ಹೊಸ ಬ್ಯುಸಿನೆಸ್ ಶುರು ಮಾಡಿದ ಶಿವಣ್ಣ ಪತ್ನಿ-ಮಗಳು; ಪಾರ್ವತಮ್ಮ ಕನಸು ನನಸು ಮಾಡಿದ ಗೀತಾ ಶಿವರಾಜ್‌‌ಕುಮಾರ್‌

By Shruthi KrishnaFirst Published Dec 9, 2022, 1:25 PM IST
Highlights

ಡಾ.ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಮತ್ತು ನಿವೇದಿತಾ ಫುಡ್ ಬ್ಯುಸಿನೆಸ್ ಪ್ರಾರಂಭಿಸಿದ್ದಾರೆ. 

ಡಾ. ರಾಜ್ ಕುಮಾರ್ ಕುಟುಂಬಕ್ಕೆ ಸಿನಿಮಾನೆ ಜೀವನ, ಸಿನಿಮಾಗೆ ಉಸಿರು. ಕಲಾ ಸೇವೇಗೆ ಎಂದೇ ಮಿಡಿಯೋ ಹೃದಯ ಈ ಫ್ಯಾಮಿಲಿಯದ್ದು. ಅಣ್ಣಾವ್ರ ನಂತ್ರ ಅವರ ಮಕ್ಕಳು ಈ ಪರಂಪರೆಯನ್ನ ಮುಂದುವರೆಸಿಕೊಂಡು ಬಂದಿದ್ದಾರೆ. ಈಗ ಅವರ ಮೊಮ್ಮಕ್ಕಳು ಒಬ್ಬೊಬ್ಬರಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಟನೆ, ನಿರ್ಮಾಣ, ವಿತರಣೆ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಸಕ್ರೀಯರಾಗಿರುವ ಅಣ್ಣಾವ್ರ ಫ್ಯಾಮಿಲಿ ಈಗ ಹೊಸದೊಂದು ಬ್ಯುಸಿನೆಸ್‌ಗೆ ಕೈ ಹಾಕಿದೆ. ಶಿವರಾಜ್ ಕುಮಾರ್ ಪತ್ನಿ ಮತ್ತು ಮಗಳು ಫುಡ್ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಸಿನಿಮಾ ನಿರ್ಮಾಣದ ಕಡೆ ಹೆಚ್ಚು ಗಮನ ಕೊಟ್ಟಿದ್ದ ಗೀತ ಶಿವರಾಜ್ ಕುಮಾರ್ ಇದೀಗ ಹೊಸ ಬ್ಯುಸಿನೆಸ್ ಪ್ರಾರಂಭಿಸಿದ್ದಾರೆ. ಈಗಾಗಲೇ ಪುಡ್ ಇಂಡಸ್ಟ್ರಿಗೆ ಕಾಲಿಟ್ಟಿರುವ ಗೀತಕ್ಕ ಜನರಿಗೆ ರುಚಿ ರುಚಿಯಾದ ಬೇಕಿಂಗ್ ಪುಡ್ ನೀಡಲು ನಿರ್ಧಾರ ಮಾಡಿದ್ದಾರೆ.  

ಗೀತಾ ಶಿವರಾಜ್ ಮತ್ತು ಮಗಳು ನಿವೇದಿತಾ ಶಿವರಾಜ್ ಕುಮಾರ್ ಇಬ್ಬರೂ ಸೇರಿ ಶುರು ಮಾಡಿರುವ ಬೇಕಿಂಗ್ ಪ್ರಾಡೆಕ್ಟ್ ಗೆ ಏಂಜೆಲ್ಸ್ ಎಂದು ಹೆಸರಿಟ್ಟಿದ್ದಾರೆ. 'ಏಂಜೆಲ್ಸ್‌; ದಿ ಟೇಸ್ಟ್‌ ಆಫ್‌ ಪ್ಯಾರಡೈಸ್‌' ಎನ್ನುವ ಹೆಸರಿನಲ್ಲಿ ಫುಡ್ ಪ್ರಾಡೆಕ್ಟ್ ಶುರುಮಾಡಿದ್ದಾರೆ. ಈಗಾಗಲೇ ಶಿವರಾಜ್‌ ಕುಮಾರ್‌ ಸಿನಿಮಾ ಸೆಟ್‌ ನಲ್ಲಿ ಕೆಲಸ ಮಾಡೋ ಪ್ರತಿಯೊಬ್ಬರು ಕೂಡ ಗೀತಾ ಶಿವರಾಜ್‌ ಕುಮಾರ್‌ ಅವರು ಕುಕ್‌ ಮಾಡಿರೋ ಬೇಕಿಂಗ್‌ ಫುಡ್‌ ಸವಿದು ನೂರಕ್ಕೆ ನೂರು ಮಾರ್ಕ್ಸ್‌ ಕೊಟ್ಟಿದ್ದಾರೆ. ಇನ್ನೇನ್ನಿದ್ದರೂ ಇದು ದೊಡ್ಡ ಬ್ರ್ಯಾಂಡ್‌ ಆಗಿ ಸಾರ್ವಜನಿಕರಿಗೆ ಸಿಗುವಂತಾಗೋದಷ್ಟೇ ಬಾಕಿ ಇದೆ. 

