
'ಆ ದಿನಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ 'ಬಿರುಗಾಳಿ' ಎಬ್ಬಿಸಿದ ಪ್ರತಿಭಾನ್ವಿತ ನಟ ಚೇತನ್ ಕುಮಾರ್ ಬಹು ದಿನಗಳಿಂದ ಪ್ರೀತಿಸುತ್ತಿದ್ದ ಗೆಳತಿ ಮೇಘ ಅವರ ಜೊತೆ ಫೆಬ್ರವರಿ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮದುವೆ ಎಲ್ಲಾ ಮದುವೆ ಶಾಸ್ತ್ರ, ಸಂಪ್ರದಾಯಗಳನ್ನು ಮೀರಿ ತುಸು ಭಿನ್ನವಾಗಿ ವಿವಾಹವಾಗಿದ್ದಾರೆ.
ಸರಳ ವಿವಾಹಕ್ಕೆ ಸ್ಫೂರ್ತಿಯಾಯ್ತು 'ಆ ದಿನಗಳು' ಚೇತನ್- ಮೇಘ ಮದುವೆ!
ಸಿಂಪಲ್ ಆ್ಯಂಡ್ ಹಂಬಲ್ ಮ್ಯಾನ್ ಸರಳವಾಗಿ ಫೆಬ್ರವರಿ 1ರಂದು ರಿಜಿಸ್ಟರ್ ಮದುವೆ ಹಾಗೂ 2ರಂದು ವಿನೋಭ ಬಾವೆ ಆಶ್ರಮದಲ್ಲಿ ಆರತಕ್ಷತೆ ಮಾಡಿಕೊಂಡರು. ಪಾಲ್ಗೊಂಡ ಪ್ರತಿಯೊಬ್ಬ ಗಣ್ಯರಿಗೂ ಸಂವಿಧಾನದ ಪುಸ್ತಕಗಳನ್ನು ಉಡುಗೊರೆಯಾಗಿ ಚೇತನ್ ನೀಡಿದ್ದಾರೆ. ಈ ವಿಭಿನ್ನ ಮದುವೆಗೆ ಕಾಂಗ್ರೆಸ್ ನಾಯಕ ಶಶಿ ತರೂಣ್ ಮನಸೋತು ಟ್ಟಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಆ ದಿನಗಳು' ಚೇತನ ಬಾಳ ಸಂಗಾತಿ ಹೀಗಿದ್ದಾರೆ ನೋಡಿ
'ಕನ್ನಡ ಚಿತ್ರರಂಗ ನಟ ಚೇತನ್ ಕುಮಾರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಮೇಘಾ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವ ರೀತಿಯಲ್ಲಿ ಮದುವೆ ಆಗಿದ್ದಾರೆ. ಮದುವೆಗೆ ಆಗಮಿಸಿದವರಿಗೆ ಸಂವಿಧಾನದ ಪುಸ್ತಕಗಳನ್ನು ಹಂಚಿದ್ದಾರೆ. ಅಲ್ಲದೇ ತೃತೀಯ ಲಿಂಗಿಗಳ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಅವರಿಂದ ಓದಿಸಿದ್ದಾರೆ' ಎಂದು ಟ್ಟೀಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.