ ಬರುತ್ತದೆ ಎಂದು ನಾವು ಆ ಮಗುವನ್ನು  ನಮ್ಮ ಮಗು ಎಂದೇಳಲು ಇಷ್ಟ ಪಡುವುದಿಲ್ಲ' 

RCB vs CSK: ಖುಷಿ ಪಡಿ, ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಬರಬೇಡಿ; CSK ಫ್ಯಾನ್ಸ್‌ಗೆ ಸಿಂಪಲ್ ಸುನಿ ತಿರುಗೇಟು

ಇವತ್ತಲ್ಲ ನಾಳೆ cup ನಮ್ಮದಾಗಬಹುದು. ಆಗದಿದ್ರು ನಾವು ಬೇರೆ ಆಗುವುದಿಲ್ಲ. ಸೋಲು ಅಥವಾ ಗೆಲುವು ನಾವು  rcbians. 14 ವರ್ಷದಿಂದ ಬದಲಾವಣೆ ಆಗದಿರುವುದು ಎರಡೇ, 1) RCB ತಂಡದಲ್ಲಿ ಕೊಹ್ಲಿ. 2) ಇನ್ನೊಂದು ಗ್ರೌಂಡ್ ಆಚೆ ಮ್ಯಾಚ್ ದಿನ ಸಿಗುವ 150 ರೂಪಾಯಿ RCB T SHIRT. ಹಣದುಬ್ಬರ ಅಷ್ಟು ಏರಿಳಿತ ಕಂಡರೂ ಟಿ ಶರ್ಟ್ ಬೆಲೆ ಮಾತ್ರ ಅಷ್ಟೇ ಇದೆ. ಮೊದಲ ಮ್ಯಾಚ್ ಹೋದಾಗ ಟೀಶರ್ಟ್ ತಗೊಂಡ ನೆನಪು ಹಾಗೆ ಇದೆ. ಈ ಸಲ cup ನಮ್ದೇ, ಈ statement ಅಂತೂ ನಮ್ದೇ' ಎಂದು ದೀರ್ಘವಾಗಿ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!