ರಾಕಿಂಗ್ ಸ್ಟಾರ್ ಫಾರ್ಮುಲಾ ಹೈಜಾಕ್ ಆಯ್ತಾ, KGF ನಟ ಯಶ್ ಸಕ್ಸಸ್ ಸೂತ್ರದ ಗುಟ್ಟು ರಟ್ಟಾಯ್ತು!

Published : Jun 29, 2024, 04:23 PM ISTUpdated : Jun 30, 2024, 10:31 AM IST
ರಾಕಿಂಗ್ ಸ್ಟಾರ್ ಫಾರ್ಮುಲಾ ಹೈಜಾಕ್ ಆಯ್ತಾ, KGF ನಟ ಯಶ್ ಸಕ್ಸಸ್ ಸೂತ್ರದ ಗುಟ್ಟು ರಟ್ಟಾಯ್ತು!

ಸಾರಾಂಶ

ನಟ ಯಶ್ ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರರು. ಅಷ್ಟೇ ಅಲ್ಲ, ಗೀತೂ ಮೋಹನ್‌ ದಾಸ್ ನಿರ್ದೇಶನದ ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ..

ಕನ್ನಡದ ಕೆಜಿಎಫ್ (KGF) ಸಿನಿಮಾ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ನಿರೂಪಕಿ ಅನುಶ್ರೀ ಜೊತೆ ಮಾತನಾಡಿರುವ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದು ಆ್ಯಂಕರ್​ ಅನುಶ್ರೀ ಹಾಗೂ ನಟ ಯಶ್ ಅವರಿಬ್ಬರೂ ಒಂದು ವೇದಿಕೆಯ ಮೇಲೆ ಮಾತನಾಡಿರುವ ಹಳೆಯ ವೀಡಿಯೋ. ಆ ವೀಡಿಯೋ ಕ್ಲಿಪ್ಪಿಂಗ್ ಹಳೆಯದಾಗಿದ್ದರೂ ಅದು ಎಲ್ಲಾ ಕಾಲಕ್ಕೂ ಸಲ್ಲುವಂತಹ, ಬಹಳಷ್ಟು ಜನರಿಗೆ ಸ್ಪೂರ್ತಿ ನೀಡುವಂಥ ವೀಡಿಯೋ ಆಗಿದೆ ಎನ್ನಬಹುದು. 

ಈ ವೀಡಿಯೋದಲ್ಲಿ ನಟ ಯಶ್ ಮಾತನಾಡಿರುವ ರೀತಿ ತುಂಬಾ ಜನರಿಗೆ ಇಷ್ಟವಾಗಿದೆ.  ಆ್ಯಂಕರ್​ ಅನುಶ್ರೀ ಅವರು ರಾಕಿಂಗ್ ಸ್ಟಾರ್ ನಟ ಯಶ್ ಅವರಿಗೆ ಕೆಲವು ಪ್ರಶ್ನೆಗಳನ್ನುಕೇಳಿದ್ದಾರೆ. ಅದಕ್ಕೆ ರಾಕಿಂಗ್ ಸ್ಟಾರ್ ತಮ್ಮ ಅನಿಸಿಕೆಯಂತೆ ಉತ್ತರ ಕೊಟ್ಟಿದ್ದಾರೆ. ಅನುಶ್ರೀ ಕೇಳಿದ ಪ್ರತಿಯೊಂದು ಪ್ರಶ್ನೆಗೆ ಯಶ್ ಕೊಟ್ಟ ಉತ್ತರಕ್ಕೆ ಅಲ್ಲಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ, ಕೇಕೆ ಹಾಕಿದ್ದಾರೆ, ಯಶ್ ಮೆಚ್ಯೂರಿಟಿಗೆ ಅಚ್ಚರಿ ಪಟ್ಟಿದ್ದಾರೆ, ತಲೆದೂಗಿದ್ದಾರೆ. ಹಾಗಿದ್ರೆ ನಟ ಯಶ್ ಅಲ್ಲಿ ಅದೇನು ಹೇಳಿದ್ದಾರೆ ಗೊತ್ತಾ?

ಗಂಡ-ಹೆಂಡತಿ ಮಧ್ಯೆ 'ಅದು' ಆಗ್ತಿಲ್ಲ ಅಂದ್ರೆ ಒಟ್ಟಿಗೇ ಒಂದೇ ಮನೇಲಿ ಯಾಕೆ ಇರ್ಬೇಕು; ಚಂದನ್ ಶೆಟ್ಟಿ

ನಟಿ, ನಿರೂಪಕಿ ಅನುಶ್ರೀ 'ಗೆಲುವು' ಎಂದು ಪ್ರಶ್ನೆ ಕೇಳದ್ದಾರೆ. ಅದಕ್ಕೆ ನಟ ಯಶ್ 'ನನ್ನ ಪ್ರಕಾರ ಗೆಲುವು ಅನ್ನೋದು ಸಿಕ್ಕೇ ಸಿಗುತ್ತೆ, ಎಲ್ಲರಿಗೂ ಗೆಲುವು ಅನ್ನೋದ್ನ ಪಡಿಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದ್ರೆ, ಆ ಗೆಲುವನ್ನು ಪಡೆಯೋಕೆ ಬೇಕಾದಂಥ ಪೂರ್ವ ಸಿದ್ಧತೆ ಹಾಗೂ ಕೆಲಸ, ಪರಿಶ್ರಮ ಪಡೋಕೆ ಎಲ್ಲರೂ ರೆಡಿ ಇರ್ಬೇಕು. ಇದ್ನ ತಿಳ್ಕೊಂಡು ಅದ್ರ ಹಿಂದೆ ಹೋದ್ರೆ ಗೆಲುವು ತಾನಾಗಿಯೇ ಸಿಗುತ್ತೆ ಅನ್ನೋದು ನನ್ ನಂಬಿಕೆ.

