ಕ್ಲಾಸ್ ತಗೊಂಡ್ರು ಅಗ್ನಿ ಶ್ರೀಧರ್: ಏನೋ ಇದೂ ಬುದ್ದಿವಂತ, ಇದೇನ್ ಮಾತೂ ಅಂತ ಆಡ್ತಿದೀಯ ಉಪೇಂದ್ರಾ..?

By Shriram Bhat  |  First Published Jun 29, 2024, 6:04 PM IST

ಯಾವ್ದನ್ನು ಇನ್ ಕ್ಯಾಮೆರಾ ನಡೆಸ್ತಾರೆ ಅಂದ್ರೆ, ಅದು ಟೆರರಿಸ್ಟ್ ಇನ್‌ವೆಸ್ಟಿಗೇಶನ್ ಮಾತ್ರ. ಅಂತಹ ಕೇಸ್‌ಗಳನ್ನು ನ್ಯಾಯಾಲಯದ ಬದಲು ಜೈಲುಗಳಲ್ಲೇ ನಡೆಸ್ತಾರೆ. ಯಾಕಂದ್ರೆ, ಶತ್ರು ದೇಶಗಳು ಸೇಡಿಗಾಗಿ..



ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ದರ್ಶನ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಸದ್ಯಕ್ಕೆ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ, ಒಟ್ಟೂ ಹದಿನೇಳು ಜನರು ಆರೋಪಿಯಾಗಿದ್ದಾರೆ. ಈ ಸಮಯದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರ ಬಗ್ಗೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಅವರು ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ನಾನು ತುಂಬಾ ಇಷ್ಟಪಡೋ ವ್ಯಕ್ತಿ ಉಪೇಂದ್ರ ಹೇಳಿರೋ ಮಾತು ಪಬ್ಲಿಕ್ ಟ್ರಯಲ್ ಮಾಡಿ ಅಂತ.. ಅದನ್ನ ಯಾರೂ ನನ್ನನ್ನು ಕೇಳಿಲ್ಲ. ಆದ್ರೆ, ಏನೋ ಉಪೇಂದ್ರ, ಬುದ್ದಿವಂತ ವ್ಯಕ್ತಿ ನೀನು, ಏನು ಮಾತಿದು..? ಇನ್ ಇಂಡಿಯಾ ಆಲ್‌ ದ ಟ್ರಯಲ್ಸ್ ಅರ್ ಪಬ್ಲಿಕ್ ಟ್ರಯಲ್ಸ್.. ಭಾರತದಲ್ಲಿ ಪ್ರೈವೇಟ್ ಟ್ರಯಲ್ಸ್ ಅಂತ ಇಲ್ಲ, ಎಲ್ಲಾನೂ ಪಬ್ಲಿಕ್ ಟ್ರಯಲ್ಸ್ ಮಾತ್ರ. ಹಿಡನ್ ಟ್ರಯಲ್ಸ್ ಅಂತ ನಮ್ ಭಾರತದಲ್ಲಿ ಇಲ್ಲ, ಎಲ್ಲವೂ ಸಾರ್ವಜನಿಕ ಟ್ರಯಲ್‌ಗಳೇ ಆಗಿವೆ. 

Latest Videos

undefined

ಹೈಜಾಕ್ ಆಯ್ತಾ ರಾಕಿಂಗ್ ಸ್ಟಾರ್ ಫಾರ್ಮುಲಾ, KGF ನಟ ಯಶ್ ಸಕ್ಸಸ್ ಸೂತ್ರದ ಗುಟ್ಟು ರಟ್ಟಾಯ್ತು!

