ಹರಿಪ್ರಿಯಾ- ವಸಿಷ್ಠ ಮದುವೆ ರಿಜಿಸ್ಟರ್; ಯಾರಿಗೂ ತಿಳಿಯದ ಸತ್ಯ ಬಿಚ್ಚಿಟ್ಟ ನಟಿ!

Published : May 22, 2023, 12:16 PM IST
ಹರಿಪ್ರಿಯಾ- ವಸಿಷ್ಠ ಮದುವೆ ರಿಜಿಸ್ಟರ್; ಯಾರಿಗೂ ತಿಳಿಯದ ಸತ್ಯ ಬಿಚ್ಚಿಟ್ಟ ನಟಿ!

ಸಾರಾಂಶ

ಲೀಗಲ್ ಆಗಿ ಮದುವೆ ರಿಜಿಸ್ಟರ್ ಮಾಡಿಸುತ್ತಿರುವ ವಿಡಿಯೋ ಮಾಡಿದ ನಟಿ ಹರಿಪ್ರಿಯಾ. ಹೇಗೆ ನಡೆಯುತ್ತದೆ, ಏನೆಲ್ಲಾ ಮಾಡ್ತಾರೆ ಎಂದು ತೋರಿಸಿದ ಸುಂದರಿ.... 

ಕನ್ನಡ ಚಿತ್ರರಂಗದ ಮೋಸ್ಟ್‌ ಹ್ಯಾಪೆನಿಂಗ್ ಕಪಲ್ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜನವರಿ 26, 2023ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ 3 ತಿಂಗಳ ನಂತರ ರಿಜಿಸ್ಟರ್ ಮಾಡಿಸಿದ್ದಾರೆ. ಈ ಬಗ್ಗೆ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಿಯಾ ವಿಡಿಯೋ ಮಾಡಿದ್ದಾರೆ. 

