ಷರ್ಟ್‌ ಬಟನ್‌ ಓಪನ್‌ ಇಟ್ಟು ಗುಂಡಿನ ದಾಳಿಯಿಂದ ಬಾಲಕನ ಬಚಾವ್‌ ಮಾಡಿದ ನಟಿ ಸಂಯುಕ್ತಾ?

Published : Jan 19, 2025, 02:08 PM ISTUpdated : Jan 19, 2025, 04:56 PM IST
ಷರ್ಟ್‌ ಬಟನ್‌ ಓಪನ್‌ ಇಟ್ಟು ಗುಂಡಿನ ದಾಳಿಯಿಂದ ಬಾಲಕನ ಬಚಾವ್‌ ಮಾಡಿದ ನಟಿ ಸಂಯುಕ್ತಾ?

ಸಾರಾಂಶ

ಸಂಯುಕ್ತಾ ಹೆಗಡೆ ಅವರ ಶರ್ಟ್​ನ ಚಿತ್ರದ ಮೇಲೆ ಹಾಸ್ಯಮಯ ಪೋಸ್ಟ್​ ವೈರಲ್​ ಆಗಿದೆ. ಬಟನ್​ ತೆರೆದಿದ್ದರಿಂದ ಚಿತ್ರದಲ್ಲಿನ ಆನೆ ಸವಾರಿ ಮಾಡುವ ಬಾಲಕನ ಜೀವ ಉಳಿದಿದೆ ಎಂದು "ಅನ್​ನೋನ್​ ಅಡ್ಡಾ" ಪೇಜ್​ ತಮಾಷೆ ಮಾಡಿದೆ. ಈ ಪೋಸ್ಟ್​ಗೆ ನೆಟ್ಟಿಗರಿಂದ ರಂಜನೀಯ ಪ್ರತಿಕ್ರಿಯೆಗಳು ಬಂದಿವೆ.

ಇಂದು ಸೋಷಿಯಲ್​  ಮೀಡಿಯಾ ಬೆಳೆದಂತೆ, ಹಲವರಿಗೆ ಇದು ಉದ್ಯೋಗದ ಮಾರ್ಗವನ್ನು ತೋರಿಸಿಕೊಟ್ಟಿದ್ದರೆ, ಮತ್ತೆ ಕೆಲವರಿಗೆ ಮೀಮ್ಸ್​, ಜೋಕ್ಸ್​ಗಳಿಂದ ಜನರನ್ನು ನಕ್ಕುನಗಿಸುವ ದಾರಿಯನ್ನೂ ತೋರಿಸಿದೆ. ಸುಮ್ಮನೇ ಬೇಸರವಾದಾಗ ಮೊಬೈಲ್​ ಸ್ಕ್ರೋಲ್​ ಮಾಡುತ್ತಾ ಹೋದರೆ ಅಲ್ಲಿ ಕಾಣುವ ಮೀಮ್ಸ್​, ಜೋಕ್ಸ್​ಗಳು ಮನಸ್ಸನ್ನು ನಿರಾಳ ಮಾಡುವುದಂತೂ ಖಂಡಿತ. ಕೆಲವೊಂದು ರೀಲ್ಸ್​ಗಳು ನಮ್ಮನ್ನು ಬಿದ್ದೂ ಬಿದ್ದೂ ನಗುವಂತೆ  ಮಾಡಿದರೆ, ಮತ್ತೆ ಕೆಲವರು ಹಾಕುವ ಪೋಸ್ಟ್​, ಕಮೆಂಟ್ಸ್​ ನೋಡಿ ಅಬ್ಬಾ ಇವರದ್ದು ಅದೆಂಥ ತಲೆ, ಇಂಥ ಐಡಿಯಾ ಎಲ್ಲಿಂದ ಬರತ್ತಪ್ಪಾ ಎಂದೂ ಎನ್ನಿಸುವುದು ಉಂಟು.

ಈಗ ಅಂಥದ್ದೇ ಒಂದು ಪೋಸ್ಟ್​ ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗಿದೆ. ಇದರಲ್ಲಿ ನಟಿ ಸಂಯುಕ್ತಾ ಹೆಗಡೆ ಒಂದು ಡ್ರೆಸ್​ ಹಾಕಿಕೊಂಡಿದ್ದಾರೆ. ಅದರ ಮೇಲಿನ ಬಟನ್​ ಓಪನ್​ ಆಗಿದೆ. ಆ ಷರ್ಟ್ ಮೇಲೆ ಆನೆಯ ಮೇಲೆ ಬಾಲಕನೊಬ್ಬ ಕುಳಿತುಕೊಂಡಿರುವ ದೃಶ್ಯವಿದೆ. ಹಿಂದುಗಡೆಯಿಂದ ಒಬ್ಬ ಶೂಟ್​ ಮಾಡುತ್ತಿದ್ದಾನೆ. ಷರ್ಟ್​ ಬಟನ್​ ಬಿಚ್ಚಿದ್ದರಿಂದ ಶೂಟ್​ ಮಾಡುತ್ತಿರುವ ವ್ಯಕ್ತಿ ಒಂದು ಕಡೆ, ಆನೆಯ ಎದುರಿಗೆ ಕುಳಿತಿರುವ ಬಾಲಕ ಮತ್ತೊಂದು ಕಡೆ ಇದ್ದಾನೆ. ಇದನ್ನು ನೋಡಿ ಬಹುಶಃ ಎಲ್ಲರೂ ಸುಮ್ಮನೇ  ಇರುತ್ತಿದ್ದರೋ ಏನೋ. ಆದರೆ ಅನ್​ನೋನ್​ ಅಡ್ಡಾ ಎನ್ನುವ ಪೇಜ್​ನಲ್ಲಿ ಈ ಷರ್ಟ್​ ಇಟ್ಟುಕೊಂಡು ಜೋಕ್​ ಮಾಡಲಾಗಿದೆ. ಗುಂಡಿ ಹಾಕದೇ ಜೀವ ಉಳಿಸಿದಾಕೆ ಎಂದು ಬರೆಯಲಾಗಿದೆ.

