ಇದು ಸುಮಾರು 20 ವರ್ಷಗಳ ಹಿಂದಿನ ಕಥೆ. ಕನ್ನಡದ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ ಹಾಗೂ ಪ್ರೇಮಾ ನಟನೆಯ ಪರ್ವ ಚಿತ್ರ ತೆರೆಗೆ ಬಂದಿತ್ತು ಹಾಗೂ ತುಂಬಾ ನಿರೀಕ್ಷೆ ಸೃಷ್ಟಿಸಿತ್ತು. ಅದಕ್ಕೂ ಮೊದಲು ಡಾ ವಿಷ್ಣುವರ್ಧನ್ ನಟನೆಯ 'ಯಜಮಾನ' ಹಾಗೂ 'ಕೋಟಿಗೊಬ್ಬ' ಚಿತ್ರಗಳು ಸೂಪರ್ ಹಿಟ್...
ಇದು ಸುಮಾರು 20 ವರ್ಷಗಳ ಹಿಂದಿನ ಕಥೆ. ಕನ್ನಡದ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Vishnuvardhan) ಹಾಗೂ ಪ್ರೇಮಾ (Prema) ನಟನೆಯ ಪರ್ವ (Parva) ಚಿತ್ರ ತೆರೆಗೆ ಬಂದಿತ್ತು ಹಾಗೂ ತುಂಬಾ ನಿರೀಕ್ಷೆ ಸೃಷ್ಟಿಸಿತ್ತು. ಅದಕ್ಕೂ ಮೊದಲು ಡಾ ವಿಷ್ಣುವರ್ಧನ್ ನಟನೆಯ 'ಯಜಮಾನ' ಹಾಗೂ 'ಕೋಟಿಗೊಬ್ಬ' ಚಿತ್ರಗಳು ಸೂಪರ್ ಹಿಟ್ ಆಗಿ ನಟ ವಿಷ್ಣುವರ್ಧನ್ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಅದೇ ಸಮಯದಲ್ಲಿ ಸುನಿಲ್‌ಕುಮಾರ್ ದೇಸಾಯಿ ನಿರ್ದೇಶನದ 'ಪರ್ವ' ಸಿನಿಮಾ ತೆರೆಗೆ ಬಂದಿತ್ತು. ಆಡಿಯೋ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಮುಗ್ಗರಿಸಿತ್ತು.
ಯಾರೂ ಪರ್ವ ಸಿನಿಮಾದ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ನಿರ್ಮಾಪಕರಾದ ಶಿಲ್ಪಾ ಶ್ರೀನಿವಾಸ್ ಅವರು ಪರ್ವ ಚಿತ್ರವನ್ನು ನಿರ್ಮಾಣ ಮಾಡಿದ್ದರು. ವಿಷ್ಣುವಧ್ನ್ ಜೋಡಿಯಾಗಿ ನಟಿ ಪ್ರೇಮಾ ನಟಿಸಿದ್ದರು. ರೋಜಾ, ರಮೇಶ್ ಭಟ್, ರಾಧಾ ರವಿ, ಭಾವನಾ ಹಾಗೂ ನವೀನ್ ಮಯೂರ್ ಮುಖ್ಯ ಪಾತ್ರಗಳಲ್ಲಿದ್ದರು. ನಟು ಅಮೂಲ್ಯ ಬಾಲನಟಿಯಾಗಿ ಮಿಂಚಿದ್ದರು. ಆದರೆ, ಈ ಸಿನಿಮಾ ತೆರೆಗೆ ಬರುವ ಪೂರ್ವದಲ್ಲಿ ಹುಟ್ಟಿಸಿದ್ದ ನಿರೀಕ್ಷೆ ಸುಳ್ಳಾಗಿತ್ತು, ಸಿನಿಮಾ ಗೆಲುವು ಕಷ್ಟವಾಯ್ತು.
ವಿಷ್ಣುವರ್ಧನ್-ಮಾಲಾಶ್ರೀ ಜೋಡಿ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿತ್ತು; ಆದ್ರೆ ಆಗಿದ್ದೇ ಬೇರೆ!
