ಅಪ್ಪು ಫ್ಯಾನ್ಸ್‌ ಪೇಜ್‌ನಲ್ಲಿ ಶಂಕರ್‌ ನಾಗ್, ಏನೆಲ್ಲಾ ಪೋಸ್ಟ್ ಮಾಡಿದಾರೆ ನೋಡಿ!

By Shriram Bhat  |  First Published Oct 17, 2024, 11:02 AM IST

ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ. ಶಂಕರ್‌ ನಾಗ್ ಅವರು ಬದುಕಿದ್ದು ಕೇವಲ 35 ವರ್ಷಗಳು. ಆದರೆ, ಅಷ್ಟರಲ್ಲೇ ಅವರು ಅಷ್ಟೊಂದು ಸಿನಿಮಾಗಳಲ್ಲಿ ನಟಿಸಿದ್ದರು! ಡಾ ರಾಜ್‌ಕುಮಾರ್ ಅವರಿಗೆ...


ಕನ್ನಡದ ಕಂದ 'ಅಪ್ಪು' ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಫ್ಯಾನ್ಸ್‌ ಪೇಜ್‌ನಲ್ಲಿ 'ಆಟೋರಾಜ' ಖ್ಯಾತಿಯ ನಟ ಶಂಕರ್‌ ನಾಗ್ (Shankar Nag) ಅವರದೊಂದು ಫೋಟೋ ಪೋಸ್ಟ್ ಆಗಿದ್ದು, ಅದು ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ದಿವಂಗತ ನಟ ಶಂಕರ್‌ ನಾಗ್ ಅವರ ಬಯೋಡಾಟವನ್ನೇ (Bio-Data) ಪ್ರಿಂಟ್ ಮಾಡಲಾಗಿದೆ. ಅದರಲ್ಲಿ ಎಲ್ಲ ವಿವರಣೆಗಳೂ ಇದ್ದು, ಶಂಕರ್‌ ನಾಗ್ ಅವರ ಬಗ್ಗೆ ಸಾಕಷ್ಟು ಸಂಗತಿಗಳು ಗೊತ್ತಿಲ್ಲದ ಈ ಜನರೇಶನ್ ಜನರೂ ಕೂಡ ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುವಂತಿದೆ. ಅದು ಹೀಗಿದೆ ನೋಡಿ.. 

ತಮಿಳು ಚಿತ್ರರಂಗದಿಂದ ನಟ ವಿಷ್ಣುವರ್ಧನ್ ದೂರ ಉಳಿಯಲು ಯಾರು ಕಾರಣ? ಸೀಕ್ರೆಟ್ ರಿವೀಲ್..!

Tap to resize

Latest Videos

undefined

ನಾನು ಶಂಕರ್ ನಾಗ್

ಹುಟ್ಟಿದ್ದು: 1954, ನವೆಂಬರ್ 9

ನಕ್ಷತ್ರ ನಾಮ: ಅವಿನಾಶ

ಪ್ರೀತಿಯಿಂದ ಕರೆದದ್ದು: ಭವಾನಿ ಶಂಕರ್

ಊರು: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರ

ಕುಟುಂಬ: ಶ್ಯಾಮಲಾ (ಅಕ್ಕ), ಅನಂತ್‌ ನಾಗ್ (ಅಣ್ಣ), ಅರುಂಧತಿ (ಹೆಂಡತಿ), ಕಾವ್ಯಾ (ಮಗಳು)