ಆದ್ರೆ, ಯಾವ್ದನ್ನು ಇನ್ ಕ್ಯಾಮೆರಾ ನಡೆಸ್ತಾರೆ ಅಂದ್ರೆ, ಅದು ಟೆರರಿಸ್ಟ್ ಇನ್‌ವೆಸ್ಟಿಗೇಶನ್ ಮಾತ್ರ. ಅಂತಹ ಕೇಸ್‌ಗಳನ್ನು ನ್ಯಾಯಾಲಯದ ಬದಲು ಜೈಲುಗಳಲ್ಲೇ ನಡೆಸ್ತಾರೆ. ಯಾಕಂದ್ರೆ, ಶತ್ರು ದೇಶಗಳು ಸೇಡಿಗಾಗಿ ನ್ಯಾಯಾಲಯಗಳನ್ನೇ ಉಡಾಯಿಸಬಹುದು ಎಂಬ ಸಂದೇಹಕ್ಕೆ. ಇಂಟರ್‌ನ್ಯಾಷನಲ್ ಮಟ್ಟದಲ್ಲಿ ನಮಗೆ ಅವಮಾನ ಆಗ್ಬಿಡುತ್ತೆ ಅನ್ನೋ ಕಾರಣಕ್ಕೆ, ಅದು ಯಾವುದೇ ದೇಶವಿರಲಿ, ಅಮೇರಕಾನೇ ಇರಲಿ, ಅಂತಹ ತನಿಖೆಯನ್ನು ಜೈಲಿನಲ್ಲೇ ಮಾಡ್ತಾರೆ. 

ಕ್ಲಾಸ್ ತಗೊಂಡ್ರಾ ಸೋನು ನಿಗಮ್‌ಗೆ, ಆಶಾ ಭೋಂಸ್ಲೆಗೆ ಪಾದ ಪೂಜೆ ಮಾಡಿದ್ದು ಸರಿನಾ...?

ಭಯೋತ್ಪಾದಕರ ತನಿಖೆ ನಡೆಯುವ ಜೈಲುಗಳ ಒಂದು ನಿರ್ಧಿಷ್ಟ ಕೊಠಡಿಯಲ್ಲಿ ವಕೀಲರನ್ನು ಬಿಟ್ಟು ಬೇರೆ ಯಾರೂ ಇರುವುದಿಲ್ಲ. ಆದರೆ, ಅಲ್ಲೇನು ತನಿಖೆಯಾಯಿತು ಎಂಬ ರಿಪೋರ್ಟ್‌ ಅನ್ನು ನ್ಯಾಯಾಲಯಕ್ಕೆ ಆದೇ ದಿನ ಸಂಜೆ ಕೊಡುತ್ತಾರೆ. ಅಂತಹ ಮಾಹಿತಿಯನ್ನು ಯಾವುದೇ ಪಬ್ಲಿಕ್ ಪಡೆಯಬಹುದು. 

ಗಂಡ-ಹೆಂಡತಿ ಮಧ್ಯೆ 'ಅದು' ಆಗ್ತಿಲ್ಲ ಅಂದ್ರೆ ಒಟ್ಟಿಗೇ ಒಂದೇ ಮನೇಲಿ ಯಾಕೆ ಇರ್ಬೇಕು; ಚಂದನ್ ಶೆಟ್ಟಿ

ಪಬ್ಲಿಕ್‌ನಲ್ಲಿ ನಡೆಸಿ ಅಂದ್ರೆ ಏನ್ ಮೆಜೆಸ್ಟಿಕ್‌ನಲ್ಲಿ ನಡೆಸೋಕೆ ಆಗುತ್ತಾ? ರೇಲ್ವೇ ಷ್ಟೇಷನ್‌ನಲ್ಲೋ ಕಲಾಸಿಪಾಳ್ಯ ಮಾರ್ಕೆಟ್‌ನಲ್ಲೋ ನಡೆಸೋಕೆ ಆಗಲ್ಲ. ಅಲ್ಲಿ ನಡೆಯುವ ಪ್ರತಿಯೊಂದು ವಾಕ್ಯವಲ್ಲ, ಶಬ್ಧವೂ ಕೂಡ ಅದೇ ದಿನ ಆನ್‌ಲೈನ್‌ಗೆ ಬರುತ್ತೆ. ಅದು ಎಲ್ಲವೂ ರೆಕಾರ್ಡ್ ಇರುತ್ತೆ.. ಕೇಸ್ ದೊಡ್ಡದೇ ಇರಲಿ ಚಿಕ್ಕದೇ ಆಗಿರಲಿ, ಎಲ್ಲವೂ ದಾಖಲೆ ಆಗಿರುತ್ತವೆ. ನೂರು ವರ್ಷದ ಮೇಲೂ ಸಹ ಅದನ್ನು ಪಡೆಯಬಹುದು.

