Darshan​ ಇಲ್ಲದ ದಸರಾ! ಕಳೆದ ವರ್ಷ ಸಿಕ್ಕಿತ್ತು ಜಾಮೀನು- ಥಾಯ್ಲೆಂಡ್​ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ

Published : Oct 01, 2025, 05:18 PM IST
Ayudha pooja at Darshans house

ಸಾರಾಂಶ

ನಟ ದರ್ಶನ್ ಜೈಲಿನಲ್ಲಿರುವ ಕಾರಣ, ಅವರ ಪತ್ನಿ ವಿಜಯಲಕ್ಷ್ಮಿ ಈ ಬಾರಿ ಸರಳವಾಗಿ ಆಯುಧ ಪೂಜೆ ನೆರವೇರಿಸಿದ್ದಾರೆ. ದರ್ಶನ್ ಅವರ ಕೋಟ್ಯಂತರ ರೂಪಾಯಿ ಮೌಲ್ಯದ ಕಾರುಗಳಿಗೆ ಪೂಜೆ ಸಲ್ಲಿಸಿ, ಪತಿಯೊಂದಿಗಿನ ಹಳೆಯ ಥಾಯ್ಲೆಂಡ್ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೇಸ್​ನಲ್ಲಿ ಸದ್ಯ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಅಲ್ಲಿ ಅವರಿಗೆ ಸರಿಯಾದ ವ್ಯವಸ್ಥೆ ಇಲ್ಲದೇ ಕೋರ್ಟ್​ ಮೆಟ್ಟಿಲು ಏರುತ್ತಲೇ ಇದ್ದಾರೆ ದರ್ಶನ್​. ಅದೇ ಇನ್ನೊಂದೆಡೆ, ಅವರ ಪತ್ನಿ ವಿಜಯಲಕ್ಷ್ಮಿ ಅವರು ಸರಳವಾಗಿ ದಸರಾ ಹಬ್ಬದ ಆಯುಧ ಪೂಜೆಯನ್ನು ಆಚರಿಸಿಕೊಂಡು ಅದರ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಇಂದು ಆಯುಧ ಪೂಜೆಯ ನಿಮಿತ್ತ ವಾಹನಗಳಿಗೆ ಪೂಜೆ ಸಲ್ಲಿಸಿದ್ದಾರೆ. ಪ್ರತಿ ವರ್ಷ ಅದ್ದೂರಿಯಾಗಿ ದರ್ಶನ್​ ಮನೆಯಲ್ಲಿ ಆಯುಧ ಪೂಜೆ ಮಾಡಲಾಗುತ್ತಿತ್ತು. ಕಳೆದ ಬಾರಿ ದೀಪಾವಳಿಯ ಸಮಯದಲ್ಲಿ ದರ್ಶನ್​ ಅವರಿಗೆ ಜಾಮೀನು ಸಿಕ್ಕಿದ್ದರಿಂದ ಜಾಮೀನಿನ ಮೇಲೆ ಹೊರಗಡೆ ಬಂದು ಕಾರುಗಳಿಗೆ ಪೂಜೆ ಸಲ್ಲಿಸಿದ್ದರು. ಆದರೆ ಈ ಬಾರಿ ದಸರಾ ಸಮಯದಲ್ಲಿ ಅವರು ಕಂಬಿಯ ಹಿಂದೆ ಇದ್ದು, ದೀಪಾವಳಿಯ ವೇಳೆಗಾದರೂ ಹೊರಗೆ ಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಥಾಯ್ಲೆಂಡ್​ ಫೋಟೋ ಶೇರ್​ ಮಾಡಿದ ವಿಜಯಲಕ್ಷ್ಮಿ

ಅದೇ ಇನ್ನೊಂದೆಡೆ ವಿಜಯಲಕ್ಷ್ಮಿ (Vijayalakshmi) ಅವರು ಪತಿ ದರ್ಶನ್​ ಜೊತೆಗಿನ ಥಾಯ್ಲೆಂಡ್​ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಡೆವಿಲ್ ಚಿತ್ರದ ಶೂಟಿಂಗ್‌ಗಾಗಿಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಮಗನ ವಿನೀಶ್ ಜೊತೆಗೆ ಥಾಯ್ಲೆಂಡ್​ಗೆ ಹೋಗಿದ್ದರು. ಆ ಸಮಯದಲ್ಲಿ ತೆಗೆದಿರುವ ಫೋಟೋಗಳು ಇವು ಆಗಿವೆ. Thailand through my lens ಎಂದು ಕ್ಯಾಪ್ಷನ್​ ನೀಡಿರುವ ವಿಜಯಲಕ್ಷ್ಮಿ ಅವರು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ಕಾರುಗಳ ಕಾರುಬಾರು

