ಈ ಮಹಾ ಸೀಕ್ರೆಟ್ ನಿಮಗೇನಾದ್ರೂ ಗೊತ್ತಿದ್ಯಾ? ರೇಖಾ ಜೋಡಿಯಾಗಿ ನಟಿಸಿದ್ದರು ಶಂಕರ್‌ ನಾಗ್!

By Shriram Bhat  |  First Published Sep 5, 2024, 7:16 PM IST

ಈಗಂತೂ ನಾರ್ತ್ ಹಾಗು ಸೌತ್ ಎಂಬ ಭೇಧ-ಭಾವ ಹೊರಟೇ ಹೋಗಿದೆ. ಪರಭಾಷೆ, ಮಾತೃಭಾಷೆ ಎಂಬ ವ್ಯತ್ಯಾಸ ಇಲ್ಲದೇ ಹಲವರು ಬಹಳಷ್ಟು ಭಾಷೆಯ ಚಿತ್ರರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ ಬಂದಿದ್ದು, ಯಾವುದೇ ಒಂದು ಸಿನಿಮಾ ಹಲವು ಭಾಷೆಗಳಲ್ಲಿ..


ದಕ್ಷಿಣ ಭಾರತದಿಂದ ಹಿಂದಿ ಚಿತ್ರರಂಗಕ್ಕೆ ಹೋಗಿ ಅಲ್ಲಿ ಸ್ಟಾರ್ ನಟಿಯಾಗಿ ಬೆಳೆದವರಲ್ಲಿ ರೇಖಾ (Rekha) ಕೂಡ ಒಬ್ಬರು. ಬಾಲಿವುಡ್ ಬಿಗ್ ಬಿ ಅಮಿತಾಬ್‌ ಬಚ್ಚನ್ ಅವರ ಮಾಜಿ ಗೆಳತಿ ಎಂದು ಹೇಳಲಾಗುವ ನಟಿ ರೇಖಾ ಜತೆ ಕನ್ನಡದ ನಟ ದಿವಂಗತ ಶಂಕರ್‌ ನಾಗ್ (Shankar Nag) ಅವರು ನಟನೆ ಮಾಡಿದ್ದರು. ಈ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 40 ವರ್ಷಗಳಿಗೂ ಅಧಿಕ ಸಮಯ ಕಳೆದಿದೆ. ಈ ಸಿನಿಮಾ ಬಗ್ಗೆ ಇಂದಿಗೂ ಜನರು ಚರ್ಚೆ ಮಾಡುತ್ತಾರೆ ಎನ್ನಲಾಗಿದೆ. 

ಈ ಚಿತ್ರದ ಹೆಸರು ಉತ್ಸವ್. ಕನ್ನಡದ ಖ್ಯಾತ ನಿರ್ದೇಶಕ ಗಿರೀಶ್ ಕಾರ್ನಾಡ್ (Girish Karnad) ಅವರು ಈ ಚಿತ್ರಕ್ಕೆ ನಿರ್ದೇಶಕರಾಗಿದ್ದರು. 1984ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ಬಾಲಿವುಡ್ ಲೆಜೆಂಡ್ ನಟ ಶಶಿ ಕಪೂರ್ ಈ ಚಿತ್ರದ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ನಟ ಶಂಕರ್‌ ನಾಗ್, ರೇಖಾ, ನೀನಾ ಗುಪ್ತಾ, ಶೇಖರ್ ಸುಮನ್ ಸೇರಿದಂತೆ ಹಲವರು ನಟಿಸಿದ್ದರು. ಆದರೆ ಈ ಸಂಗತಿ ಶಂಕರ್ ನಾಗ್ ಅವರ ಅಭಿಮಾನಿಗಳೂ ಸೇರಿದಂತೆ ಹಲವರಿಗೆ ಗೊತ್ತಿರಲಿಕ್ಕಿಲ್ಲ. 

