ಬಹು ದಿನಗಳ ನಂತರ ಮಾಧ್ಯಮಗಳಲ್ಲಿ ಮಾತನಾಡಿದ ಉಮಾಪತಿ. ದರ್ಶನ್- ರೇಣುಕಾಸ್ವಾಮಿ ಕೇಸ್ ಬಗ್ಗೆ ರಿಯಾಕ್ಷನ್.....
ಮದಗಜ, ರಾಬರ್ಟ್, ಹೆಬ್ಬುಲಿ ಮತ್ತು ಉಪಾಧ್ಯಕ್ಷ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಉಮಾಪತಿ ಶ್ರೀನಿವಾಸ್ ಚಿತ್ರರಂಗದಲ್ಲಿ ನಡೆಯುವ ಹಾಗೂ ಹೋಗುಗಳ ಬಗ್ಗೆ ಆಗಾಗ ಮಾಧ್ಯಮಗಳ ಚರ್ಚೆ ಮಾಡುತ್ತಾರೆ. ತಮ್ಮ ಅಭಿಪ್ರಾಯ ಏನೇ ಇದ್ದರೂ ನೇರವಾಗಿ ಹೇಳುತ್ತಾರೆ. ಹಾಗೆಯೇ ಚಿತ್ರದುರ್ಗದ ರೇಣುಕಾಸ್ವಾಮಿ ಮತ್ತು ದರ್ಶನ್ ಘಟನೆ ಬಗ್ಗೆ ಮತ್ತೆ ರಿಯಾಕ್ಟ್ ಮಾಡಿದ್ದಾರೆ.
'ಮಾನವೀಯತೆ ದೃಷ್ಟಿಯಿಂದ ನೋಡುವುದಾದರೆ ಖಂಡಿತ ನಡೆದಿರುವ ಘಟನೆ ದೊಡ್ಡ ತಪ್ಪು. ಒಬ್ಬ ವ್ಯಕ್ತಿ ಮೇಲೆ ನಾನು ಆರೋಪ ಮಾಡುತ್ತಿಲ್ಲ ಆದರೆ ಸಮಯ ಸಂದರ್ಭ ಏನು ಮಾಡಿಸಿತ್ತು ಅದು ನಮಗೆ ಗೊತ್ತಿಲ್ಲ. ಘಟನೆ ನಡೆದ ಜಾಗದಲ್ಲಿ ಪೊಲೀಸ್ ಇಲಾಖೆಯವರು ವಿಚಾರಣೆ ಮಾಡಿದ್ದಾರೆ ಅದರಿಂದ ಸುಮಾರು ನಾಲ್ಕು ವಾರ ಪುಟಗಳ ಚಾರ್ಚ್ ಶೀಟ್ ಸಲ್ಲಿಕೆ ಅಗಿದೆ. ಏನಾಗಿದೆ ಅನ್ನೋ ಸತ್ಯ ಸತ್ಯತೆಗಳು ನಮ್ಮ ಖಾನೂನಿನ ದೃಷ್ಟಿಯಲ್ಲಿ ನ್ಯಾಯಾಲಯದಲ್ಲಿ ತೀರ್ಮಾನ ಆಗಲಿ' ಎಂದು ಉಮಾಪತಿ ಶ್ರೀನಿವಾಸ್ ಮಾತನಾಡಿದ್ದಾರೆ.
