ನಟ ಶಿವರಾಜ್ ಕುಮಾರ್ ಅವರು ಇದಾಗಲೇ 125ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದು, ಅದರಲ್ಲಿ ಎ ಯಿಂದ ಝಡ್‌ವರೆಗೆ ಯಾವ್ಯಾವ ಚಿತ್ರಗಳು ಇವೆ ಎನ್ನುವುದನ್ನು ಫಟಾಫಟ್ ಹೇಳಿದ್ದಾರೆ ನೋಡಿ...
ನಟ ಶಿವರಾಜ್ ಕುಮಾರ್ ಅವರು ಇದಾಗಲೇ 125ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1974ರಲ್ಲಿ ಶ್ರೀನಿವಾಸ ಕಲ್ಯಾಣದಲ್ಲಿ ಬಾಲ ನಟನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರಿಂದ ಹಿಡಿದು, ಇತ್ತೀಚಿನ ಬೈರತಿ ರಣಗಲ್ ಹಾಗೂ ಕರಟಕ ದಮನಕವರೆಗೆ ಅವರ ಹಲವು ಸಿನಿಮಾಗಳನ್ನು ಇದಾಗಲೇ ಅವರ ಅಭಿಮಾನಿಗಳು ವೀಕ್ಷಿಸಿದ್ದಾರೆ. ಆದರೆ, ಒಂದು ವಿಶೇಷ ಎಂದರೆ, ಎ ಯಿಂದ ಝಡ್‌ವರೆಗಿನ ತಮ್ಮ ಸಿನಿಮಾಗಳ ಹೆಸರುಗಳನ್ನು ಇದೀಗ ಶಿವಣ್ಣ ಅವರು ಪಟಪಟನೇ ಹೇಳುವ ಮೂಲಕ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
ಕೀರ್ತಿ ಎಂಟರ್‌ಟೇನ್‌ಮೆಂಟ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಶಿವಣ್ಣ ಅವರು ಎ ಯಿಂದ ಝಡ್‌ವರೆಗಿನ ಸಿನಿಮಾಗಳ ಹೆಸರನ್ನು ಹೇಳಿದ್ದಾರೆ. ಕ್ಯೂ, ಎಕ್ಸ್, ಡಬ್ಲ್ಯೂ ಮತ್ತು ಝಡ್‌ಗಳಿಂದ ಆರಂಭವಾಗುವ ಸಿನಿಮಾಗಳು ಅತಿವಿರಳ ಅಥವೇ ಇಲ್ಲವೇ ಇಲ್ಲ ಎನ್ನಬಹುದೇನೋ. ಇದೇ ಕಾರಣಕ್ಕೆ ಈ ಮೂರು ಶಬ್ದಗಳ ಚಿತ್ರಗಳ ಹೆಸರಿಗೆ ಬೇರೆ ಚಿತ್ರಗಳನ್ನು ಹೇಳಿರುವ ನಟ, ಉಳಿದ ಅಕ್ಷರಗಳ ಚಿತ್ರಗಳನ್ನು ಇಲ್ಲಿ ಹೇಳಿದ್ದಾರೆ ನೋಡಿ!
ಗೀತಾ ಬೇರೆ ಪಕ್ಷಕ್ಕೆ ಹೋದ್ರೂ ಸಪೋರ್ಟ್ ಮಾಡುವೆ: ರಾಜಕೀಯ ಎಂಟ್ರಿ ಕುರಿತು ಶಿವರಾಜ್ ಕುಮಾರ್ ಹೇಳಿದ್ದೇನು?
ಶಿವರಾಜ್ ಕುಮಾರ್ ಅವರು ಹೇಳಿರುವ ತಮ್ಮ ಚಿತ್ರದ ಹೆಸರುಗಳು ಹೀಗಿದೆ: A- ಆನಂದ್, B-ಬೈರತಿ ರಣಗಲ್, C- ಚಿಗುರಿದ ಕನಸು, D- ದೊರೆ, G-ಗಂಧದ ಗುಡಿ, H-ಹಗಲು ವೇಷ, I-ಇನ್‌ಸ್ಪೆಕ್ಟರ್ ವಿಕ್ರಮ್, J-ಜನುಮದ ಜೋಡಿ, K- ಕೋದಂಡ ರಾಮ, L-ಲವಕುಶ, M-ಮಫ್ತಿ, N- O-ಓಂ, P-ಪ್ರೀತ್ಸೆ, Q- ರುತ್ಸು (ಇದರಲ್ಲಿ ಕ್ಯೂ ಸೈಲೆಂಟ್ ಎಂದಿದ್ದಾರೆ), R- ರಥಸಪ್ತಮಿ, S- ಸವ್ಯಸಾಚಿ, T-ತವರಿಗೆ ಬಾ ತಂಗಿ, U- ಉತ್ತರಾಖಾಂಡ, V-ವಿಶ್ವ, W- ವಜ್ರಕಾಯ, X- ಇದಕ್ಕೆ ತಪಸ್ಸು ಎಂದಿದ್ದಾರೆ. Y- ಯುವರಾಜ, Z- ಇದಕ್ಕೆ ವಿಲನ್ ಎಂದಿದ್ದಾರೆ.
ಇನ್ನು, ನಟ ಶಿವರಾಜ್ ಕುಮಾರ್ ಕುರಿತು ಹೇಳುವುದಾದರೆ, ಇವರು ಕ್ಯಾನ್ಸರ್ ಗೆದ್ದು, ಸಿನಿಮಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಆರು ಗಂಟೆಗಳ ಕಾಲ ನಡೆದಿರುವ ಶಸ್ತ್ರಚಿಕಿತ್ಸೆಯಿಂದ ಕೆಲ ಕಾಲ ರೆಸ್ಟ್ ತೆಗೆದುಕೊಂಡಿದ್ದ ಶಿವಣ್ಣ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಕಿಮೋ ಥೆರಪಿ ಬಳಿಕವೂ ಸ್ವಲ್ಪವೂ ಅಚಲರಾಗದೇ ನಟ ಫಿಟ್ ಆ್ಯಂಡ್ ಫೈನ್ ಆಗಿದ್ದ ಕಾರಣ, ಅವರು ಅನಾರೋಗ್ಯದಿಂದ ಬಳಲುತ್ತಿದ್ದುದು ಬಹುತೇಕರಿಗೆ ತಿಳಿದೇ ಇರಲಿಲ್ಲ. ಕಳೆದ ನಾಲ್ಕೈದು ತಿಂಗಳುಗಳ ಹಿಂದೆಯೇ ಅವರಿಗೆ ಈ ಸಮಸ್ಯೆಯ ಅರಿವು ಇತ್ತು. ಆದರೆ, ಅಮೆರಿಕಕ್ಕೆ ಚಿಕಿತ್ಸೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಮಾತ್ರ ಬರಸಿಡಿಲಿನಂತೆ ಬಡಿದಿತ್ತು. ಮೊದಲ ಕಿಮೋ ಥೆರಪಿ ಮಾರನೆಯ ದಿನವೇ ಶಿವಣ್ಣ, ಶೂಟಿಂಗ್ನಲ್ಲಿ ಭಾಗಿಯಾಗಿದ್ದು ಆ್ಯಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ಆದ್ದರಿಂದ ಅವರ ಒಳಗೇ ಅನುಭವಿಸುತ್ತಿದ್ದ ನೋವು ಅವರ ಕುಟುಂಬಸ್ಥರಿಗೆ ಮಾತ್ರ ತಿಳಿದಿತ್ತು. ಇದೀಗ ಎಲ್ಲಾ ನೋವನ್ನು ನುಂಗಿ ಮತ್ತೆ ಕೆಲಸ ಶುರು ಮಾಡಿದ್ದಾರೆ.