ಈ ಬಗ್ಗೆ ನಿರ್ಮಾಪಕರಾದ ಶಿಲ್ಪಾ ಶ್ರೀನಿವಾಸ್ ಅವರು ಯೂಟ್ಯೂಬ್ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ. 'ಪರ್ವ ಸಿನಿಮಾ ನನಗೆ ಸೂಟ್ ಆಗುತ್ತಾ ಎಂಬ ಪ್ರಶ್ನೆಯನ್ನು ಸ್ವತಃ ವಿಷ್ಣುವರ್ಧನ್ ಅವರೇ ಕೇಳಿದ್ದರು. ಯಜಮಾನ್ ಹಾಗೂ ಕೋಟಿಗೊಬ್ಬ ಸಿನಿಮಾಗಳಲ್ಲಿ ಸದ್ಯ ನೋಡಿರುವ ಸಿನಿಮಾ ಪ್ರೇಕ್ಷಕರು ಈಗ ನನ್ನನ್ನು ಹೀಗೆ ಸ್ವೀಕರಿಸುತ್ತಾರೆ ಎಂದು ಕೇಳುತ್ತಲೇ ಇದ್ದರು ವಿಷ್ಣುವರ್ಧನ್. ಅವರ ಸಂಶಯವೇ ನಿಜವಾಗಿತ್ತು. ಆದರೆ ನಿರ್ದೇಶಕರಾದ ಸುನಿಲ್ ಕುಮಾರ್ ದೇಸಾಯಿ ಅವರು 'ಇದು ದಿಲ್ ತೋ ಪಾಗಲ್ ಹೈ' ರೀತಿಯ ಸಿನಿಮಾ. ಇದು ಸಕ್ಸಸ್ ಕಾಣುತ್ತದೆ' ಎಂದಿದ್ದರು. ಅದೇ ಭರವಸೆಯಲ್ಲಿ ಚಿತ್ರ ಮಾಡಿದ್ದೆ.
ಬಹಳ ಅದ್ದೂರಿಯಾಗಿ ಪರ್ವ ಸಿನಿಮಾವನ್ನು ತೆರೆಗೆ ತಂದಿದ್ದೆ. ಆದರೆ ಜನರಿಗೆ ಯಾಕೋ ಅದು ಇಷ್ಟವಾಗಲಿಲ್ಲ. ಸಿನಿಮಾ ಶ್ರೀಮಂತವಾಗಿತ್ತು, ವಿಷ್ಣುವರ್ಧನ್ ಅವರನ್ನು ಸೊಗಸಾಗಿ ಕಾಣುವಂತೆ ಚಿತ್ರಿಸಿದ್ದೆವು. ಆಗ ವಿಷ್ಣುವರ್ಧನ್ ಕ್ರೇಜ್ ಕೂಡ ಚಿತ್ರಕ್ಕೆ ಬಹಳಷ್ಟು ಪೂರಕವಾಗಿತ್ತು. ಯಜಮಾನ ಚಿತ್ರದವರೇ ರೈಟ್ಸ್ ಕೇಳಿದ್ದರು. ಆದರೆ ಬೇಡ ಅಂತ ಹೇಳಿ ನಾನೇ ವಿತರಣೆ ಮಾಡಿದ್ದೆ. ಆದರೆ ಈ ಚಿತ್ರದ ಕಲೆಕ್ಷನ್ ಅವರೇಜ್ ಆಯಿತು ಅಷ್ಟೇ... ನಿರೀಕ್ಷೆಗೆ ತಕ್ಕ ಜನಮೆಚ್ಚುಗೆ ಈ ಚಿತ್ರಕ್ಕೆ ಬರಲೇ ಇಲ್ಲ.
ಅರ್ಧ ದೇಹ ಬಿಟ್ಕುಕೊಳ್ಳುವ ಹುಡ್ಗೀರಿಗೆ ಅಣ್ಣಾವ್ರು ಹೇಳಿದ ಕಿವಿ ಮಾತಿದು!
ಪರ್ವ ಸಿನಿಮಾ ಅಂದು ಸದ್ದು ಮಾಡದೇ ಇದ್ದರೂ ದೊಡ್ಡ ನಷ್ಟದಿಂದ ಪಾರಾದೆ. ಆಡಿಯೋ ರೈಟ್ಸ್ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿತ್ತು. ಆ ಕಾಲದಲ್ಲಿ ಪರ್ವ ಸಿನಿಮಾಗೆ ಐದೂವರೆಯಿಂದ ಆರು ಕೋಟಿ ರೂಪಾಯಿ ಹಣ ಹಾಕಿದ್ದೆ. ಮೂರು ಕೋಟಿ ವಾಪಸ್ ಬಂತು. ಆಡಿಯೋ ರೈಟ್ಸ್ ಜೊತೆ ಕೆಲವು ಏರಿಯಾಗಳ ರೈಟ್ಸ್ ಮಾರಿದ್ದೆ. ಹೀಗಾಗಿ ದೊಡ್ಡ ನಷ್ಟ ಆಗಲಿಲ್ಲ. ಆದರೆ ನನಗೆ ಒಂದೇ ಒಂದು ಸಮಾಧಾನ ಇದೆ. ಅದೇನೆಂದರೆ, ನಾನು ನನ್ನ ಮೆಚ್ಚಿನ ನಟ ವಿಷ್ಣುವರ್ಧನ್ ಜೊತೆಗೆ ಸಿನಿಮಾ ಮಾಡುವ ಆಸೆಯನ್ನು ಈಡೇರಿಸಿಕೊಂಡಿದ್ದೆ' ಎಂದಿದ್ದಾರೆ ಪರ್ವ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್.