'ವಸಿಷ್ಠ ಅವರು ಮತ್ತು ನಾನು ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದೀವಿ. ನಮ್ಮ ಮದುವೆ ರಿಜಿಸ್ಟರ್ ಮಾಡಿಸುವುದು ಒಂದು ಉಳಿದಿತ್ತು. ಇಬ್ಬರು ತುಂಬಾ ಬ್ಯುಸಿಯಾಗಿದ್ವಿ..ವಸಿಷ್ಠ ಚಿತ್ರೀಕರಣದಲ್ಲಿದ್ದರು ಉಳಿದ ಪ್ರಾಜೆಕ್ಟ್‌ಗಳನ್ನು ಮುಗಿಸುವುದರಲ್ಲಿ ನಾನಿದ್ದೆ ಜೊತೆ ನಾವಿಬ್ಬರು ಒಟ್ಟಿಗೆ ಪ್ರಯಾಣ ಮಾಡ್ತಿದ್ವಿ. ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಬೆಂಗಳೂರಿಗೆ ಬಂದು ಏಪ್ರಿಲ್ 26 ರಿಜಿಸ್ಟರ್ ಮಾಡಿಸಲಾಗಿತ್ತು. ಜನವರಿ 26 ನಾವು ಮದುವೆ ಆಗಿದ್ದು ರಿಜಿಸ್ಟರ್ ಮಾಡಿಸುವ ದಿನಾಂಕ ಕೂಡ 26 ಆಗಿರಬೇಕು ಎಂದು ನಾವು ಅದೇ ದಿನಾಂಕ ಹುಡುಕಿ ಮಾಡಿಕೊಂಡಿದ್ದು.ರಾಜರಾಜೇಶ್ವರಿ ನಗರ ಸಬ್‌ರಿಜಿಸ್ಟರ್ ಆಫೀಸ್‌ನಲ್ಲಿ ನಮ್ಮ ಮದುವೆಯನ್ನು  ಹಿಂದು ಮ್ಯಾರೇಜ್ ಆಕ್ಟ್‌ ಅಡಿಯಲ್ಲಿ ರಿಜಿಸ್ಟರ್ ಮಾಡಿಸಲಾಗಿತ್ತು. ಈ ಮದುವೆ ರಿಜಿಸ್ಟರ್ ಮಾಡಿಸುವ ಪ್ರಾಸೆಸ್‌ನಲ್ಲಿ ನನಗೆ ತಿಳಿದಿದ್ದು ಏನೆಂದರೆ ನಾವು ಸಿನಿಮಾದಲ್ಲಿ ನೋಡುವಷ್ಟು ಸುಲಭ ಅಲ್ಲ ಹಾಗಂತ ಕಷ್ಟನೂ ಅಲ್ಲ. ಸರ್ಕಾರ ಕೇಳುವ ಕೆಲವೊಂದು ಫಾರ್ಮಾಲಿಟಿಗಳನ್ನು ಮಾಡಬೇಕು ಆಗ ನಮ್ಮ ಏಜ್‌ ಪ್ರೂಫ್‌, ಐಡಿ ಪ್ರೂಫ್, ಅಡ್ರೆಸ್‌ ಪ್ರೂಫ್‌, ಮದುವೆ ಆಮಂತ್ರಣ ಪತ್ರಿಕೆ ಮತ್ತು ಮದುವೆ ಫೋಟೋ ಕೇಳುತ್ತಾರೆ. ಒಂದಷ್ಟು ಫಾರ್ಮ್‌ ಕೊಡ್ತಾರೆ ಅದನ್ನು ಫಿಲ್ ಮಾಡಬೇಕು ಒಂದಿಷ್ಟು ಸೈನ್‌ ಮಾಡಿಸಿಕೊಳ್ಳುತ್ತಾರೆ ಅದಾದ ಮೇಲೆ ಮತ್ತೆ ನಮ್ಮನ್ನು ಕೇಳಿದರು ನಿಮಗೆ ಈ ಮದುವೆ ಒಪ್ಪಿಗೆ ಇದ್ಯಾ? ಮದುವೆ ಓಕೆ ನಾ? ನಿಮ್ಮ ಮದುವೆ ಲೀಗಲ್ ಆಗುತ್ತಿದೆ ಡಾಕ್ಯುಮೆಂಟ್ ಆಗುತ್ತಿದೆ ಅಂತ. ಆಗ ನಾವು ಖಂಡಿತಾ ಹೌದು ನಾವಿಬ್ಬರು ತುಂಬಾ ಇಷ್ಟ ಪಟ್ಟು ಮದುವೆಯಾಗಿದ್ದು ಎಂದು ಹೇಳಿದೆವು. ಸಹಿ ಹಾಕಿದ ಮೇಲೆ ನಮ್ಮ ಮದುವೆ ಲೀಗಲ್ ಆಯ್ತು' ಎಂದು ಹರಿಪ್ರಿಯಾ ಹೇಳಿದ್ದಾರೆ. 

ನಟಿ ಹರಿಪ್ರಿಯಾಗೆ ಲಾಸ್ಟ್‌ ಮೆಸೇಜ್ ಮಾಡಿದ್ದರು ಯಾರು? ಲಾಕ್‌ ಇದ್ರೂ ಫೋನ್‌ ಫುಲ್ ಲೀಕ್!

