ದುನಿಯಾ ವಿಜಯ್ ಅಭಿನಯದ ಭೀಮ ಬಗ್ಗೆ ಇನ್ನಿಲ್ಲದ ಒಂದು ದೊಡ್ಡ ಹೋಪ್ ಸ್ಯಾಂಡಲ್‌ವುಡ್ ಇಂಡಸ್ಟ್ರಿಯಲ್ಲಿ ಕ್ರಿಯೇಟ್ ಆಗಿದ್ದು, ಇಂದು ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯುತ್ತಿದೆ. ಭೀಮನಿಗೆ ಟಗರು ಶಿವಣ್ಣ ಸಾಥ್ ಕೊಟ್ಟಿದ್ದಾರೆ.
ದುನಿಯಾ ವಿಜಯ್ ಅಭಿನಯದ ಭೀಮ ಬಗ್ಗೆ ಇನ್ನಿಲ್ಲದ ಒಂದು ದೊಡ್ಡ ಹೋಪ್ ಸ್ಯಾಂಡಲ್‌ವುಡ್ ಇಂಡಸ್ಟ್ರಿಯಲ್ಲಿ ಕ್ರಿಯೇಟ್ ಆಗಿದ್ದು, ಇಂದು ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯುತ್ತಿದೆ. ಭೀಮನಿಗೆ ಟಗರು ಶಿವಣ್ಣ ಸಾಥ್ ಕೊಟ್ಟಿದ್ದಾರೆ. ಹೌದು! ಭೀಮ ಪ್ರಿ ರಿಲೀಸ್ ಇವೆಂಟ್‌ಗೆ ಅತಿಥಿಯಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಆಗಮಿಸಿದ್ದು, ಚಿತ್ರದ ಟ್ರೈಲರ್ ಲಾಂಚ್ ಮಾಡಿ ಶುಭ ಹಾರೈಸಿದ್ದಾರೆ. ಶಿವಣ್ಣ ದಂಪತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದುನಿಯಾ ವಿಜಯ್ ಗೌರವಿಸಿದ್ದಾರೆ. ವಿಶೇಷವಾಗಿ ನಟ ದುನಿಯಾ ವಿಜಯ್‌ಗೆ ಶಿವಣ್ಣ ವಿಶೇಷ ಉಡುಗೊರೆ ನೀಡಿದ್ದಾರೆ. ಈ ವೇಳೆ ವಿಜಯ್ ಶಿವಣ್ಣ ದಂಪತಿ ಕಾಲಿಗೆ ಬಿದ್ದು ಆರ್ಶಿವಾದ ಪಡೆದಿದ್ದಾರೆ.
ಸಲಗ ಸಿನಿಮಾ ಟೈಂ ನಲ್ಲಿ ಅಪ್ಪು ನಾನು ಇದ್ವಿ: ನಮ್ಮ ಸಿನಿಮಾ ಇಂಡಸ್ಟ್ರಿಲಿ ಎಲ್ಲರೂ ಒಂದೇ. ಒಂದು ಚಿಕ್ಕ ಪಾತ್ರ ಅಂದ್ರೂ ಮಾಡ್ತೀನಿ ಅಂದಿದ್ದೆ. ಸಿನಿಮಾ ಥಿಯೇಟರ್‌ಗೆ ಹೋಗಿ ದುನಿಯಾ ಸಿನಿಮಾ ನೋಡಿದ್ದೆ. ವಿಜಯ್ ಜೊತೆ ಲೂಸ್ ಮಾದ ಯೋಗಿನೂ ಬಂದ್ರು. ಯೋಗಿ ಅಂದ್ರೆ ನನ್ಗೆ ತುಂಬಾ ಇಷ್ಟ. ಸಲಗ ಸಿನಿಮಾ ಟೈಂ ನಲ್ಲಿ ಅಪ್ಪು ನಾನು ಇದ್ವಿ, ಇವತ್ತೂ ಅಪ್ಪುನೂ ನಮ್ ಜೊತೆ ಇದ್ದಾನೆ, ಹಾಗಾಗಿ ಭೀಮಗೆ ಬಂದಿದ್ದಾನೆ. ಅಪ್ಪು ಇಲ್ಲ ಅನ್ಕೊಬಾರದು. ಅಪ್ಪು ಹೇಗೋ ದುನಿಯಾ ವಿಜಯ್ ಕೂಡಾ ನನಗೆ ತಮ್ಮನ ಥರ. ವಿಜಯ್ ಸಪೋರ್ಟ್‌ಗೆ ನಾನು ಹಾಗೂ ಅಭಿಮಾನಿ ದೇವರುಗಳು ಜೊತೆಗಿರ್ತಿವಿ. ನಿಮ್ ಡೈರೆಕ್ಷನ್‌ನಲ್ಲಿ ನಾನು ಒಂದು ಸಿನಿಮಾ ಮಾಡುವಂತಾಗಲಿ ಎಂದು ಶಿವಣ್ಣ ಹೇಳಿದರು.
ಸಲಗ ದಾಖಲೆ ಮುರಿಯಲಿದೆಯಾ ಭೀಮ: ಸಾವಿರ ಆನೆಗಳ ಶಕ್ತಿ ಭೀಮ ಎಂದ ದುನಿಯಾ ವಿಜಯ್!
ಆಗಸ್ಟ್ 9 ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗ್ತಿರುವ ಭೀಮ ಚಿತ್ರವನ್ನು ಬರಮಾಡಿಕೊಳ್ಳಲು ಕನ್ನಡ ಚಿತ್ರರಂಗ ಕಾದು ಕೂತಿದೆ. ಕರ್ನಾಟಕದಲ್ಲಿ ಭೀಮ ಸಿನಿಮಾ 400 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ರಿಲೀಸ್ಗಾಗಿಯೇ ಮುಚ್ಚಿರುವ 18 ಥಿಯೇಟರ್‌ಗಳು ರೀ-ಓಪನ್ ಆಗುತ್ತಿದೆ. ಹಾಗಾಗಿಯೇ ಆಗಸ್ಟ್-9 ರಂದು ಭೀಮ ಅಬ್ಬರ ಬಲು ಜೋರಾಗಿಯೇ ಇರುತ್ತದೆ. ಭೀಮನ ಅಭಿಮಾನಿಗಳು ದೊಡ್ಡ ಹಬ್ಬ ಮಾಡೋಕು ಇದೀಗ ರೆಡಿ ಆಗುತ್ತಿದ್ದಾರೆ. ಇನ್ನು ಸೈಲೆಂಟ್ ಆಗಿರೋ ಚಿತ್ರರಂಗಕ್ಕೆ ಭೀಮ ಆಕ್ಸಿಜನ್ ಆಗ್ತಾನ ಎಂಬುದನ್ನು ಕಾದು ನೋಡಬೇಕಿದೆ.