ಅಂದಹಾಗೆ ದರ್ಶನ್​ ಅವರು, ಸ್ಯಾಂಡಲ್`ವುಡ್`ನಲ್ಲಿ ಹೆಚ್ಚು ಕಾರು ಹಾಗೂ ಬೈಕ್ ಕ್ರೇಜ್ ಹೊಂದಿರೋ ನಟ ಎಂದೇ ಫೇಮಸ್​. ದರ್ಶನ್ ಮನೆಯಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರುಗಳು ಇವೆ. ಕಾಂಟೆಸಾ, ಜಾಗ್ವರ್, ಆಡಿ ಕ್ಯೂ 7, ರೇಂಜ್ ರೋವರ್. ಬೆನ್ಜ್, ಫಾರ್ಚೂನರ್‌.ಮಿನಿ ಕೂಪರ್, ಸ್ಕಾರ್ಪಿಯೋ ,ಹಮ್ಮರ್ ಸೇರಿದಂತೆ ಹಲವು ಮಾಡೆಲ್​ಗಳ ಕಾರುಗಳ ಇವರ ಬಳಿ ಇವೆ. ದರ್ಶನ್ ಬಳಿ ರೇಂಜ್ ರೋವರ್ ಕಾರು ಕೂಡ ಇದೆ. ಇದರ ಬೆಲೆ 2.75 ಕೋಟಿ ರೂಪಾಯಿ ಆಗಿದೆ. ಇಷ್ಟೆಲ್ಲಾ ಕಾರುಗಳನ್ನು ಹೊಂದಿರುವ ದಾಸನ ಬಳಿ ದುಬಾರಿ ಮಿನಿ ಕಾರಾದ 'ಮಿನಿಕೂಪರ್' ಕೂಡ ಇದೆ. ಈ ಮಿನಿಕೂಪರ್ ಕಾರಿನ ಬೆಲೆ 38 ಲಕ್ಷ. ಈ ಕಾರಿನಲ್ಲಿ ಕೂಡ ದರ್ಶನ್ ಆಗಾಗ ಸುತ್ತಾಡುತ್ತಾ ಇರುತ್ತಾರೆ. ಇವೆಲ್ಲವೂ ಈ ಬಾರಿಯ ದಸರಾದಂದು ಯಜಮಾನನಿಲ್ಲದೇ ಬಿಕೋ ಎನ್ನುತ್ತಿವೆ. ವಿಜಯಲಕ್ಷ್ಮಿ ಅವರು ತಮ್ಮ ಮಗನ ವಿನುಷ್ ಜೊತೆಗೂಡಿ ಕಾರುಗಳಿಗೆ ಪೂಜೆ ಮಾಡಿದ್ದಾರೆ.

ಬೈಕ್​ ಕ್ರೇಜ್​

ಇನ್ನು ದರ್ಶನ್​ ಅವರ ಬೈಕ್​ ಕ್ರೇಜ್​ ಕುರಿತು ಹೇಳುವುದಾದರೆ, ಕಾರುಗಳ ಜೊತೆಗೆ ಇವರ ಬಳಿ ತಾವು ಮೊದಲು ಬಳಸಿದ ಸ್ಕೂಟರ್‌ನಿಂದ ಹಿಡಿದು ನಾಲ್ಕು ಅತ್ಯಂತ ದುಬಾರಿ ಬೈಕ್‌ಗಳಿವೆ. ಈ ಪೈಕಿ 16 ಲಕ್ಷ ಬೆಲೆಬಾಳುವ ಸುಜುಕಿ ಹಯಾಭುಜ, 19 ಲಕ್ಷದ ಸುಜುಕಿ Intruder ಎಂ 1800 ಆರ್, 20 ಲಕ್ಷದ ಹಾರ್ಲೆ-ಡೇವಿಡ್ಸನ್ ಹೆರಿಟೇಜ್ ಸಾಫ್ಟೇಲ್ ಕ್ಲಾಸಿಕ್ ಬೈಕ್ ಜೊತೆಗೆ 18 ಲಕ್ಷ ಮೌಲ್ಯದ ಡುಕಾಟಿ ಮಲ್ಟಿ ಎಸ್‌ಡಿಆರ್ 18ಎ 19ಎಸ್ ಬೈಕ್‌ಗಳು ಇವೆ.

 

 

ಇದನ್ನೂ ಓದಿ: Sudeep​ ಸರ್​ನ ನೋಡಿ ತುಂಬಾ ಬೇಜಾರ್​ ಆಯ್ತು: ಸಿಕ್ಕಾಪಟ್ಟೆ ಫೀಲ್​ ಮಾಡಿಕೊಂಡಿದ್ಯಾಕೆ ಈ ಯುವತಿಯರು ಕೇಳಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