ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ನಟಿ ಪವಿತ್ರಾ ಗೌಡ ಸದ್ಯ ಜಾಮೀನು ಪಡೆದುಕೊಂಡಿದ್ದಾರೆ . ಅವರ ಮಾಜಿ ಪತಿ ಸಂಜಯ್ ಸಿಂಗ್ ಅವರು ಈಗ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳ ಮುಂದೆ ಬಂದು ...
ಪವಿತ್ರಾ ಗೌಡ (Pavithra Gowda) ಮಾಜಿ ಪತಿ ಸಂಜಯ್ ಸಿಂಗ್ (Sanjay Singh) ಅವರು ಬಹಳಷ್ಟು ಮಾಧ್ಯಮಗಳಿಗೆ ಹಾಗೂ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನಗಳನ್ನು ನೀಡುತ್ತಿರುವುದು ಗೊತ್ತೇ ಇದೆ. ಆ ಸಂಜಯ್ ಬಗ್ಗೆ ಯೂಟ್ಯಬ್ ಚಾನೆಲ್ ಒಂದು 'ಅವರು ದುಡ್ಡು ತೆಗೆದುಕೊಂಡು ಸಂದರ್ಶನ ನೀಡುತ್ತಿದ್ದಾರೆ ಎಂಬ ಆಡಿಯೋ ಇರುವ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಅದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಕೂಡ ಆಗುತ್ತಿದೆ. ಆದರೆ, ಆ ವಿಡಿಯೋಗೆ ಕಾಮೆಂಟ್ ಏನು ಹೇಳುತ್ತಿದೆ?
ಹೌದು, ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ವೈರಲ್ ವಿಡಿಯೋ ನೋಡಿದ ಹೆಚ್ಚಿನವರು ಅವರ ಪರವಾಗಿಯೇ ಕಾಮೆಂಟ್ ಮಾಡಿದ್ದಾರೆ. 'ಹೌದು, ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳು ಹಾಗು ಯೂಟ್ಯೂಬ್ ಚಾನೆಲ್‌ಗಳು ಅವರ ಸಂದರ್ಶನಗಳನ್ನು ಪ್ರಸಾರ ಮಾಡಿ ಟಿಆರ್‌ಪಿ, ವ್ಯೂಸ್, ಹಣ ಪಡೆಯುತ್ತಿರುವಾಗ ಅವರಿಗೆ ಹಣ ಕೊಟ್ಟರೆ ತಪ್ಪೇನು? ಅಷ್ಟಕ್ಕೂ ಅವರೇನು ಲಕ್ಷಗಟ್ಟಲೆ ಕೇಳುತ್ತಿಲ್ಲ. ಒಂದು ತಾಸಿಗೂ ಕಡಿಮೆ ಅವಧಿಯ ಇಂಟರ್‌ವ್ಯೂಗೆ ಬರೀ ಮೂರು ಸಾವಿರ ರೂಪಾಯಿ ಅಷ್ಟೇ' ಎನ್ನುತ್ತಿದ್ದಾರೆ ನೆಟ್ಟಿಗರು.
undefined
ಅಲ್ಲು ಅರ್ಜುನ್ಗೆ ಜ್ವರ, ಟಾಲಿವುಡ್ಗೆ ಬರೆ! ಪುಷ್ಪಾ 2 ಟೀಮ್‌ಗೆ ಸಕ್ಸಸ್ ಸಿಕ್ಕರೂ ಖುಷಿ ಇಲ್ವಾ?
ವಿಷಯ ಏನಪ್ಪಾ ಅಂದ್ರೆ, ಬಹುತೇಕ ಎಲ್ಲರಿಗೂ ಗೊತ್ತಿರುವಂತೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ನಟಿ ಪವಿತ್ರಾ ಗೌಡ ಸದ್ಯ ಜಾಮೀನು ಪಡೆದುಕೊಂಡಿದ್ದಾರೆ . ಅವರ ಮಾಜಿ ಪತಿ ಸಂಜಯ್ ಸಿಂಗ್ ಅವರು ಈಗ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳ ಮುಂದೆ ಬಂದು ಮಾತನ್ನಾಡುತ್ತಿದ್ದಾರೆ. ಡಿವೋರ್ಸ್ ಆಗಿದ್ದರೂ, ಹೆಂಡತಿ-ಮಗಳು ತಮ್ಮಿಂದ ದೂರವಾಗಿದ್ದರೂ ಈಗಲೂ ಕೂಡ ವಾಪಸ್ ಬಂದರೆ ತಾವು ಮತ್ತೆ ಪವಿತ್ರಾ ಗೌಡ ಜೊತೆ ಮತ್ತೆ ಸಂಸಾರ ಮಾಡಲು ಸಿದ್ಧ ಎಂದೇ ಸಂಜಯ್ ಹೇಳುತ್ತಿದ್ದಾರೆ.