ಮಂತ್ರಾಲಯದಲ್ಲಿ ಶಿವಣ್ಣ; ಕುಟುಂಬ ಸಮೇತ ರಾಯರ ದರ್ಶನ ಪಡೆದ ಹ್ಯಾಟ್ರಿಕ್ ಹೀರೋ

ಅಂದಹಾಗೆ ಈಗಾಗಲೇ ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ಗೀತಾ ಶಿವರಾಜ್‌ ಕುಮಾರ್‌ ಈ ಹೊಸ ಬ್ಯುಸಿನೆಸ್‌ ಸ್ಟಾರ್ಟ್‌ ಮಾಡಲು ಒಂದು ಕಾರಣವಿದೆ. ಅದೇ ಶಕ್ತಿಧಾಮ. ಪಾರ್ವತಮ್ಮ ರಾಜ್‌ ಕುಮಾರ್‌ ತಮ್ಮ ಎರಡು ಕಣ್ಣಿನ ರೀತಿಯಲ್ಲಿ ಕಾಪಾಡಿಕೊಂಡು ಬಂದ ರಿಹ್ಯಾಬಿಲಿಟೇಶನ್ ಸೆಂಟರ್. ಪಾರ್ವತಮ್ಮ ಅವರ ನಂತರ ಈ ಸಂಸ್ಥೆಯನ್ನು ಗೀತಾ ಶಿವರಾಜ್‌ ಕುಮಾರ್‌ ಮುನ್ನಡೆಸುತ್ತಾ ಬರ್ತಿದ್ದಾರೆ. ಅಲ್ಲಿರೋ ಮಹಿಳೆ ಮತ್ತು ಮಕ್ಕಳಿಗೆ ಯಾವುದಾದರೂ ರೀತಿಯಲ್ಲಿ, ಅವರೇ ಸ್ವಾವಲಂಬಿಗಳಾಗಳು ಒಂದು ಕೆಲಸ ಬೇಕು ಎನ್ನುವ ಕಾರಣಕ್ಕೆ ಗೀತಕ್ಕ ಕಂಡು ಹಿಡಿದ  ಪ್ಲಾನ್ ಇದು. ಅದಕ್ಕಾಗಿ ಅಲ್ಲಿರೋ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಬೇಕಿಂಗ್‌ ಟ್ರೈನಿಂಗ್‌ ಕೊಟ್ಟು ಕುಕ್ಕಿಸ್‌, ಕೇಕ್ ಹೀಗೆ ಇನ್ನೂ ಸಾಕಷ್ಟು ಬೇಕಿಂಗ್‌ ಫುಡ್‌ ಮಾಡಿಸುತ್ತಿದ್ದಾರೆ.

Jailer; ಮಾಸ್ ಅಂಡ್ ಕ್ಲಾಸ್ ಲುಕ್‌ನಲ್ಲಿ ರಜನಿಕಾಂತ್ ಮಿಂಚಿಂಗ್; ಫೋಟೋ ವೈರಲ್

ಸದ್ಯ ವೇದ ಪ್ರಮೋಷನ್‌ ನಲ್ಲೂ ಇದೇ ಬೇಕಿಂಗ್‌ ಫುಡ್‌ ಗಳನ್ನ ಬಳಸಿಕೊಳ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಈ ತಿಂಡಿಗಳು ಮಾರಾಟಕ್ಕೆ ಸಿಗುವಂತೆ ಮಾಡೋದೇ ಗೀತಾ ಶಿವರಾಜ್‌ ಕುಮಾರ್‌ ಅವರ ಪ್ಲಾನ್‌. ಇದೇ ಪಾರ್ವತಮ್ಮ ರಾಜ್ ಕುಮಾರ್ ಅವರ ಕನಸಾಗಿತ್ತು. ಹೆಣ್ಣು ಮಕ್ಕಳ ಏಳಿಗೆಯನ್ನು ಪುನೀತ್‌ ರಾಜ್‌ ಕುಮಾರ್‌ ಬಯಸಿದ್ದು. ಅಂದು ಅತ್ತೆ ಹಾಕಿಕೊಟ್ಟ ಹಾದಿಯಲ್ಲಿ, ಮಾವ ಕಂಡ ಕನಸನ್ನು , ಅಪ್ಪು ಪಟ್ಟ ಆಸೆಯನ್ನ ಗೀತಾ ಶಿವರಾಜ್‌ ಕುಮಾರ್‌ ಈ ರೀತಿ ನನಸು ಮಾಡುತ್ತಿದ್ದಾರೆ. 


 

click me!