'ಮದುವೆ ರಿಜಿಸ್ಟರ್ ಮಾಡಿಸಿದ ಕ್ಷಣ ನನಗೆ ತುಂಬಾನೇ ಸ್ಪೆಷಲ್ ಆಗಿತ್ತು. ಏಕೆಂದರೆ ನನ್ನ ಸಿನಿಮಾಗಳಲ್ಲಿ ಮದುವೆ ರಿಜಿಸ್ಟರ್ ಮಾಡಿಸಿರುವ ದೃಶ್ಯ ಮಾಡಿದಾಗ ಡೈಲಾಗ್ ಮತ್ತು ಲುಕ್‌ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತದೆ ಅಲ್ಲಿ ಏನು ಹೇಳುತ್ತಾರೆ ಅದನ್ನು ಮಾಡಿ ಬಂದಿರುತ್ತೀವಿ ಆದರೆ ಸ್ವತಃ ನಾವು ಪರ್ಸನಲ್ ಜೀವನದಲ್ಲಿ ರಿಜಿಸ್ಟರ್ ಮಾಡಿಸಿದಾಗ ಸಾಕಷ್ಟು ವಿಚಾರಗಳನ್ನು ಕಲಿತೆ. ನಾನು ಅಲ್ಲಿ ಎಲ್ಲರನ್ನು ಕೇಳುತ್ತಿದ್ದೆ ಯಾಕೆ ಹೂವಿ ಹಾರ ಹಾಕಿಸುತ್ತಿಲ್ಲ ಎಂದು ಹೇಳುತ್ತಿದ್ದೆ. ರಿಜಿಸ್ಟರ್ ಮಾಡಿಸಲು ನಮ್ಮ ಅಣ್ಣ ಬಂದಿದ್ದರು ರಿಜಿಸ್ಟರ್‌ ಮ್ಯಾರೇಜ್ ಮಾಡಿಕೊಳ್ಳುವವರು ಮಾತ್ರ ರೆಡಿಯಾಗಿ ಬಂದು ಹಾರ ಬದಲಾಯಿಸಿಕೊಳ್ಳುತ್ತಾರೆ ಆದರೆ ನೀವು ಮದುವೆ ಆಗಿ ಮದುವೆ ರಿಜಿಸ್ಟರ್ ಮಾಡಿಸಲು ಬಂದಿದ್ದೀರಾ ಹೀಗಾಗಿ ಮಾಡಿಸುವುದಿಲ್ಲ. ಸಿನಿಮಾ ಒಂದು ಸ್ಟ್ರಾಂಗ್ ಮೀಡಿಯಮ್‌ ನಾವು ಏನು ನೋಡಿರುತ್ತೀವಿ ಅದೇ ಸತ್ಯ ಅಂತ ತಲೆಯಲ್ಲಿ ಇರುತ್ತದೆ. ಸಿಕ್ಕ ವಯಸ್ಸಿನಿಂದ ಸಿನಿಮಾ ನೋಡಿಕೊಂಡು ಬಂದವರು ನಾವು' ಎಂದು ಹರಿಪ್ರಿಯಾ ಮಾತನಾಡಿದ್ದಾರೆ.

17ನೇ ವಯಸ್ಸಿಗೆ ಫಸ್ಟ್‌ ಲವ್; ಫಸ್ಟ್‌ ಕಿಸ್‌ ಡಬ್ಬತರ ಇತ್ತು ಎಂದು ರಹಸ್ಯ ಬಿಚ್ಚಿಟ್ಟ ನಟಿ ಹರಿಪ್ರಿಯಾ

'ಮದುವೆ ರಿಜಿಸ್ಟರ್ ಮಾಡುವುದು ನಾಲ್ಕು ರೀತಿಯಲ್ಲಿ ಇರುತ್ತದೆ. ಒಂದು ಹಿಂದು ಮ್ಯಾರೇಜ್ ಆಕ್ಟ್‌ ಇನ್ನೊಂದು ಕ್ರಿಸ್ಚಿಯನ್‌ ಮ್ಯಾರೇಜ್ ಆಕ್ಟ್‌, ಮುಸ್ಲಿಂ ಮ್ಯಾರೇಜ್ ಆಕ್ಟ್‌ ಮತ್ತೊಂದು ಸ್ಪೆಷಲ್ ಮ್ಯಾರೇಜ್ ಆಕ್ಟ್‌ ಆಂತ. ನನಗೆ ಬಂದಿರುವ ಮಾಹಿತಿ ಪ್ರಕಾರ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಪ್ರತಿಯೊಬ್ಬರು ಮದುವೆಯನ್ನು ರಿಜಿಸ್ಟರ್ ಮಾಡಿಸಿರಬೇಕು ಅಂತ. ಯಾರು ಯಾರು ಮದುವೆ ರಿಜಿಸ್ಟರ್ ಮಾಡಿಸಿಲ್ಲ ಮದುವೆ ರಿಜಿಸ್ಟರ್ ಮಾಡಿಸಿ ಸರ್ಕಾರ ನಿಯಮವನ್ನು ತಪ್ಪದೆ ಪಾಲಿಸೋಣ' ಎಂದಿದ್ದಾರೆ ಪ್ರಿಯಾ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!