'ತೀರ್ಪು ಬರುವುದಕ್ಕೂ ಮುನ್ನವೇ ನಾವು ಕಾಮೆಂಟ್ ಮಾಡಿ ಅದರಿಂದ ಗಳಿಸುವುದು ಏನೂ ಇಲ್ಲ. ನನಗೆ ತೊಂದರೆ ಬಂದಾಗಲೂ ಮತ್ತೊಬ್ಬರ ಹೆಗಲ ಮೇಲೆ ಗನ್ ಇಡುವ ಬದಲು ನೇರವಾಗಿ ಮಾತನಾಡಿ ಫೇಸ್ ಮಾಡಿದ್ದೀನಿ. ಸಮಸ್ಯೆ ಬಂದಾಗ ಎದೆ ತೋರಿಸಿ ಎದುರಿಸುತ್ತೀನಿ ಹೊರತು ಬೆನ್ನು ತೋರಿಸಿ ಓಡಿ ಹೋಗಲ್ಲ. ನಮ್ಮಲ್ಲಿ ಒಂದು ಅರ್ಥ ಮಾಡಿಕೊಳ್ಳಬೇಕು ಆರ್ಟಿಸ್ಟ್‌ಗಳು, ರಾಜಕರಾಣಿಗಳು ಅಥವಾ ಉನ್ನತಸ್ಥಾನದಲ್ಲಿ ಇರುವವರು ಅವರಿಗೆ ಆದಂತ ನೋವುಗಳು ಇರುತ್ತದೆ ಆ ನೋವುಗಳನ್ನು ವ್ಯಕ್ತ ಪಡಿಸಿಕೊಳ್ಳಲು ನೀತಿ ರೀತಿಗಳು ಇರುತ್ತದೆ' ಎಂದು ಉಮಾಪತಿ ಶ್ರೀನಿವಾಸ್ ಹೇಳಿದ್ದರು.
ದರ್ಶನ್ ಅಭಿಮಾನಿಗಳು ಮಾಧ್ಯಮಗಳನ್ನು ಕೆಟ್ಟದಾಗಿ ಬೈಯುತ್ತಾ, ಕಾಳಜಿಯಿದ್ದರೆ ನೀವು ರೇಣುಕಾಸ್ವಾಮಿ ಕುಟುಂಬಕ್ಕೆ ನೆರವು ನೀಡಿ ಎಂದು ಹೇಳುತ್ತಿದ್ದಾರೆ ಎಂಬ ಪ್ರಶ್ನೆ ಬಗ್ಗೆ ಮಾತನಾಡಿ, ನಾವು-ನೀವು ಯಾಕೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡಬೇಕು? ನಾವು ಕೊಲೆ ಮಾಡಿದ್ದೀವಾ? ಅವರ ಸಿನಿಮಾಗಳನ್ನು ಮಾಧ್ಯಮದಲ್ಲಿ ಪ್ರಚಾರ ಮಾಡಲು ಬ್ಯಾನ್ ಮಾಡಿದಾಗ ಯಾಕೆ ಸಿನಿಮಾಗಳು ಸಕ್ಸಸ್ ಆಗಲಿಲ್ಲ. ಸಿನಿಮಾ ನಟ ನಟಿಯರ ಬೆಳವಣಿಗೆಯಲ್ಲಿ ಮಾಧ್ಯಮದವರ ಕೊಡುಗೆ ಮತ್ತು ನಿರ್ಮಾಪಕದ ಕೊಡುಗೆಗಳು ಸಾಕಷ್ಟಿರುತ್ತದೆ. ನಮ್ಮನೆ ಕಾರ್ಯಕ್ರಮಕ್ಕೆ ಯಾವೊಬ್ಬ ನಟರನ್ನೂ ನಾನು ಕರೆದಿಲ್ಲ. ಹಾಗೇನಾದರೂ ಕರೆದಿದ್ದರೆ ಚಿಕ್ಕಣ್ಣ ಮಾತ್ರ, ಏಕೆಂದರೆ ಚಿಕ್ಕಣ್ಣ ನನಗೆ ಒಬ್ಬ ಸ್ನೇಹಿತನಾಗಿ, ನನ್ನ ಸಹೋದರನಾಗಿ ನಿಂತಿದ್ದಾನೆ. ಅವರಾರೋ ಬೊಗಳುತ್ತಾರೆಂದರೆ ನೀವು ನಾವ್ಯಾಕೆ ಕೇರ್ ಮಾಡಬೇಕು ಹೇಳಿ ಎಂದು ಈ ಹಿಂದೆ ಉಮಾಪತಿ ಹೇಳಿದ್ದರು.