ಬುಡಕ್ಕೆ ಬೆಂಕಿ ಬಿದ್ರೆನೇ ರಾಕೆಟ್‌ ಮೇಲಕ್ಕೆ ಹಾರೋದು; KGF ರಾಕಿಂಗ್ ಸ್ಟಾರ್ ಯಶ್ ಯಾರಿಗೆ ಹೇಳಿದ್ದು?

ಹೀಗಾಗಿ ಎಲ್ಲವೂ ಪಬ್ಲಿಕ್ ಟ್ರಯಲ್‌ಗಳೇ ಆಗಿವೆ. ಆದರೆ, ಎಲ್ಲಾ ಮಾಧ್ಯಮಗಳಿಗೆ, ಜನರಿಗೆ ತಲುಪಿಸಬೇಕೆಂಬ ನಿಯಮವಿಲ್ಲ. ನೀವು ಕೇಳಿ ಬೇಕಾದರೆ ಪಡೆಯಬಹುದು' ಎಂದಿದ್ದಾರೆ ಹಿರಿಯ ಬರಹಗಾರ ಅಗ್ನಿ ಶ್ರೀಧರ್. 'ನಟ ದರ್ಶನ್‌ ಸಹವಾಸ ದೋಷ ಹಾಗೂ ಕುಡಿತ ಬಿಟ್ಟರೆ ಮುಂದೆ ಭವಿಷ್ಯದಲ್ಲಿ ಒಳ್ಳೆಯದಾಗಲಿದೆ' ಎಂದು ಕೂಡ ಅಗ್ನಿ ಶ್ರೀಧರ್ ಹೇಳಿದ್ದಾರೆ.

ಕೊಲೆಗಿಂತ ಮೊದ್ಲೇ ಮಹಾ ಅಪರಾಧ ಮಾಡಿ ಮುಗಿಸಿತ್ತಾ ದರ್ಶನ್ & ಗ್ಯಾಂಗ್? ಅಗ್ನಿ ಶ್ರೀಧರ್ ಹೇಳಿದ್ದೇನು?

ಮುಂದುವರೆದ ಅವರು, 'ನನ್ನ ಅನಿಸಿಕೆ ಏನೆಂದರೆ, ಈ ವಿಷ್ಯದಲ್ಲಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಆದರೆ, ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಅಚಾತುರ್ಯದಿಂದ ಆಗಿದ್ದು ಎಂಬುದನ್ನು ನಾನು ಖಂಡಿತ ಹೇಳಬಯಸುತ್ತೇನೆ' ಎಂದಿದ್ದಾರೆ. ಜತೆಗೆ, 'ಜೈಲು ಸೇರಿರುವ ನಟ ದರ್ಶನ್ ಸ್ವಲ್ಪ ಕಾಲದಲ್ಲೇ ನಿರಪರಾಧಿ ಎನಿಸಿ ಹೊರಗೆ ಬರುತ್ತಾನೆ. ಆದರೆ, ಮುಂದೆ ಆತ ಹೊಸ ಮನುಷ್ಯನಾಗುವತ್ತ ಗಮನ ಹರಿಸಬೇಕು' ಎಂದಿದ್ದಾರೆ. 

click me!