ಸತತ 6 ಗಂಟೆ ಕಾಲ ನಡೆದ ಸರ್ಜರಿ ಯಶಸ್ವಿ, ನಟ ಶಿವರಾಜ್ ಕುಮಾರ್‌ ಐಸಿಯುಗೆ ಶಿಫ್ಟ್!

By Chethan Kumar  |  First Published Dec 25, 2024, 10:33 AM IST

ಎಲ್ಲರ ಹಾರೈಕೆ, ದೇವರ ಆಶೀರ್ವಾದಿಂದ ನಟ ಶಿವರಾಜ್ ಕುಮಾರ್ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಸರ್ಜರಿ ಬಳಿಕ ಅಮೆರಿಕದಿಂದ ವೈದ್ಯರು ಮಹತ್ವದ ಮಾಹಿತಿ ನೀಡಿದ್ದಾರೆ. ಸರ್ಜರಿ ಬಳಿಕ ಶಿವಣ್ಣನ ಆರೋಗ್ಯ ಹೇಗಿದೆ?


ಫ್ಲೋರಿಡಾ(ಡಿ.25) ನಟ ಶಿವರಾಜ್ ಕುಮಾರ್‌ಗೆ ಯಶಸ್ವಿಯಾಗಿ ಸರ್ಜರಿ ಮಾಡಲಾಗಿದೆ. ಅಮೇರಿಕಾದ ಪ್ಲೋರಿಡಾದ  ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ಗೆ ದಾಖಲಾಗಿದ್ದ ಶಿವರಾಜ್ ಕುಮಾರ್‌ಗೆ ಸತತ 6 ಗಂಟೆಗಳ ಕಾಲ ಪಿತ್ತಕೋಶ ಸರ್ಜರಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಶಿವರಾಜ್ ಕುಮಾರ್ ಆರೋಗ್ಯ ಸ್ಥರವಾಗಿದೆ ಎಂದು ಅಮೆರಿಕದಿಂದ ವೈದ್ಯರು ಮಾಹಿತಿ ನೀಡಿದ್ದಾರೆ. ಡಾ.ಮುರುಗೇಶ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.  ಅಮೇರಿಕಾ ಕಾಲಮಾನ ಮದ್ಯಾಹ್ನ 12 ಗಂಟೆಗೆ ಆಪರೇಷನ್ ಮುಗಿದಿದೆ.

ದೇವರ ಆಶೀರ್ವಾದ, ಎಲ್ಲರ ಹಾರೈಕೆಯಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಎಂದು ಅಮರಿಕದಿಂದ ಡಾ.ಮುರುಗೇಶ್ ಮಾಹಿತಿ ನೀಡಿದ್ದಾರೆ. ಶಸ್ತ್ರಚಿಕಿತ್ಸೆಗೆ ಶಿವರಾಜ್ ಕುಮಾರ್ ಉತ್ತಮವಾಗಿ ಸ್ಪಂದಿಸಿರುವ ಕಾರಣ ಎಲ್ಲವೂ ಸುಸೂತ್ರವಾಗಿ ನಡೆದಿದೆ ಎಂದಿದ್ದಾರೆ. ಪಿತ್ತ ಕೋಶ ಶಸ್ತ್ರಚಿಕಿತ್ಸೆ ಬಳಿಕ ಶಿವರಾಜ್ ಕುಮಾರ್ ಆರೋಗ್ಯ ಸ್ಥಿರವಾಗಿದೆ. ಶಿವರಾಜ್ ಕುಮಾರ್ ಆದಷ್ಟು ಬೇಗ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದು ಡಾ. ಮರುಗೇಶ್ ಹೇಳಿದ್ದಾರೆ. 

Tap to resize

Latest Videos

undefined

ನಿಮ್ಮ ಬಯೋಪಿಕ್​ಗೆ ನಟ ಯಾರಾಗ್ಬೇಕು ಎಂಬ ಪ್ರಶ್ನೆಗೆ ಶಿವರಾಜ್​ ಕುಮಾರ್​ ಕೊಟ್ಟ ಉತ್ತರ ನೋಡಿ...

ಸದ್ಯ ಐಸಿಯುನಲ್ಲಿರುವ ಶಿವರಾಜ್ ಕುಮಾರ್‌ಗೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ.  10 ದಿನಗಳ ಕಾಲ ಆಸ್ಪತ್ರೆಯಲ್ಲಿ ಶಿವರಾಜ್ ಕುಮಾರ್ ಇರಲಿದ್ದಾರೆ. ಶಿವರಾಜ್ ಕುಮಾರ್ ಆರೋಗ್ಯದ ಕುರಿತು ತೀವ್ರ ನಿಗಾವಹಿಸಲಾಗುತ್ತದೆ. 10 ದಿನಗಳ ಬಳಿಕ ಶಿವರಾಜ್ ಕುಮಾರ್ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 
 
ಶಿವರಾಜ್ ಕುಮಾರ್ ಯಶಸ್ವಿ ಶಸ್ತ್ರಚಿಕಿತ್ಸೆ ಮಾಹಿತಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ನಿರಾಳರಾಗಿದ್ದಾರೆ. ಇಷ್ಟೇ ಅಲ್ಲ ಶಿವರಾಜ್ ಕುಮಾರ್ ಉತ್ತಮ ಆರೋಗ್ಯಕ್ಕೆ ಪೂಜೆ ಪುನಸ್ಕಾರ ಮುಂದುವರಿದಿದೆ. ಮಂಗಳವಾರ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ ಹಿನ್ನಲೆಯಲ್ಲಿ ಹಲವು ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ನಡೆದಿತ್ತು. ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದೀಗ ಶಿವರಾಜ್ ಕುಮಾರ್ ಆಸ್ಪತ್ರೆಯಿಂದ ಬಿಡುಗಡೆಯಾಗುವುದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಶಿವರಾಜ್ ಕುಮಾರ್‌ಗೆ ಅದ್ಧೂರಿ ಸ್ವಾಗತ ನೀಡಲು ಅಭಿಮಾನಿಗಳು ತಯಾರಾಗಿದ್ದಾರೆ. ಆದರೆ ಇನ್ನೂ 10 ದಿನಗಳ ಕಾಲ ಶಿವರಾಜ್ ಕುಮಾರ್‌ ಆಸ್ಪ್ರೆಯಲ್ಲಿ ಇರಬೇಕಾಗಿದೆ. 
 

click me!