ಮಂಚದ ಮೇಲೇರಿದ ನಿವೇದಿತಾ ಇದೇನಿದು ಅವತಾರ? ಎದುರಿಗಿರೋ ವ್ಯಕ್ತಿ ಮೇಲೆ ನೆಟ್ಟಿಗರ ಕಣ್ಣು!

ಅಷ್ಟಕ್ಕೂ ಈ ಫೋಟೋ ಅನ್ನು ಆರಂಭದಲ್ಲಿ ಸಂಯುಕ್ತಾ ಅವರು ಶೇರ್​ ಮಾಡಿದ್ದಾರೆ. ಅದಕ್ಕೆ ದಿಲೀಪ್​ವಿಕೆ ಎನ್ನುವವರು ಈ ರೀತಿ ರಿಪ್ಲೈ ಮಾಡಿದ್ದಾರೆ. ಬಾಲಕ ಸಾಯುವುದರಿಂದ ನೀವು ತಪ್ಪಿಸಿದ್ದೀರಿ ಎಂದು. ಅದನ್ನೇ ಈಗ ಅನ್​ನೋನ್​ ಅಡ್ಡಾದಲ್ಲಿ ಶೇರ್​ ಮಾಡಲಾಗಿದೆ. ಇದಕ್ಕೆ ನಕ್ಕು ನಗಿಸುವ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗಿದೆ. 

ನಿನ್ನೊಂದು ಗುಂಡಿ ತೆಗೆದಿದ್ದರೆ ಆನೆ ಸತ್ತೋಗಿರೋದು ಎಂದು ಒಬ್ಬರು ಹೇಳಿದ್ರೆ, ಇನ್ನೊಂದ್ ಗುಂಡಿ ತೆಗ್ದಿದ್ರೆ ಆನೆ ನೆ ಎರಡು ಭಾಗ ಮಾಡ್ಬೋದಿತ್ತು, ಮುಂದೆ ಕುಳಿತಿರೋ ಹುಡುಗನನ್ನು ಮನೆಗೆ ಕಳ್ಸಿ  ಹಿಂದೆ ಶೂಟ್​ ಮಾಡ್ತಿರೋರನ್ನು  ಹಿಡ್ಕೋಬಹುದಿತ್ತು ಎಂದಿದ್ದಾರೆ. ಮತ್ತೊಬ್ಬ ಕಮೆಂಟಿಗ ಬಹುಶಃ ಸಂಯುಕ್ತಾ UI ಮೂವಿ ನೋಡಿರಬೇಕು ಎಂದಿದ್ದರೆ, ಇಂಥದ್ದೆಲ್ಲಾ ತಲೆ ಎಲ್ಲಿಂದ ಬರ್ತದೆ ಗುರೂ ಎಂದು ಕೆಲವರು ಪ್ರಶ್ನಿಸಿದ್ದಾರೆ. ನಿಮ್ಮ ಕಾಲನ್ನು ಪ್ಲೀಸ್​ ಕೊಡಿ, ಜೆರಾಕ್ಸ್​ ಮಾಡಿ ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಮತ್ತೋರ್ವ ಕಮೆಂಟಿಗ ಕೇಳಿದ್ದಾರೆ. 

ಪಾರದರ್ಶಕ ಡ್ರೆಸ್​ ತೊಟ್ಟು ಸೂರ್ಯನ ಬೆಳಕಲ್ಲಿ ನಿವೇದಿತಾ ರೀಲ್ಸ್​: ನೆಟ್ಟಿಗರು ಸುಮ್ನೆ ಇರ್ತಾರಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬರ್ತಾ ಬರ್ತಾ ಸಖತ್ Bold ಆಗ್ತಿದ್ದಾರೆ ಬಿಗ್ ಬಾಸ್ ಸಿಂಹಿಣಿ Sangeetha Sringeri
ಮದ್ವೆ ಬಗ್ಗೆ ಡಾಲಿ ಧನಂಜಯ್​ ಒಂದೇ ಒಂದು ಮಾತು: 67% Gen Z ಮದ್ವೆಗೆ ರೆಡಿ! ಅಂಥದ್ದೇನು ಹೇಳಿದ್ರು ನಟ?