ತಂದೆ: ಹೊನ್ನಾವರ ಸದಾನಂದ ನಾಗರಕಟ್ಟೆ, ತಾಯಿ: ಆನಂದಿ ನಾಗರಕಟ್ಟೆ

ಮೊದಲ ಉದ್ಯೋಗ: ಬ್ಯಾಂಕ್ ನೌಕರ

ಗುರುಗಳು: ಸಾಯಿ ಪರಾಂಜಪೆ, ಗಿರೀಶ್ ಕಾರ್ನಾಡ್

ಇಷ್ಟದ ತಿಂಡಿ: ಖಡಕ್ ಪಾವ್

ನಟಿಸಿದ ಮೊದಲ ಚಿತ್ರ: ಒಂದಾನೊಂದು ಕಾಲದಲ್ಲಿ

ತಿರುವು ನೀಡಿದ ಚಿತ್ರ: ಸೀತಾರಾಮು

ನಿರ್ದೇಶನದ ಮೊದಲ ಚಿತ್ರ: ಮಿಂಚಿನ ಓಟ

ನಿರ್ಮಾಣದ ಮೊದಲ ಚಿತ್ರ: ಮಿಂಚಿನ ಓಟ

ಯಾವತ್ತೂ ಮರೆಯದ ಕೊಡುಗೆ: ಸಂಕೇತ್ ಸ್ಟುಡಿಯೋ

ಜಗತ್ತು ಕೊಂಡಾಡಿದ್ದು: ಮಾಲ್ಗುಡಿ ಡೇಸ್ ಧಾರಾವಾಹಿ ನಿರ್ದೇಶನ

ಬದುಕಿದ್ದು: 35 ವರ್ಷ, 10 ತಿಂಗಳು, 21 ದಿನ

ಚಿತ್ರರಂಗದಲ್ಲಿ ಇದ್ದಿದ್ದು: 1978 ರಿಂದ 1990

ಒಟ್ಟೂ ಚಿತ್ರಗಳು: 83

ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ. ಶಂಕರ್‌ ನಾಗ್ ಅವರು ಬದುಕಿದ್ದು ಕೇವಲ 35 ವರ್ಷಗಳು. ಆದರೆ, ಅಷ್ಟರಲ್ಲೇ ಅವರು ಬರೋಬ್ಬರಿ 83 ಸಿನಿಮಾಗಳಲ್ಲಿ ನಟಿಸಿದ್ದರು, ಹಲವು ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. ಡಾ ರಾಜ್‌ಕುಮಾರ್ ಅವರಿಗೆ 'ಒಂದು ಮುತ್ತಿನ ಕಥೆ' ಸಿನಿಮಾ ನಿರ್ದೇಶನವನ್ನೂ ಮಾಡಿದ್ದ ಶಂಕರ್‌ ನಾಗ್ ಅವರು ಆಗಿನ ಕಾಲದಲ್ಲೇ ಅಂಡರ್‌ ವಾಟರ್ ಕ್ಯಾಮರಾ ಬಳಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. 

ತಟ್ಟೆ ಎಷ್ಟಗಲ ಇದ್ಯೋ ಅಷ್ಟೇ ಉಣ್ಣೋದು, ನನ್ನ ಯೋಗ್ಯತೆ ಎಷ್ಟೋ ಅಷ್ಟೇ ದುಡ್ಯೋದು..; ಕಿಚ್ಚ ಸುದೀಪ್

ಅಂದೇ ಉತ್ತಮ ತಂತ್ರಜ್ಞ ಎಂಬ ಹೆಸರು ಗಳಿಸಿದ್ದ ನಟ-ನಿರ್ದೇಶಕ ಶಂಕರ್‌ ನಾಗ್ ಅವರು ಚಿಕ್ಕ ಪ್ರಾಯದಲ್ಲೇ ಕಾರು ಅಪಘಾತದಲ್ಲಿ ನಿಧನರಾಗಿದ್ದು ಕನ್ನಡ ಸಿನಿಮಾರಂಗಕ್ಕೆ ಆಗಿರುವ ದೊಡ್ಡ ನಷ್ಟ. 34 ವರ್ಷಗಳ ಹಿಂದೆಯೇ ಶಂಕರ್‌ ನಾಗ್ ಅವರು ನಮ್ಮನ್ನು ಅಗಲಿದ್ದರೂ, ಇಂದಿಗೂ ಕೂಡ ಅವರನ್ನು ಕನ್ನಡ ಸಿನಿಪ್ರೇಕ್ಷಕರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇಂದು ಅಂತಲ್ಲ, ಎಂದೆಂದಿಗೂ ಕೂಡ ಶಂಕರ್‌ ನಾಗ್ ಅವರು ಕನ್ನಡ ಚಿತ್ರರಂಗದ ಮೆರಯಲಾಗದ ಮಾಣಿಕ್ಯ ಹಾಗೂ ಆಸ್ತಿಯೇ ಅಗಿರುತ್ತಾರೆ. 

click me!