Kabzaa Twitter Review; ಉಪೇಂದ್ರ ಸಿನಿಮಾ ನೋಡಿ ಫ್ಯಾನ್ಸ್ ಹೇಳಿದ್ದೇನು, ಹೇಗಿದೆ ಕಿಚ್ಚ, ಶಿವಣ್ಣನ ಪಾತ್ರ?

By Shruthi Krishna  |  First Published Mar 17, 2023, 11:33 AM IST

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ ನೋಡಿ ಅಭಿಮಾನಿಗಳು ಹೇಳಿದ್ದೇನು? 


ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಿದೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಕನ್ನಡದ ಕಬ್ಜ ನೋಡಲು  ಅಭಿಮಾನಿಗಳು ಕಾತರರಾಗಿದ್ದರು. ಇದೀಗ ಎಲ್ಲಾ ಕಾತರ ಮತ್ತು ಕುತೂಹಲಕ್ಕೆ ತೆರೆ ಬಿದ್ದಿದೆ. ಅಭಿಮಾನಿಗಳು ಬೆಳಗ್ಗೆಯೇ ಕಬ್ಜ ನೋಡಿ ಆನಂದಿಸಿದ್ದಾರೆ, ಸಂಭ್ರಮಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಬ್ಜ ಸಿನಿಮಾ ರಿಲೀಸ್ ಆಗಿದ್ದು ಚಿತ್ರದ ಬಗ್ಗೆ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. 

ಕಬ್ಜ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರಿಗೆ ತುಂಬಾ ಇಷ್ಟವಾದರೆ ಇನ್ನೂ ಕೆಲಸವರಿಗೆ ಕೊಂಚ ಅಸಮಾಧಾನ ಮೂಡಿಸಿದೆ. ರಿಯಲ್ ಸ್ಟಾರ್ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ.  ಶ್ರೀಯಾ ಶರಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಬ್ಜ ಸಿನಿಮಾ ಸುಮಾರು 50 ದೇಶಗಳಲ್ಲಿ ಹಾಗೂ 4000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದೆ. ಕರ್ನಾಟಕದಲ್ಲೂ ಕಬ್ಜ ಅದ್ದೂರಿಯಾಗಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಕಬ್ಜ ಬರೋಬ್ಬರಿ 450 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. 

Tap to resize

Latest Videos

ಇಂದು ವಿಶೇಷ ಎಂದರೆ ಪವರ್ ಸ್ಟಾರ್ ಪುನೀತ್ ಅವರ ಜನ್ಮ ದಿನ. ಈ ವಿಶೇಷ ದಿನದಂದು ಕಬ್ಜ ಸಿನಿಮಾ ತೆರೆಗೆ ಬಂದಿದ್ದು ಅಪ್ಪು ಕಟೌಟ್ ಕೂಡ ರಾರಾಜಿಸುತ್ತಿದೆ. ಅಂದಹಾಗೆ ಕಬ್ಜ ನೋಡಿದ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹೇಳುದ್ದೇನು? 

'ಕನ್ನಡದ ಮತ್ತೊಂದು ಸಿನಿಮಾ ಕಬ್ಜ, ಪಾಸಿಟಿವ್ ವಿಮರ್ಶೆ. ಅದ್ಭುತ ರೀಚ್‌ಗಾಗಿ ಕಾಯುತ್ತಿದ್ದೇವೆ. ಸುದೀಪ್ ಮತ್ತು ಶಿವಣ್ಣ ಅವರಿಗೆ ಹಾಗೂ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್' ಎಂದಿದ್ದಾರೆ.

Another one Kannada movie to
Positive review ❤️ ..!! 🔥🔥🔥

Waiting to saw the reach of the movie on
Kollywood cinema fans and pepols ..!! and team.

— தொண்டைல ஆப்ரேஷன் `ʙᴀʙᴜ` (@babu22012001)

'ಕಬ್ಜ ಅದ್ಭುತವಾದ ಅಟೆಂಪ್ಟ್. ರವಿ ಬಸ್ರೂರ್ ಬಿಜಿಎಮ್ ಬೆಂಕಿ. ಛಾಯಾಗ್ರಾಹಣ ಅದ್ಭುತ. ಸಿಕ್ರೀನ್ ಪ್ಲೇ ಮತ್ತು ನಿರ್ದೇಶನ ಅವರೇಜ್. ಎಡಿಟಿಂಗ್ ಇಷ್ಟವಾಯಿತು. ಉಪೇಂದ್ರ ಮತ್ತು ಸುದೀಪ್ ಪಾತ್ರ ಅದ್ಭುತ ಶಿವಣ್ಣ ಎಂಟ್ರಿ ಸೂಪರ್' ಎಂದು ಹೇಳಿದ್ದಾರೆ. 

'ಮತ್ತೋರ್ವ ಕಾಮೆಂಟ್ ಮಾಡಿ, ಈ ಸಿನಿಮಾದ ಬಗ್ಗೆ ಹೇಗೆ ಬರೆಯಲಿ. ತುಂಬಾ ನಿರಾಸೆ ಮೂಡಿಸಿದೆ. ಈ ಸಿನಿಮಾದ ಮೇಲೆ ಉಪ್ಪಿ ಸರ್ ಮತ್ತು ಇತರರಿಗೆ ಹೇಗೆ ನಂಬಿಕೆ ಬಂತು ಎಂದು ನನಗೆ ಅರ್ಥವಾಗುತ್ತಿಲ್ಲ' ಎಂದು ಅಸಮಾಧಾನ ಹೊರಹಾಕಿದ್ದಾರೆ.

KABZAA REVIEW - HORRIBLE

I don’t wanna write anything about the film all I can say is nothing can be disappointing like this. I seriously didn’t understand how uppi sir and others were confident about the films release. pic.twitter.com/9bdrOmpc0A

— Theinfiniteview (@theinfiniteview)
click me!