'ಇದು ನನ್ನ ಅಮ್ಮ ಹುಟ್ಟುಹಾಕಿದ ಸಂಸ್ಥೆ. ಇದಕ್ಕೆ ಶಕ್ತಿ ತುಂಬಿದ್ದು ನನ್ನ ಅಮ್ಮ..' ಎಂದಿದ್ದಾರೆ. ಬಳಿಕ ಅಲ್ಲಿ 'ಭೈರತಿ ರಣಗಲ್' ಸಿನಿಮಾ ಬಗ್ಗೆ ಮಾತನ್ನಾಡಿದ್ದಾರೆ ಶಿವಣ್ಣ. 'ಕನ್ನಡ ಸಿನಿಮಾ ಉದ್ಯಮದಲ್ಲಿ ಇದೇ ಮೊಟ್ಟಮೊದಲ ಬಾರಿಗೆ..
ನಟ ಶಿವರಾಜ್‌ಕುಮಾರ್ (Shiva Rajkumar) ಅವರು ಮೈಸೂರಿನಲ್ಲಿ ಪತ್ನಿ ಗೀತಾ (Geetha Shiva Rajkumar) ಹಾಗೂ ಆಂಕರ್ ಅನುಶ್ರೀ (Anchor Anushree) ಜೊತೆಗಿದ್ದಾರೆ. ಅರೇ ಅದ್ಯಾಕೆ ಅವರೊಟ್ಟಿಗೆ ಅಲ್ಲಿಗೆ ಹೋಗಿದ್ದು ಅಂತ ಗಾಬರಿಯಾಗ್ಬೇಡಿ! ನಟ ಶಿವರಾಜ್‌ಕುಮಾರ್ ಅಲ್ಲಿ ತಮ್ಮ ಅಮ್ಮ ಪಾರ್ವತಮ್ಮ ಹುಟ್ಟುಹಾಕಿದ, ಅಪ್ಪು ಪುನೀತ್ ಬೆಳೆಸಿದ 'ಶಕ್ತಿ ಧಾಮ'ದಲ್ಲಿ ಕುಳಿತಿದ್ದಾರೆ. ಅವರು ಅಲ್ಲೇನು ಮಾಡುತ್ತಿದ್ದಾರೆ ಎಂಬುದಕ್ಕೆ ಮುಂದೆ ಉತ್ತರವಿದೆ, ನೋಡಿ..
ಹೌದು, ನಟ ಶಿವರಾಜ್‌ಕುಮಾರ್ ಅವರು ತಮ್ಮ ಮುಂಬರುವ ಸಿನಿಮಾ 'ಭೈರತಿ ರಣಗಲ್' ಪ್ರಚಾರಕ್ಕೆ ಮೈಸೂರು ಶಕ್ತಿಧಾಮದ ಅಂಗಳಕ್ಕೆ ಹೋಗಿದ್ದಾರೆ. ಅಲ್ಲಿ ಶಕ್ತಿಧಾಮದ ಮಕ್ಕಳ ಮುಂದೆ ಪತ್ನಿ ಗೀತಾ ಜೊತೆ ಕುಳಿತಿದ್ದಾರೆ ಶಿವಣ್ಣ. ಅವರನ್ನು ಸಂದರ್ಶನ ಮಾಡುತ್ತಿರುವುದು ನಾಡಿನ ಖ್ಯಾತ ನಿರೂಪಕಿ ಅನುಶ್ರೀ!. ಶಿವಣ್ಣ ಹಾಗೂ ಗೀತಾ ದಂಪತಿ ಅಲ್ಲಿ ಆಂಕರ್ ಅನುಶ್ರೀ ಮುಂದೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
undefined
ಮುಚ್ಚುಮರೆ ಇಲ್ಲದೇ ನಟ ದರ್ಶನ್ ಕೇಸ್ ಬಗ್ಗೆ ಮುಕ್ತವಾಗಿ ಮಾತಾಡಿದ ಹಿರಿಯಣ್ಣ ಶಿವಣ್ಣ!
ನಟ ಶಿವರಾಜ್‌ಕುಮಾರ್ ಅವರು ತಮ್ಮ ಭೈರತಿ ರಣಗಲ್ ಸಿನಿಮಾ ಬಗ್ಗೆ ಮಾತನಾಡುವುದಕ್ಕಿಂತ ಮೊದಲು ಶಕ್ತಿಧಾಮದ ಬಗ್ಗೆ ಮಾತನ್ನಾಡಿದ್ದಾರೆ. 'ಇದು ನನ್ನ ಅಮ್ಮ ಹುಟ್ಟುಹಾಕಿದ ಸಂಸ್ಥೆ. ಇದಕ್ಕೆ ಶಕ್ತಿ ತುಂಬಿದ್ದು ನನ್ನ ಅಮ್ಮ..' ಎಂದಿದ್ದಾರೆ. ಬಳಿಕ ಅಲ್ಲಿ 'ಭೈರತಿ ರಣಗಲ್' ಸಿನಿಮಾ ಬಗ್ಗೆ ಮಾತನ್ನಾಡಿದ್ದಾರೆ ಶಿವಣ್ಣ. 'ಕನ್ನಡ ಸಿನಿಮಾ ಉದ್ಯಮದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಸಿನಿಮಾ ಸೀಕ್ವೆಲ್ ಬದಲು ಪ್ರೀಕ್ವೆಲ್ ಬರುತ್ತಿದೆ' ಎಂದಿದ್ದಾರೆ ಕರುನಾಡ ಚಕ್ರವರ್ತಿ.
