ಸೈಮಾ ಅವಾರ್ಡ್ ಕನ್ನಡ-2024 ವಿಜೇತರು ಯಾರು? ಕುತೂಹಲಕ್ಕೆ ಉತ್ತರ ಇಲ್ಲಿದೆ!

By Shriram Bhat  |  First Published Sep 15, 2024, 2:49 PM IST

ಈ ಬಾರಿ ಕನ್ನಡಕ್ಕೆ ಒಟ್ಟೂ ಹತ್ತೊಂಬತ್ತು (19) ಪ್ರಶಸ್ತಿಗಳು ಬಂದಿವೆ. ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕೆ ಬೆಸ್ಟ್ ಕನ್ನಡ ಸಿನಿಮಾ ಅವಾರ್ಡ್ ಲಭಿಸಿದೆ. ಹಾಗಿದ್ದರೆ ಈ ಬಾರಿಯ ಸೈಮಾ..


ಸೈಮಾ ಅವಾರ್ಡ್-2024 ಘೋಷಣೆಯಾಗಿದೆ. ಈ ಬಾರಿ ಕನ್ನಡಕ್ಕೆ ಒಟ್ಟೂ ಹತ್ತೊಂಬತ್ತು (19) ಪ್ರಶಸ್ತಿಗಳು ಬಂದಿವೆ. ನಿರೀಕ್ಷೆಯಂತೆಯೇ ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕೆ ಬೆಸ್ಟ್ ಕನ್ನಡ ಸಿನಿಮಾ ಅವಾರ್ಡ್ ಲಭಿಸಿದೆ. ಹಾಗಿದ್ದರೆ ಈ ಬಾರಿಯ ಸೈಮಾ-2024 ಅವಾರ್ಡ್‌ ಯಾರಯಾರ ಪಾಲಾಗಿದೆ, ನೋಡಿ.. ಕನ್ನಡ ನಟ ದುನಿಯಾ ವಿಜಯ್ ತೆಲುಗಿನ 'ವೀರ ಸಿಂಹ ರೆಡ್ಡಿ' ಚಿತ್ರಕ್ಕೆ ಉತ್ತಮ ಖಳನಟ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ನಟ ಸುಂದರ್ ಕೃಷ್ಣ ಅರಸು 'ಅದೊಂದು' ತಪ್ಪಿನಿಂದಲೇ ಸಾವನ್ನಪ್ಪಿದರೋ ಹೇಗೆ?

Tap to resize

Latest Videos

undefined

ಉತ್ತಮ ಸಿನಿಮಾ: ಕಾಟೇರ

ಉತ್ತಮ ನಟ: ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೋ)

ಉತ್ತಮ ನಟಿ: ಚೈತ್ರಾ ಜೆ ಆಚಾರ್ (ಟೋಬಿ)

ಉತ್ತಮ ನಿರ್ದೇಶಕ: ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೋ- ಸೈಡ್-ಎ)

ಉತ್ತಮ ಚೊಚ್ಚಲ ನಿರ್ದೇಶಕ: ನಿತಿನ್ ಕೃಷ್ಣಮೂರ್ತಿ ()ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ)

ಉತ್ತಮ ನಟ: (ಕ್ರಿಟಿಕ್ಸ್): ಧನಂಜಯ್ (ಗುರುದೇವ್ ಹೊಯ್ಸಳ) 

ಉತ್ತಮ ನಟಿ (ಕ್ರಿಟಿಕ್ಸ್): ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೋ-ಸೈಡ್-ಎ)

ಉತ್ತಮ ಚೊಚ್ಚಲ ನಟಿ: ಆರಾಧನಾ ರಾಮ್ (ಕಾಟೇರ)

ಉತ್ತಮ ಖಳನಾಯಕ: ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೋ-ಸೈಡ್-ಎ)

ಉತ್ತಮ ಸಂಗೀತ ನಿರ್ದೇಶಕ: ವಿ ಹರಿಕೃಷ್ಣ (ಕಾಟೇರ) 

ಉತ್ತಮ ಹಿನ್ನೆಲೆ ಗಾಯಕಿ: ಮಂಗ್ಲಿ (ಕಾಟೇರ)

ಉತ್ತಮ ಹಿನ್ನೆಲೆ ಗಾಯಕ: ಕಪಿಲ್ ಕಪಿಲನ್ (ಸಪ್ತ ಸಾಗರದಾಚೆ ಎಲ್ಲೋ-ಸೈಡ್-ಎ)

ಉತ್ತಮ ಚೊಚ್ಚಲ ಕಲಾವಿದ: ಶಿಶಿರ ಬೈಕಡಿ (ಡೇರ್ ಡೆವಿಲ್ ಮುಸ್ತಫಾ)

ಉತ್ತಮ ಚೊಚ್ಚಿಲ ನಿರ್ಮಾಣ: ಕೈವ

ಉತ್ತಮ ಸಾಹಿತ್ಯ: ಧನಂಜಯ್ (ಟಗರು ಪಲ್ಯ)

ಉತ್ತಮ ಪೋಷಕ ನಟ: ನವೀನ್ ಶಂಕರ್ (ಹೊಂದಿಸಿ ಬರೆಯಿರಿ)

ಉತ್ತಮ ಪೋಷಕ ನಟಿ: ಸಂಯುಕ್ತ ಹೊರನಾಡು (ಟೋಬಿ)

ಉತ್ತಮ ಹಾಸ್ಯ ನಟ: ಅನಿರುದ್ದ ಆಚಾರ್ಯ (ಆಚಾರ್ಯ & ಕೋ)

ಐವತ್ತು ವರ್ಷಗಳ ಅಮೋಘ ಸಿನಿ ಸಾಧನೆ: ಶಿವರಾಜ್‌ಕುಮಾರ್

ಬಿಡುಗಡೆ ಹೊಸ್ತಿಲಲ್ಲಿರುವ 'ದೇವರ'ಗೆ ಢವ ಢವ ಯಾಕಾಗ್ತಿದೆ? ರಾಜಮೌಳಿ ಕಾಡ್ತಿದಾರಾ?

ಕನ್ನಡ ಸಿನಿರಂಗದಲ್ಲಿ ಐವತ್ತು (50) ವರ್ಷಗಳ ಸಾಧನೆಗಾಗಿ ನಟ ಶಿವರಾಜ್‌ಕುಮಾರ್‌ ಅವರು ಈ ಬಾರಿಯ ಸೈಮಾ ವಿಶೇ‍ಷ ಪ್ರಶಸ್ತಿಯನ್ನು ಎದ್ದುಕೊಂಡಿದ್ದಾರೆ. ಈ ಪ್ರಶಸ್ತಿ ವಿತರಣಾ ಸಮಾರಂಭ ದುಬೈನಲ್ಲಿ ನಡೆಯಿತು. 

click me!