ಹಿರಿಯ ನಿರೂಪಕ, ನಟ ಸಂಜೀವ ಕುಲಕರ್ಣಿ ಇನ್ನಿಲ್ಲ

Suvarna News   | Asianet News
Published : Jan 26, 2020, 12:57 PM ISTUpdated : Jan 26, 2020, 01:05 PM IST
ಹಿರಿಯ ನಿರೂಪಕ, ನಟ ಸಂಜೀವ ಕುಲಕರ್ಣಿ ಇನ್ನಿಲ್ಲ

ಸಾರಾಂಶ

ಹಿರಿಯ ನಿರೂಪಕ ಸಂಜೀವ ಕುಲಕರ್ಣಿ(49) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತಂದೆ ನಿಧನರಾಗಿರುವ ವಿಚಾರವನ್ನು ಅವರ ಪುತ್ರ ಸೌರಭ್‌ ಕುಲಕರ್ಣಿ ಫೇಸ್‌ಬುಕ್‌ ಪೇಜ್‌ನಲ್ಲಿ ತಿಳಿಸಿದ್ದಾರೆ. ಇವರು ಪತ್ನಿ ಭಾಗ್ಯ ಕುಲರ್ಣಿ ಹಾಗೂ ಪುತ್ರ ಸೌರಭ್ ಕುಲಕರ್ಣಿಯನ್ನು ಅಗಲಿದ್ದಾರೆ.

ಬೆಂಗಳೂರು(ಜ.26): ಹಿರಿಯ ನಿರೂಪಕ ಸಂಜೀವ ಕುಲಕರ್ಣಿ(49) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತಂದೆ ನಿಧನರಾಗಿರುವ ವಿಚಾರವನ್ನು ಅವರ ಪುತ್ರ ಸೌರಭ್‌ ಕುಲಕರ್ಣಿ ಫೇಸ್‌ಬುಕ್‌ ಪೇಜ್‌ನಲ್ಲಿ ತಿಳಿಸಿದ್ದಾರೆ.

ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸುಮಾರು 15 ವರ್ಷಗಳಿಂದ ಸಂಜೀವ ಅವರು ಕಾರ್ಡಿಯೊಮಿಯೋಪತಿ( ಹೃದಯದ ಸ್ನಾಯುಗಳು ಅಸ್ವಸ್ಥಗೊಳ್ಳುವ ಸ್ಥಿತಿ) ಎಂಬ ಕಾಯಿಲೆಯಿಂದ ಬಳಲುತ್ತಿದ್ದರು.

ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ KS ಅಶ್ವಥ್‌ನವರನ್ನ ಸ್ಮರಿಸುವ ಸಮಯ

ಕೆಲವು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಂಜೀವ ಕುಲಕರ್ಣಿ ಅವರ ಚಿಕಿತ್ಸೆಗಾಗಿ 45 ಲಕ್ಷಕ್ಕೂ ಹೆಚ್ಚಿನ ಅವಶ್ಯಕತೆ ಇತ್ತು. ಈ ಹಣವನ್ನು ಸಂಗ್ರಹಿಸಲಾಗುತ್ತಿತ್ತು. ಈ ನಡುವೆಎಯೇ ಚಿಕಿತ್ಸೆ ಫಲಕಾರಿಯಾಗದೆ ಸಂಜೀವ ಕುಲಕರ್ಣಿ ನಿಧನರಾಗಿದ್ದಾರೆ.

ಸಭೆ, ಕಾರ್ಯಕ್ರಮಗಳಿಗೆ ತಮ್ಮ ನಿರೂಪಣೆಯಿಂದ ಇನ್ನಷ್ಟು ಮೆರುಗು ತುಂಬುತ್ತಿದ್ದ ಸಂಜೀವ ಕುಲಕರ್ಣಿ ಅವರು ಸಮಭ್ರಮ ಸೌರಭ ಎಂಬ ಸಂಸ್ಥೆಯನ್ನೂ ಪ್ರಾರಂಭಿಸಿದ್ದರು. ನಟನಾ ಕ್ಷೇತ್ರದಲ್ಲಿಯೂ ತಮ್ಮದೇ ಛಾಪು ಮೂಡಿಸಿಕೊಂಡಿದ್ದ ಅವರು, ನಾಗಿಣಿ, ನಿಗೂಢ ರಾಥ್ರಿ, ಏಟು ಎದಿರೇಟದ ಮೊದಲಾದ ಧಾರವಾಹಿಗಳಲ್ಲಿ ನಟಿಸಿದ್ದರು. ಅವರ ಪುತ್ರ ಸೌರರ್ಬ ಅವರು ಸದ್ಯ ಪಾಪ ಪಾಂಡು ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?