'ನಿಮ್ಮನೆ ಒಲೆ ಉರಿಯೋಕೆ ಇನ್ನೊಂದು ಮನೆ ಒಲೆ ಆರಿಸಬಾರದು' ಎಂಬ ಕಿವಿ ಮಾತನ್ನು ಕೂಡ ಅಲ್ಲಿ ಮಕ್ಕಳೆದುರು ಹೇಳಿದ್ದಾರೆ ಶಿವಣ್ಣ. ಆ ಮೂಲಕ ಎಲ್ಲಿ ಏನು ಮಾತನಾಡಬೇಕು ಎಂಬ ಬುದ್ಧಿವಂತಿಕೆ ಸಹ ಮೆರೆದಿದ್ದಾರೆ ನಟ ಶಿವರಾಜ್‌ಕುಮಾರ್. ಜೊತೆಗೆ, 'ಎಲ್ಲರಿಗೂ ಒಬ್ಬರು ತಾಯಿ ಇದ್ದರೆ ನನಗೆ ಮೂರು-ನಾಲ್ಕು ತಾಯಂದಿರು' ಎಂದಿದ್ದಾರೆ ಶಿವಣ್ಣ. ಪತಿಯ ಈ ಮಾತು ಕೇಳಿ ಪಕ್ಕದಲ್ಲೇ ಇದ್ದ ಪತ್ನಿ ಗೀತಾ ಅವರು ಕಣ್ಣೀರು ಹಾಕಿದ್ದಾರೆ.
ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!
ಶಕ್ತಿಧಾಮದಲ್ಲಿ ಓದುತ್ತಿರುವ ಆ ಚಿಕ್ಕಹೆಣ್ಣುಮಕ್ಕಳ ಜೊತೆ ಗೀತಾ ಶಿವರಾಜ್‌ಕುಮಾರ್, ಶಿವಣ್ಣ ಹಾಗೂ ನಟಿ, ನಿರೂಪಕಿ ಅನುಶ್ರೀ ಅವರು ಮಾತುಕತೆ ನಡೆಸಿದ್ದಾರೆ. ಅವರೊಂದಿಗೆ ಊಟ ಮಾಡಿದ್ದಾರೆ, ಅವರಿಗೂ ಊಟ ತಿನ್ನಿಸಿದ್ದಾರೆ. ಜೊತೆಗೆ, 'ತಂಗಿ ನಿನ್ನ ನಗುವಿನಲ್ಲಿ ಪುಟ್ಟ ಮಗುವಿದೆ.. ಆ ನಗುವಿಗಾಗಿ ತವರು ಕಾದಿದೆ..' ಹಾಡನ್ನು ಹಾಡಿ ಅಲ್ಲಿನ ಮಕ್ಕಳ ಕಣ್ಣಲ್ಲೂ ನೀರು ತರಿಸಿದ್ದಾರೆ ನಟ ಶಿವರಾಜ್‌ಕುಮಾರ್!
ಅದೇ ವೇಳೆ ಭೈರತಿ ರಣಗಲ್ ಪ್ರೊಮೋ ವಿಡಿಯೋ ಸಹ ಪ್ಲೇ ಆಗಿದ್ದು, ಅದರಲ್ಲಿ ಡೈಲಾಗ್ ಹೀಗಿದೆ: 'ನಾನು ಜನರಿಗೋಸ್ಕರ ಏನ್ ಬೇಕಾದ್ರೂ ಕಳ್ಕೊಳ್ಳತೀನಿ.. ಆದ್ರೆ, ಜನ್ರನ್ನ ಮಾತ್ರ ಕಳೆದುಕೊಳ್ಳಲ್ಲ..' ಎನ್ನುವ ಪವರ್ಫುಲ್ ಡೈಲಾಗ್ ಇದೆ. ಅದು ಸ್ವತಃ ಶಿವಣ್ಣ ಅವರೇ ಅಲ್ಲಿಯೇ ಹೇಳಿದಂತೆ ಭಾಸವಾಗುತ್ತದೆ. ಅಂದಹಾಗೆ, ಶಿವಣ್ಣ ನಟನೆಯ 'ಭೈರತಿ ರಣಗಲ್' ಚಿತ್ರವು ಇದೇ ತಿಂಗಳು 15ರಂದು (15 November 2024) ಬಹುಭಾಷೆಗಳಲ್ಲಿ ತೆರೆಗೆ ಅಪ್ಪಳಿಸಲಿದೆ.
ಐಶ್ವರ್ಯಾ ರೈ ಮಗಳು ಆರಾಧ್ಯಾ ಪಾದಕ್ಕೆರಗಿದ್ದಕ್ಕೆ ಸ್ವತಃ ಶಿವಣ್ಣ ಹೇಳಿದ್ದೇನು? ಹೀಗೂ ಉಂಟೇ?!