ಸೋನು ನಿಗಂ ಆಶಾ ಭೋಂಸ್ಲೆ ಪಾದ ಪೂಜೆ ಮಾಡಿದ್ದು ಅತಿರೇಕವೇ? 

ಸೋಲು ಎಂಬ ಪ್ರಶ್ನೆಗೆ ಅದು ನನಗೆ ಗೊತ್ತಿಲ್ಲ, ಏಕೆಂದರೆ ಆ ನೆಗೆಟಿವ್ ಸಂಗತೀನ ನಾನು ಸೈಡ್‌ಗೆ ಹಾಕಿದೀನಿ, ಅದು ಏನು ಅಂತಲೂ ನನಗೆ ಗೊತ್ತಿಲ್ಲ. ನಾನು ಏನೇ ಕೆಲಸ ಮಾಡಿದರೂ ಸಾಕಷ್ಟು ಪೂರ್ವ ಸಿದ್ಧತೆ ಹಾಗೂ ಶ್ರದ್ಧೆ ವಹಿಸಿ ಮಾಡುತ್ತೇನೆ. ಅದು ನಾನು ಏನು ಅಂದುಕೊಂಡಿರುವೆನೋ ಹಾಗೆ ಅಥವಾ ಅದಕ್ಕಿಂತ ಸ್ವಲ್ಪ ಕಮ್ಮಿ ಅಥವಾ ಚೆನ್ನಾಗಿಯೇ ಫಲ ಕೊಡುತ್ತೆ. ಹೀಗಾಗಿ ನನಗೆ ಸೋಲು ಎಂದರೇನು ಅಂತ ಗೊತ್ತೇ ಇಲ್ಲ. ನನಗೆ ಆಗುವುದೆಲ್ಲವನ್ನೂ ಅನುಭವ ಎಂದೇ ಗುರುತಿಸುತ್ತೇನೆ' ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್. 

ಬುಡಕ್ಕೆ ಬೆಂಕಿ ಬಿದ್ರೆನೇ ರಾಕೆಟ್‌ ಮೇಲಕ್ಕೆ ಹಾರೋದು; KGF ರಾಕಿಂಗ್ ಸ್ಟಾರ್ ಯಶ್ ಯಾರಿಗೆ ಹೇಳಿದ್ದು?

ಇನ್ನು ಕನ್ನಡದ ನಟಿ ಹಾಗೂ ಆ್ಯಂಕರ್​ ಅನುಶ್ರೀ ಅವರ ಬಗ್ಗೆಯಂತೂ ಹೇಳಲೇಬೇಕಾಗಿಲ್ಲ. ಅವರೊಂದು 'ಬೊಂಬಾಟ್ ಮಾತಿನ ಬೊಂಬೆ' ಎಂಬುದು ಬಹಳಷ್ಟು ಜನರಿಗೆ ಗೊತ್ತು. ಸ್ಯಾಂಡಲ್‌ವುಡ್ ಹಾಗು ಕಿರುತೆರೆಯ ಹಲವಾರು ಕಲಾವಿದರನ್ನು ಹಲವು ವೇದಿಕೆಗಳಲ್ಲಿ ಹಾಗೂ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅನುಶ್ರೀ ಸಂದರ್ಶನ ಮಾಡುತ್ತಾ ಇರುತ್ತಾರೆ. ಅಲ್ಲಿ ಹಲವರನ್ನು ಕಾಲೆಳೆದು ನಕ್ಕುನಗಿಸಿ, ಅವರಿಕೆ ಪ್ರಶ್ನೆ ಕೇಳಿ ಉತ್ತರ ಪಡೆದು ಅದನ್ನೆಲ್ಲ ಜಗತ್ತಿನ ತುಂಬಾ ಹರಿದಾಡಲು ಬಿಟ್ಟುಬಿಡುತ್ತಾರೆ. 

ಕೊಲೆಗಿಂತ ಮೊದ್ಲೇ ಮಹಾ ಅಪರಾಧ ಮಾಡಿ ಮುಗಿಸಿತ್ತಾ ದರ್ಶನ್ & ಗ್ಯಾಂಗ್? ಅಗ್ನಿ ಶ್ರೀಧರ್ ಹೇಳಿದ್ದೇನು? 

ನಟ ಯಶ್ ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರರು. ಅಷ್ಟೇ ಅಲ್ಲ, ಗೀತೂ ಮೋಹನ್‌ ದಾಸ್ ನಿರ್ದೇಶನದ ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ.  ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಸದ್ಯ ರಾಮಾಯಣ ಚಿತ್ರದಲ್ಲಿ, ರಾಮನಾಗಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರಿಗೆ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.

ಏನ್ರೀ ಇದೂ, ಲೇಟ್‌ ಆಗಿ ಗುಟ್ಟು ರಟ್ಟಾಗಿದೆ, ಯಾರಿಂದ್ಲೂ ಆಗದೇ ಇರೋದನ್ನ ಮಾಡಿದ್ರು ವಿಷ್ಣುವರ್ಧನ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?
ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar