ನಾನು ನನ್ ಕೆಲಸನಾ ಸೀರಿಯಸ್ ಆಗಿ ತಗೋತೀನಿ.. ಫ್ಯಾಷನೆಟ್ ಆಗಿ ಕೆಲಸ ಮಾಡ್ತೀನಿ.. ನಂಗೆ ತುಂಬಾ ಕಾಮೆಂಟ್ ಬರ್ತಾ ಇರುತ್ತೆ ಗೊತ್ತು, ಅದ್ರೆ ಅದನ್ನೆಲ್ಲಾ ನಾನು ಓಪನ್ ಮಾಡಿ ನೋಡ್ತಾ ಇರಲ್ಲ. ನಿಜ ಹೇಳ್ಬೇಕು ಅಂದ್ರೆ..
ನಿವೇದಿತಾ ಗೌಡ (Niveditha Gowda) ಮಾತಿದು.. 'ನಮ್ ಸೊಸಾಯ್ಟಿನೇ ಹಾಗಿದೆ.. ಏನೇ ಆದ್ರೂ ಕೂಡ ಹುಡುಗಿಯರದೇ ತಪ್ಪು ಅಂತ ಫಸ್ಟ್ ಅವ್ರನ್ನೇ ಬ್ಲೇಮ್ ಮಾಡ್ತಾರೆ.. ಇವ್ರೇ ಸರಿಯಿಲ್ಲ, ಇವ್ರಿಗೇ ಎನೋ ಇತ್ತು, ಹಾಗೆ ಹೀಗೆ ಅಂತ ಸಮಾಜದಲ್ಲಿ ಹೆಣ್ಣಿನ ಬಗ್ಗೆಯೇ ಮಾತನ್ನಾಡೋದು ಸಹಜ.. ಅದಕ್ಕೆ ಬಹಳಷ್ಟು ಉದಾಹರಣೆ ಕೊಡಬಹುದು. ಅವ್ರ ಲೈಪ್ಪಲ್ಲಿ ಏನೇನ್ ಪ್ರಾಬ್ಲಂ ಇತ್ತು ಅನ್ನೋದು ಯಾರಿಗೂ ಗೊತ್ತಿಲ್ಲ.. ಅದನ್ನ ನಾನು ಹೇಳಿಕೊಳ್ಳೋದೂ ಇಲ್ಲ.. ನಮ್ಮ ಸಮಸ್ಯೆನಾ ಹೇಳಿಕೊಳ್ಳಬೇಕಾದ ಅಗತ್ಯ ಕೂಡ ಇಲ್ಲ..
ಆದ್ರೆ, ಹುಡುಗೀರ ವಿಷ್ಯದಲ್ಲಿ ಯಾವಾಗ್ಲೂ ಬ್ಲೇಮ್ ಗೇಮ್ ನಡಿತಾನೇ ಇರುತ್ತೆ... ಅದನ್ನು ನಾವು ಚೇಂಜ್ ಮಾಡೋದಕ್ಕೂ ಆಗಲ್ಲ.. ಟೀಕೆ ಮಾಡೋವ್ರಿಗೇ ಬರ್ಬೇಕು ಅದು, ಅವ್ರನ್ನ ನಾವು ಚೇಂಜ್ ಮಾಡೋಕೂ ಆಗಲ್ಲ.. ಮಾನವೀಯತೆ ಅನ್ನೋದು ಎಲ್ಲವ್ರಿಗೂ ಇರಲ್ಲ ಅನ್ನೋದು ನನ್ನ ಭಾವನೆ, ಅದಿದ್ರೆ ಯಾರೂ ಹಾಗೆಲ್ಲಾ ಮಾಡಲ್ಲ.. ನಾನು ಅದ್ರಿಂದ ಓವರ್‌ಕಂ ಹೇಗೆ ಮಾಡ್ತೀನಿ ಅನ್ನೋ ಪ್ರಶ್ನೆಗೆ ಉತ್ತರ- ಫಸ್ಟ್ ಆಫ್ ಆಲ್ ನಾನು ಅದನ್ನಲ್ಲಾ ನನ್ನ ಮನಸ್ಸಿಗೇ ತಗೊಳ್ಳೋದೇ ಇಲ್ಲ. ಇನ್ನು ಹೊರಗೆ ಬರೋ ಮಾತೆಲ್ಲಿ?