Tap to resize

Latest Videos

ಇವರೆಲ್ಲ ಶಿಕ್ಷಕರ ಪಾತ್ರದಲ್ಲಿ ನಟಿಸಿರುವ ಕನ್ನಡ ನಟನಟಿಯರು, ನೆನಪಿದೆಯಾ ನಿಮಗೆ...?

ಕನ್ನಡದ ನಟ ಶಂಕರ್‌ ನಾಗ್ ಅವರು ಮುಂಬೈ ಚಿತ್ರರಂಗದಲ್ಲಿ, ನಾಟಕ ಹಾಗು ಕಿರುತೆರೆ ರಂಗಗಳಲ್ಲಿ ಕೆಲಸ ಮಾಡಿದ್ದಾರೆ. ಟಿವಿಯಲ್ಲಿ ಶಂಕರ್‌ ನಾಗ್ ಅವರ ನಟನೆ-ನಿರ್ದೇಶನದ ಕಿರುಚಿತ್ರಗಳು ಹಾಗೂ ಧಾರಾವಾಹಿಗಳು ಪ್ರಸಾರ ಕಂಡಿವೆ. ಅದೇ ರೀತಿ ಉತ್ಸವ್ ಎಂಬ ಹಿಂದಿ ಚಿತ್ರದಲ್ಲಿಯೂ ಶಂಕರ್‌ ನಾಗ್ ಅವರು ಅಭಿನಯಿಸಿದ್ದಾರೆ. 

ಇನ್ನು ನಟಿ ರೇಖಾ, ಶ್ರೀದೇವಿ, ಅನಿಲ್ ಕಪೂರ್, ಜೂಲಿ ಚಾವ್ಲಾ, ಸಂಜಯ್‌ ದತ್, ರವೀನಾ ಟಂಡನ್, ಸೋನಾಲಿ ಬೇಂದ್ರೆ, ಶಿಲ್ಪಾ ಶೆಟ್ಟಿ, ರಜನಿಕಾಂತ್, ಜಾಕಿ ಶ್ರಾಫ್, ಚಿರಂಜೀವಿ, ಮೋಹನ್‌ ಲಾಲ್, ಜಗಪತಿ ಬಾಬು, ದೀಪಿಕಾ ಪಡುಕೋಣೆ ಹೀಗೆ ಹಲವರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ವಿಷ್ಣುವರ್ಧನ್ ಕೂಡ ಹಿಂದಿ ಚಿತ್ರದಲ್ಲಿ ನಟಿಸಿದ್ದು, ಡಾ ರಾಜ್‌ಕುಮಾರ್ ಅವರು ಸಹ ಒಂದು ತೆಲುಗು ಚಿತ್ರದಲ್ಲಿ ಅಭಿನಯಿಸಿದ್ದಾರೆ. 

ಕೊನೆಯ ಕ್ಷಣದಲ್ಲಿ ಕುಂಕುಮ ಕೇಳಿದ್ಯಾಕೆ ಟಾಲಿವುಡ್ ಸ್ಟಾರ್ ನಟಿ ಕನ್ನಡತಿ ಸೌಂದರ್ಯ..?

ಈಗಂತೂ ನಾರ್ತ್ ಹಾಗು ಸೌತ್ ಎಂಬ ಭೇಧ-ಭಾವ ಹೊರಟೇ ಹೋಗಿದೆ. ಪರಭಾಷೆ, ಮಾತೃಭಾಷೆ ಎಂಬ ವ್ಯತ್ಯಾಸ ಇಲ್ಲದೇ ಹಲವರು ಬಹಳಷ್ಟು ಭಾಷೆಯ ಚಿತ್ರರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ ಬಂದಿದ್ದು, ಯಾವುದೇ ಒಂದು ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಎಲ್ಲರೂ ಎಲ್ಲಾ ಕಡೆ ಸಲ್ಲುವ ಕಲಾವಿದರು ಎನಿಸಿಕೊಂಡಿದ್ದಾರೆ. ಕಾಲಾಯ ತಸ್ಮೈ ನಮಃ ಎನ್ನಲೇಬೇಕಲ್ಲವೇ?

click me!