
ಸ್ಯಾಂಡಲ್‌ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪತ್ನಿ ಶಿಲ್ಪಾ ಗಣೇಶ್ ಮನೆಯಲ್ಲಿ ಮಕ್ಕಳ ಜೊತೆ ಲಾಕ್‌ಡೌನ್ ದಿನಗಳನ್ನು ಕಳೆಯುತ್ತಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಕಲಾವಿದನ ಜೊತೆಯೂ ಉತ್ತಮ ಬಾಂಧವ್ಯ ಹೊಂದಿರುವ ಶಿಲ್ಪಾ ಗಣೇಶ್ ಕೂಡ ಕೊಂಚ ಫೇಮಸ್. ಪಾರ್ಟಿ, ಸಿನಿಮಾ ಮಾತುಕತೆ ಎಂದೆಲ್ಲಾ ಶಿಲ್ಪಾ ಟಾಪಿಕ್‌ನಲ್ಲಿ ಇರುತ್ತಾರೆ.
ಇದೀಗ ಶಿಲ್ಪಾ ಪುಸ್ತಕ ಓದುವ ವೇಳೆ ನಟ ಗಣೇಶ್ ಏನು ಮಾಡುತ್ತಾರೆ ಗೊತ್ತಾ?. 'ನನಗೆ ಸರಿಯಾಗಿ ತಿಳಿದಿಲ್ಲ ಅವರ ತೆಲೆಯಲ್ಲಿ ಏನು ಓಡುತ್ತಿದೆ ಎಂದು. ಬಹುಶಃ ನನ್ನ ಹೆಂಡತಿ ಮ್ಯೂಟ್ ಆಗಿದ್ದರೆ, ಕ್ಯೂಟ್ ಆಗಿ ಕಾಣಿಸುತ್ತಾಳೆ ಎಂದು ಇರಬೇಕು. #StaySafe' ಎಂದು ಶಿಲ್ಪಾ ಗಣೇಶ್ ಬರೆದು ಕೊಂಡಿದ್ದಾರೆ.
ಗಣೇಶ್ ಲೈಫಿನ 'ಗೋಲ್ಡನ್' ಕ್ವೀನ್; ಶಿಲ್ಪಾ ಗಣೇಶ್ ಎಷ್ಟು ಸ್ಟೈಲಿಶ್ ನೋಡಿ!
ಈ ಫೋಟೋಗೆ ಪಿಸಿ ಮೋಹನ್ ಪತ್ನಿ ಶೈಲಾ ಮೋಹನ್ ಹಾರ್ಟ್ ಸಿಂಬಲ್ ಹಾಕಿ ಕಾಮೆಂಟ್ ಮಾಡಿದರೆ, ನಟ ಭುವನ್ 'ಇಲ್ಲ ಮೇಡಮ್. ನಿಮ್ಮ ಬುಕ್ ಒಳಗೆ ಮೊಬೈಲ್ ಫೋಟೋ ಹೇಗೆ ಬಂತು ಎಂದು ಚಿಂತೆ ಮಾಡುತ್ತಿದ್ದಾರೆ,' ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಶಿಲ್ಪಾ ' ಭುವನ್ ನೀನು ಅವರಿಗೆ ಈ ರೀತಿ ಐಡಿಯಾಗಳನ್ನು ನೀಡಬೇಡ,' ಎಂದು ಉತ್ತರ ಕೊಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಪುತ್ರಿ ಚರಿಷ್ಮಾಳ ಹುಟ್ಟುಹಬ್ಬ ಆಚರಿಸಿದ್ದಾರೆ. ಮಗಳು ಮಗುವಿದ್ದಾಗ ಹಾಗೂ ಈಗ ಫೋಟೋ ಹಂಚಿಕೊಂಡು 'Let me love u a little more before ur not little more. ಹುಟ್ಟುಹಬ್ಬದ ಶುಭಾಶುಯಗಳು ಲವ್' ಎಂದು ಶಿಲ್ಪಾ ವಿಶ್ ಮಾಡಿದ್ದಾರೆ. ಇದಕ್ಕೆ ನಟಿ ಹರ್ಷಿಕಾ ಪೂಣಚ್ಚ 'ಹ್ಯಾಪಿ ಬರ್ತಡೇ ಚೆರೆ ಬೇಬಿ. ನೀನು ಇಷ್ಟು ಬೇಗ ದೊಡ್ಡ ಹುಡುಗಿ ಆಗಬೇಡ,' ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.