ಸ್ಲಿಮ್ ಆಗಿರುವ ರಮ್ಯಾ ಕನ್ನಡಿ ಮುಂದೆ ಮಸ್ತ್ ಡಾನ್ಸ್; 'ಕ್ವೀನ್ ಈಸ್ ಬ್ಯಾಕ್' ಎಂದ ಫ್ಯಾನ್ಸ್

By Shruthi Krishna  |  First Published Jul 17, 2023, 10:42 AM IST

ಸ್ಯಾಂಡಲ್‌ವುಡ್ ನಟಿ ರಮ್ಯಾ ಮತ್ತೆ ಸ್ಲಿಮ್ ಆಗಿದ್ದಾರೆ. ಕನ್ನಡಿ ಮುಂದೆ ನಿಂತು ರಮ್ಯಾ ಮಸ್ತ್ ಡಾನ್ಸ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 


ಸ್ಯಾಂಡಲ್‌ವುಡ್ ಕ್ವೀನ್ ಅಂತನೆ ಖ್ಯಾತಿಗಳಿಸಿರುವ ನಟಿ ರಮ್ಯಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ರಮ್ಯಾ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. 
ರಮ್ಯಾ ಸದ್ಯ ಡಾಲಿ ಧನಂಜಯ್ ಜೊತೆ ‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿ ಸಿನಿಮಾ ನಿರ್ಮಾಣದತ್ತ ಗಮನ ಹರಿಸುತ್ತಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ರಮ್ಯಾ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಈಗ ಅವರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದಾ ಪ್ರವಾಸ ಅಂತ ಬ್ಯುಸಿಯಾಗಿರುವ ರಮ್ಯಾ ಟ್ರಿಪ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ರಮ್ಯಾ ಹಂಚಿಕೊಂಡಿರುವ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.  ವಿಡಿಯೋ ನೋಡಿದ ಅಭಿಮಾನಿಗಳು ಸ್ಲಿಮ್ ಆಗಿದ್ದೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹೌದು ರಮ್ಯಾ ಮತ್ತೆ ತೆಳು ಆಗಿದ್ದಾರೆ. ಕೊಂಚ ದಪ್ಪ ಆಗಿದ್ದ ಕ್ವೀನ್ ಇದೀಗ ಟ್ರ್ಯಾಕ್‌ಗೆ ಮರಳಿದ್ದಾರೆ. ಕಪ್ಪು ಬಣ್ಣದ ಶಾರ್ಟ್ಸ್ ಮತ್ತು ಟಿ ಶರ್ಟ್ ಧರಿಸಿದ್ದಾರೆ. ಕನ್ನಡಿ ಮುಂದೆ ನಿಂತು ರಮ್ಯಾ ಮಸ್ತ್ ಡಾನ್ಸ್ ಮಾಡಿದ್ದಾರೆ. ‘ನೀವು ಯಾವಾಗಲೂ ಸುಂದರಿ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ನಿಮ್ಮನ್ನು ಬೀಟ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.

Tap to resize

Latest Videos

ತೆರೆಮೇಲೆ ಬ್ಲಾಕ್‌ಬಸ್ಟರ್ ಹಿಟ್ ಸಂಜು ವೆಡ್ಸ್ ಗೀತಾ ಪಾರ್ಟ್ 2: ನಾಯಕಿ ಯಾರು ಗೊತ್ತಾ..?

ಅಂದಹಾಗೆ ರಮ್ಯಾ ಸ್ಲಿಮ್ ಆಗಲೆಂದೆ ಲಂಡನ್‌ಗೆ ತೆರಳಿದ್ದರು. ಸುಮಾರು ಒಂದು ತಿಂಗಳ ಕಾಲ ಪ್ರಕೃತಿ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮತ್ತೆ ವಾಪಾಸ್ ಆಗಿರುವ ರಮ್ಯಾ ಸಿಕ್ಕಾಪಟ್ಟೆ ಸ್ಲಿಮ್ ಆಗಿ ಫಿಟ್ ಅಂಡ್ ಫೈನ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ವರ್ಕೌಟ್ ಪ್ರಾರಂಭಿಸಿದ್ದಾರೆ. ಜಿಮ್ ಮಾಡುತ್ತಲೇ ರಮ್ಯಾ ವಿಡಿಯೋ ಮಾಡಿದ್ದಾರೆ. ಕನ್ನಡಿ ಮುಂದೆ ನಿಂತು ಡಾನ್ಸ್ ಮಾಡಿದ್ದಾರೆ.

ರಮ್ಯಾ ಫೋಟೋ ಹುಟ್ಟುಹಾಕಿದೆ ಭಾರೀ ಚರ್ಚೆ: ಮಿಸ್ ಆಗಿ ಫೋಟೋ ಹಂಚಿಕೊಂಡ್ರಾ ನಟಿ..?

ಅಂದಹಾಗೆ ರಮ್ಯಾ ಉತ್ತರಕಾಂಡ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಯಾಕೆಂದರೆ ಉತ್ತರಕಾಂಡ ಸಿನಿಮಾ ಸೆಟ್ಟೇರಿ ಅನೇಕ ಸಮಯವಾಗಿದೆ. ಆದರೂ ಇನ್ನೂ ಶೂಟಿಂಗ್ ಪ್ರಾರಂಭವಾಗಿಲ್ಲ. ಹಾಗಾಗಿ ರಮ್ಯಾ ಸಿನಿಮಾದಿಂದ ಔಟ್ ಆಗಿದ್ದಾರೆ ಎನ್ನುವ ಸುದ್ದಿ ಇದೆ. ಇನ್ನೂ ರಮ್ಯಾ ನಿರ್ಮಾಣದಲ್ಲಿರುವ ಮೊದಲ ಸಿನಿಮಾ ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದು ರಿಲೀಸ್‌ಗೆ ರೆಡಿಯಾಗುತ್ತಿದೆ. ಈ ಸಿನಿಮಾದಲ್ಲೂ ರಮ್ಯಾ ನಟಿಸಬೇಕಿತ್ತು. ಆದರೆ ದಿಢೀರ್ ಅಂತ ಹೊರ ಬಂದು ಅಚ್ಚರಿ ಮೂಡಿಸಿದರು. ಇದೀಗ ಉತ್ತರಕಾಂಡ ಸಿನಿಮಾದಿಂದನೂ ಹೊರಬಂದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.  

click me!