
ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಅವರು ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿರುವ 'ಮುದ್ದು ರಾಕ್ಷಸಿ' ಪ್ರೆಸ್ ಮೀಟ್ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಬಹಳಷ್ಟು ಸೆನ್ಸೇಷನ್ ಸೃಷ್ಟಿಯಾಗಿದೆ. ಈ ಸಾಮಾಜಿಕ ಮಾಧ್ಯಮ ಎಂಬುದು ಅದೆಂತಹ ಪ್ಲಾಟ್‌ಫಾರಂ ಎಂಬುದೇ ಅರ್ಥವಾಗುತ್ತಿಲ್ಲ. ಕಾರಣ, ಶೂಟಿಂಗ್ ವಿಡಿಯೋ ಅದೆಷ್ಟು ಜನರು ಅದೇನೇನು ಕಾಮೆಂಟ್ ಮಾಡಿದ್ದಾರೆ ಎಂಬುದು ದೇವರಿಗೇ ಗೊತ್ತು..! ಅವರಿಬ್ಬರೂ ಮತ್ತೆ ಒಂದಾಗಲಿ ಎಂದು ಕೆಲವರು ರಿಯಾಕ್ಟ್ ಮಾಡಿದ್ರೆ, ಇನ್ನೂ ಹಲವರು ಕೆಟ್ಟಕೆಟ್ಟ ಕಾಮೆಂಟ್ ಮಾಡಿದ್ದಾರೆ. ಆ ಕಾಮೆಂಟ್‌ಗಳನ್ನೆಲ್ಲಾ ಹೇಳಲು ಹೊರಟರೆ ಪಾಪ ಸುತ್ತಿಕೊಳ್ಳೋದು ಗ್ಯಾರಂಟಿ ಅನ್ನಬಹುದೇನೋ!
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರಿಬ್ಬರೂ ತಮ್ಮ ಡಿವೋರ್ಸ್‌ಗಿಂತ ಮೊದಲೇ ಒಪ್ಪಿಕೊಂಡು ಸಹಿ ಮಾಡಿದ್ದ ಚಿತ್ರ ಈ 'ಮುದ್ದು ರಾಕ್ಷಸಿ'. ಅದಾಗಲೇ ಸ್ವಲ್ಪಸ್ವಲ್ಪವೇ ಶೂಟಿಂಗ್ ಮುಗಿಸಿ ಈಗ ಅಂತಮ ಹಂತಕ್ಕೆ ಬಂದು ತಲುಪಿ ಪ್ರೆಸ್‌ಮೀಟ್ ಕೂಡ ಆಯೋಜಿಸಿಕೊಂಡು ಸುದ್ದಿಯಾಗಿದೆ ಈ ಸಿನಿಮಾ ಟೀಮ್. ಆದರೆ, ಬೇರೆ ಸುದ್ದಿಗಿಂತ ಈ ಸಿನಿಮಾದಲ್ಲಿ ಹೈಲೈಟ್ ಆಗಿದ್ದು ಅವರಿಬ್ಬರ ಡಿವೋರ್ಸ್ ಮತ್ತು ಮತ್ತೆ ಒಂದಾಗ್ತಾರಾ ಎಂಬ ಮ್ಯಾಟರ್ ಮಾತ್ರ. ಅದು ಸಿನಿಮಾ ಪ್ರೆಸ್‌ಮೀಟ್. ವೈರಲ್ ವಿಡಿಯೋ ಶೂಟಿಂಗ್‌ದು ಎಂಬುದನ್ನೇ ಮರೆತು ಜನರು ಅವರಿಬ್ಬರ ವೈಯಕ್ತಿಕ ಸಂಗತಿಗಳಿಗೇ ಹೆಚ್ಚು ಗಮನ ನೀಡಿದ್ದಾರೆ.
ಮೀಸೆ ತೆಗೆದು ರೋಡಿಗಿಳಿದ ಚಂದನ್ ಶೆಟ್ಟಿಗೆ ಟಾನಿಕ್ ಸಿಕ್ತು.. ಯಾಕಂತೀರಾ? ಇಲ್ನೋಡ್ರೀ ಸ್ವಾಮೀ..!
ಆದರೆ, ಇಲ್ಲೊಂದು ಗಮನಾರ್ಹ ಸಂಗತಿಯನ್ನು ಎಲ್ಲರೂ ಗಮನಿಸಬೇಕು. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಕೂಡ ಅದೆಷ್ಟು ವೃತ್ತಿಪರರು, ಗೌರವದಿಂದ ನಡೆದುಕೊಂಡಿದ್ದಾರೆ ಎಂದರೆ, ತಮ್ಮಿಬ್ಬರ ಮಧ್ಯೆ ಅದೇನೇ ಇದ್ದರೂ ಅದನ್ನು ವೃತ್ತಿಧರ್ಮದ ಜೊತೆ ಮಿಕ್ಸ್ ಮಾಡದೇ ಇಬ್ಬರೂ ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ. ಸಾವಿರಾರು ಕಾರಣಗಳನ್ನು ಹೇಳಿ ಸಿನಿಮಾದಿಂದ ಹೊರಬೀಳುವ ಕೆಲವು ಕಲಾವಿದರ ಮಧ್ಯೆ ಇವರು ಒಂದೇ ಒಂದೇ ಕಾರಣ ಹೇಳಿದರೆ ಸಾಕಿತ್ತು ಸಿನಿಮಾ ನಿಂತು ಹೋಗಲು! ಆದರೆ, ಈ ಇಬ್ಬರೂ ಕೂಡ ಅದೆಷ್ಟು ಚೆನ್ನಾಗಿ ವೃತ್ತಿಧರ್ಮವನ್ನು ಪಾಲಿಸಿದ್ದಾರೆ ನೋಡಿ..!
ವೈರಲ್ ಆಗಬೇಕಾಗಿರುವುದು, ಸುದ್ದಿಯಾಗಿ ಜನರ ಮನೆಮನ ತಲುಪಬೇಕಾಗಿರುವುದು ಇದೇ ಆಗಿದೆ. ಆದರೆ ಆಗಿದ್ದೇ ಬೇರೆ. ಇಲ್ಲಿ ಯಾರದ್ದು ತಪ್ಪು ಯಾರದ್ದು ಸರಿ ಎಂಬ ವಿಶ್ಲೇಷಣೆ ಮುಖ್ಯವಲ್ಲ, ಆದರೆ ಸೋಷಿಯಲ್ ಮೀಡಿಯಾ ಹೋಗುತ್ತಿರುವ ದಿಕ್ಕು ಯಾವುದು? ಅದು ಹೋಗಿ ತಲುಪಬೇಕಾಗಿರೋದು ಎಲ್ಲಿ ಆಗಿರಬಹುದು? ಬಹುದೂರದ ಪ್ರಯಾಣ ಈ ಸೋಷಿಯಲ್ ಮೀಡಿಯಾ ಎಂಬುದೇನೋ ಸರಿ, ಆದರೆ ಹೋಗುತ್ತಿರುವ ದಾರಿ ಸರಿಯಾಗಿದೆಯೇ? ಹೇಳುವವರು ಯಾರು?
ತೇಜಸ್ವಿ ಸೂರ್ಯ-ಶಿವಶ್ರೀ ಮದುವೆಗೂ ಬಂದ ಅಣ್ಣಾವ್ರು; ಕನ್ನಡದ ಕಂಪು ಬೀರಿದ ಡಾ ರಾಜ್‌ಕುಮಾರ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.