ಚಂದನ್ ಶೆಟ್ಟಿ & ನಿವೇದಿತಾ ಗೌಡ ಸಿನಿಮಾಗಿಂತ ಹೆಚ್ಚು ಪರ್ಸನಲ್ ಟಾರ್ಗೆಟ್ ಆಗ್ತಿರೋದು ಯಾಕೆ? ಇಲ್ಲಿದೆ....
ಬೇರೆಯವ್ರು ನನ್ನ ಬಗ್ಗೆ ಏನ್ ಹೇಳ್ತಾರೆ ಅನ್ನೋದು ನನ್ನ ಸಮಸ್ಯೆನೇ ಅಲ್ಲ, ಅದು ಅವ್ರ ಸಮಸ್ಯೆ.. ಹೀಗಾಗಿ ನಾನು ಅದ್ರಿಂದ ಹೊರಗೆ ಬರೋದು ಹೇಗೆ ಅನ್ನೋದು ನನ್ ಸಮಸ್ಯೆ ಅಲ್ಲವೆ ಅಲ್ಲ.. ಯಾಕಂದ್ರೆ ನಾನು ನನ್ನೊಳಗೆ ಬೇರೆಯವ್ರ ಮಾತನ್ನೆಲ್ಲಾ ತಗೊಳ್ಳೋದೇ ಇಲ್ಲ. ಅವ್ರು ನನ್ನ ಬಗ್ಗೆ ಯೋಚ್ನೆ ಮಾಡ್ತಾರೆ, ನನ್ ಬಗ್ಗೆ ಮಾತಾಡ್ತಾರೆ ಅನ್ನೋದೆಲ್ಲಾ ಅವ್ರ ಪ್ರಾಬ್ಲಂ.. ಸೋ, ನಾನು ಅದ್ರ ಬಗ್ಗೆ ಕುಗ್ಗೋದಕ್ಕೆ ಅಸಾಧ್ಯ.. ಯಾಕಂದ್ರೆ, ನನ್ ಮೈಂಡ್ ಅಷ್ಟು ವೀಕ್ ಇಲ್ಲ..
ನಾನು ನನ್ ಕೆಲಸನಾ ಸೀರಿಯಸ್ ಆಗಿ ತಗೋತೀನಿ.. ಫ್ಯಾಷನೆಟ್ ಆಗಿ ಕೆಲಸ ಮಾಡ್ತೀನಿ, ಡೆಡಿಕೇಟೆಡ್ ಆಗಿ ಕೆಲಸ ಮಾಡ್ತಾ ಇರ್ತೀನಿ.. ನಂಗೆ ತುಂಬಾ ಕಾಮೆಂಟ್ ಬರ್ತಾ ಇರುತ್ತೆ ಗೊತ್ತು, ಅದ್ರೆ ಅದನ್ನೆಲ್ಲಾ ನಾನು ಓಪನ್ ಮಾಡಿ ನೋಡ್ತಾ ಇರಲ್ಲ. ನಿಜ ಹೇಳ್ಬೇಕು ಅಂದ್ರೆ ನಂಗೆ ಏನೇನ್ ಕಾಮೆಂಟ್ ಬರುತ್ತೆ ಸೋಷಿಯಲ್ ಮೀಡಿಯಾದಲ್ಲಿ ಅಂತ ನಾನು ನೋಡೋದೇ ಇಲ್ಲ.. ಆದ್ರೆ ಒಂದ್ ಮಾತು, ಬೇರೆಯವ್ರ ಬಗ್ಗೆ ಕೆಟ್ಟದಾಗಿ ಯೋಚ್ನೆ ಮಾಡಫದ್ರಿಮದ ಅವ್ರಿಗೆ ಖುಷಿ ಸಿಗುತ್ತಾ? ಮಾಡಿಕೊಳ್ಲಿ ಬಿಡಿ, ಅವ್ರನ್ನ ದೇವ್ರು ನೋಡ್ಕೊಳ್ತಾನೆ..