ಹಲವು ಮಿಡಿಯಾಗಳು ಹಾಗೂ ಸಾಮಾಜಿಕ ಜಾಲತಾಣಗಲ್ಲಿ ಸಂದರ್ಶನಗಳಲ್ಲಿ ಮಾತನಾಡಿರುವ ಸಂಜಯ್ ಸಿಂಗ್ 'ನಾನು ಈ ಮೊದಲು ಮಾತನ್ನಾಡಿದ್ದಕ್ಕೆ ಯಾವುದೇ ಹಣ ತೆಗೆದುಕೊಂಡಿರಲಿಲ್ಲ. ಆದರೆ ಈಗ ಒಂದು ತಾಸಿಗಿಂತ ಕಡಿಮೆ ಅವಧಿಯ ಸಂದರ್ಶನಕ್ಕೆ 3000 ರೂಪಾಯಿ ಚಾರ್ಜ್ ಮಾಡುತ್ತೇನೆ' ಎಂದು ಅದೂ ಒಂದು ಮಾಧ್ಯ,ಮ ಎಂಬಾ ಅರಿವಿದ್ದರೂ ನೇರವಾಗಿಯೇ ಹೇಳಿದ್ದಾರೆ. ಅವರ ಕ್ಲಾರಿಟಿ ಹಾಗೂ ವೃತ್ತಿಪರತೆಯನ್ನೇ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಬಂದಿರುವ ಹಲವು ಕಾಮೆಂಟ್‌ಗಳು ಇಲ್ಲಿವೆ ನೋಡಿ..
ನಾನೇ ದರ್ಶನ್‌ಗೆ ಹಣ ನೀಡಿ ಸಿನಿಮಾ ಮಾಡೋ ಶಕ್ತಿ ಇರುವಾಗ ಇಂಥ ಸುದ್ದಿ ಯಾಕೆ ಬೇಕು?
'ನಾನು ಅವನ ಸ್ಥಾನದಲ್ಲಿದ್ದರೆ 50 ಸಾವಿರ ಕೇಳ್ತಾ ಇದ್ದೆ,channel ರವರು ಲಕ್ಷಾಂತರ ಮಾಡಿಕೊಳ್ತಾ ಇರೋವಾಗ ಪಾಪ 3 ಸಾವಿರ ಕೇಳೋದರಲ್ಲಿ ತಪ್ಪೇನು?' ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು ಫ್ರೀ ಆಗಿ ಯಾಕೆ ಕೊಡ್ಬೇಕು ಈ ಮೀಡಿಯಾಗಳಿಗೆ, ಅವರು ಕೇಳಿರೋದು ತಪ್ಪಲ್ಲ' ಎಂದಿದ್ದಾರೆ. ಮಗದೊಬ್ಬರು 'ಅವನೇನು ಲಂಚ ಕೇಳ್ತಿದಾನ? ಅವನು ಬಂದ್ರೆ ನಿಮಗೆ ತಾನೇ ವ್ಯೂಸ್ ಬರೋದು...?' ಎಂದಿದ್ದಾರೆ. ಇನ್ನೊಬ್ಬರು 'ಅವನಿಗೆ ಹಣಕಾಸಿನ ಸಮಸ್ಯೆ ಇದೆ. ಕೇಳ್ತಾನೆ. ಅದು ಏನು ಜಾಸ್ತಿ ಕೇಳ್ತಾ ಇಲ್ಲ. ಕೇವಲ ಮೂರು ಸಾವಿರ ಅಷ್ಟೇ ಅಲ್ವಾ. ಅವನ ಊಟ ವಸತಿ ಖರ್ಚು ಇಲ್ಲ ಅನ್ಸುತ್ತೆ' ಎಂದು ಕಾಮೆಂಟ್ ಮಾಡಿದ್ದಾರೆ.
'ನೀವು ಅದರಿಂದ ಲಾಭ ಮಾಡಿಕೊಳ್ಳುತ್ತೀರಲ್ವಾ? ಕೊಟ್ಟರೆ ತಪ್ಪೇನಿಲ್ಲ ಬಿಡಿ' ಎಂದೂ, ಅವರು ಕೇಳಿದ್ದು ಸರಿಯಾಗಿದೆ,
ತುಂಬಾ ಹಣ ಕಡಿಮೆ ಕೇಳಿದ್ದಾರೆ ಮೊದಲು ಅವರಿಗೆ ಹಣ ನೀಡಿ' ಎಂದು ಹಲವರು ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ, ಈಗ ಸಂಜಯ್ ಸಿಂಗ್ ಅವರು ಪವಿತ್ರಾ ಹಾಗೂ ದರ್ಶನ್‌ಗಿಂತಲೂ ಹೆಚ್ಚು ಪ್ರಸಿದ್ಧಿ ಪಡೆಯುವ ಹಾದಿಯಲ್ಲಿ ಇದ್ದಾರಾ ಹೇಗೆ ಎಂಬ ಸಂಶಯ ಹಲವರಿಗೆ ಮೂಡುತ್ತಿರಬಹುದು. 'ಕಾಲಾಯ ತಸ್ಮೈ ನಮಃ' ಹಾಗೂ ಲೋಕೋ ಭಿನ್ನ ರುಚಿಃ' ಎಂಬ ಉಕ್ತಿಗಳು ನೆನಪಾದರೆ ತಪ್ಪೇನಿಲ್ಲ!
'ಯುಐ' ಬಗ್ಗೆ ಇವ್ರ ವಿಮರ್ಶೆ ಕೇಳಿದ್ರೆ ನೋಡೋದು ಬೇಡ ಅಂದ್ಕೊಂಡಿದ್ರೂ ನೀವು ಹೋಗ್ತೀರಾ!