ತೇಜಸ್ವಿ ಸೂರ್ಯ-ಶಿವಶ್ರೀ ಮದುವೆಗೂ ಬಂದ ಅಣ್ಣಾವ್ರು; ಕನ್ನಡದ ಕಂಪು ಬೀರಿದ ಡಾ ರಾಜ್‌ಕುಮಾರ್!
ನಾನು ನನ್ನ ಪಾಡಿಗೆ ಇಷ್ಟಪಟ್ಟು ಕೆಲಸ ಮಾಡ್ತಾ ಇರ್ತೀನಿ.. ಕೆಲವೊಬ್ರು ನೆಗೆಟಿವ್ ಆಗಿ ಥಿಂಕ್ ಮಾಡೋವ್ರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಹಾಕ್ತಾ ಕೂತಿದ್ರೂ ಬಹಳಷ್ಟು ಜನ ಲೈವಲ್ಲಿ ಬಂದು ಇಷ್ಟಪಟ್ಟು ಮಾತಾಡಿಸ್ತಾ ಇರ್ತಾರೆ.. ಅದಕ್ಕೆ ನಂಗೆ ಖುಷಿ ಆಗುತ್ತೆ.. ತುಂಬಾ ಜನ್ರು ಇಷ್ಟಪಡವ್ರು ಇದ್ದಾರೆ, ಅವ್ರ ಬಗ್ಗೆ ಅಷ್ಟೇ ನಾನು ಯೋಚ್ನೆ ಮಾಡ್ತೀನಿ.. ಅವ್ರು ಸೋಷಿಯಲ್ ಮೀಡಿಯಾದಲ್ಲಿ 'ಇಷ್ಟ' ಅಂತ ಕಾಮೆಂಟ್ ಹಾಕಲ್ಲ ಅಷ್ಟೇ..
ನನ್ ಪ್ರಕಾರ ಹೆಣ್ಣು ಮಕ್ಕಳೂ ಕೆಲಸ ಮಾಡ್ಬೇಕು, ಅವ್ರದ್ದೇ ಆದ ಸ್ವಂತ ಸಂಪಾದನೆ ಇರ್ಬೇಕು.. ಆಗ, ಯಾರ್ ಏನೇ ಅಂದ್ರೂ ಅಷ್ಟು ತಲೆ ಕೆಡಿಸ್ಕೊಳ್ಳೋ ಅಗತ್ಯ ಇರಲ್ಲ.. 'ಎಂದಿದ್ದಾರೆ ನಿವೇದಿತಾ ಗೌಡ. ಹೌದು, ಅವರು ತಮಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅದರಲ್ಲೇನೂ ತಪ್ಪಿಲ್ಲ.. ಇದಕ್ಕೂ ಮತ್ತೆ ಕಾಮೆಂಟ್ ಹಾಕುತ್ತ ಟೈಂ ವೇಸ್ಟ್ ಮಾಡ್ಬೇಡಿ ಅನ್ನೋ ಅರ್ಥದಲ್ಲೇ ಅವರು ಮಾತನ್ನಾಡಿದ್ದಾರೆ. ಆದ್ರೂ ನಿಮ್ ಸಮಾಧಾನಕ್ಕೆ ಕಾಮೆಂಟ್ ಹಾಕೋದಕ್ಕೆ ನೀವು ಸ್ವತಂತ್ರರು ಅನ್ನೋದೂ ಕೂಡ ಸತ್ಯ..! ಏನಂತೀರಾ? ನಿಮ್ಮಿಷ್ಟ..
ನಿಧಿ ಸುಬ್ಬಯ್ಯ ಮನೆಯ ಗೇಟ್‌ಗೆ ಪಟಾಕಿ ಕಟ್ಟಿ ಸಿಡಿಸಿದ್ದ ಯಶ್..! ಆದ್ರೂ ಎಸ್ಕೇಪ್ ಆಗಿದ್ದು ಹೇಗೆ..?