ಪ್ಯಾನ್ ಇಂಡಿಯಾ ಟ್ರೆಂಡ್ ಭೂತಪ್ರೇತವೇ? ಇದಕ್ಕೆ ಬೈದರೆ ಸಮಸ್ಯೆ ಪರಿಹಾರ ಆಗುವುದೇ? ಯೆಸ್ or ನೋ..?!

By Shriram BhatFirst Published Jul 29, 2024, 5:03 PM IST
Highlights

ಕೆಲವರು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಬದಲು 'ಪ್ಯಾನ್ ಇಂಡಿಯಾ ಭೂತ' ಅಂತಲೇ ಬಳಸುತ್ತಾರೆ. ಅದು ಸರಿಯೋ ತಪ್ಪೋ ಎಂಬುದು ಚರ್ಚೆಯ ಹಂತದಲ್ಲೇ ಯಾವತ್ತೂ ಇರಲಿ. ಏಕೆಂದರೆ, ಚಿತ್ರರಂಗದ ಬೆಳವಣಿಗೆಗೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬೇಕು. ಆದರೆ, ಎಲ್ಲಾ ಸಿನಿಮಾಗಳೂ ಪ್ಯಾನ್ ಇಂಡಿಯಾಗಳೇ..

ಮೊದಲೆಲ್ಲಾ, ಅಂದರೆ ಕಳೆದೊಂದು ದಶಕದ ಹಿಂದೆ ಈ ಪ್ಯಾನ್ ಇಂಡಿಯಾ (Pan India Movie) ಸಿನಿಮಾ ಎನ್ನುವ ಕಾನ್ಸೆಪ್ಟೇ ಇರಲಿಲ್ಲ. ಸಿನಿಮಾವೊಂದು ಗೆದ್ದರೆ ನಿರ್ಮಾಪಕರಿಗೆ ಒಂದಿಷ್ಟು ಲಾಭ ಬಂದರೆ ಮುಗಿಯಿತು. ಇಡೀ ಸಿನಿಮಾ ತಂಡಕ್ಕೆ ಒಂದಿಷ್ಟು ಕಾಸು, ಹೆಸರು ತಂದುಕೊಡುತ್ತಿತ್ತು. ಹಾಗೇ, ಅದೇ ತಂಡ ಅಥವಾ ಇನ್ನೊಂದು ತಂಡ ಸಿನಿಮಾ ಕೆಲಸಕಾರ್ಯಗಳನ್ನು ಮುಂದುವರಿಸುತ್ತಿತ್ತು. ಅದೊಂಥರಾ ರಿಲೇ ಆಟದಂತೆ ಇತ್ತು. ಆದರೆ, ಇಂದು ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಮೇಕಿಂಗ್ ಭಾರೀ ಸೌಂಡ್ ಮಾಡುತ್ತಿದೆ. 

ಕೆಲವರು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಬದಲು 'ಪ್ಯಾನ್ ಇಂಡಿಯಾ ಭೂತ' ಅಂತಲೇ ಬಳಸುತ್ತಾರೆ. ಅದು ಸರಿಯೋ ತಪ್ಪೋ ಎಂಬುದು ಚರ್ಚೆಯ ಹಂತದಲ್ಲೇ ಯಾವತ್ತೂ ಇರಲಿ. ಏಕೆಂದರೆ, ಚಿತ್ರರಂಗದ ಬೆಳವಣಿಗೆಗೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬೇಕು. ಆದರೆ, ಎಲ್ಲಾ ಸಿನಿಮಾಗಳೂ ಪ್ಯಾನ್ ಇಂಡಿಯಾಗಳೇ ಆಗತೊಡಗಿದರೆ ಆಗ ವರ್ಷಕ್ಕೆ ಮಾಡಲಾಗುವ ಹಾಗೂ ನೋಡಲಾಗುವ ಸಿನಿಮಾಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತವೆ. ಆಗ ಅನಿವಾರ್ಯತೆ ಹಾಗೂ ಅರ್ಹತೆ ಇದ್ದವರು ಮಾತ್ರ ಆ ಉದ್ಯಮದಲ್ಲಿ ಉಳಿದುಕೊಳ್ಳುವಂತಾಗುತ್ತದೆ. ಅದು ಒಳ್ಳೆಯದಾ ಕೆಟ್ಟದ್ದಾ? ಗೊತ್ತಿಲ್ಲ..

Latest Videos

ಕನ್ನಡಿಗರಿಗೆ ಕೆಲಸ ಕೊಡಲು ಹೋಗಿ ಪೆಟ್ಟು ತಿಂದ್ರಾ ಯಶ್‌-ಕೆವಿಎನ್ ಪ್ರೊಡಕ್ಷನ್ಸ್‌? ಏನಿದು ಸೆಟ್ ಪ್ರಾಬ್ಲಂ?

ಸಿನಿಮಾ ಮಾಡುವವರು ಮೊಟ್ಟಮೊದಲನೆಯದಾಗಿ ಅರ್ಥ ಮಾಡಿಕೊಳ್ಳಬೇಕಾಗಿದ್ದು ಯಾವ ಸಬ್ಜೆಕ್ಟ್ ಪ್ಯಾನ್ ಇಂಡಿಯಾ ಸಿನಿಮಾಗೆ ಸರಿ ಎನ್ನುವುದು. ಎಲ್ಲ ವಿಷಯಗಳೂ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಸ್ಯೂಟೆಬಲ್ ಆಗಲಾರದು. ಜೊತೆಗೆ, ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಬಹಳಷ್ಟು ಕೋಟಿ ಖರ್ಚು ಮಾಡುವಂಥ ಸಂಸ್ಥೆ ನಿರ್ಮಾಣ ಮಾಡಲು ಜೊತೆಗಿರಬೇಕು. ಒಬ್ಬರು ಸಾಮಾನ್ಯ ನಿರ್ಮಾಪಕರು ಪ್ಯಾನ್ ಹಿಂದೆ ಹೋದರೆ, ಸಿನಿಮಾ ಬಿಡುಗಡೆ ಮಾಡುವುದಿರಲಿ, ಶೂಟಿಂಗ್ ಮುಗಿಸಲೂ ಕೂಡ ಪರದಾಡಬೇಕಾಗುತ್ತದೆ. ಇನ್ನು ಪ್ರಚಾರದ ಖರ್ಚಿನ ಬಗ್ಗೆ ಮಾತನಾಡುವುದೇ ಬೇಡ. 

ಕೆಜಿಎಫ್ ಹಾಗೂ ಕಾಂತಾರ ಅಂತಹ ಕೆಲವು ಸಿನಿಮಾಗಳಿಗೆ ಹೊಂಬಾಳೆಯಂಥ ಸಂಸ್ಥೆ ಬೆನ್ನೆಲುಬಾಗಿ ನಿಂತಿತ್ತು. ಹೀಗಾಗಿ ಅಲ್ಲಿ ಸಿನಿಮಾ ಕಥೆ, ಕ್ವಾಲಿಟಿ ಹಾಗೂ ಪ್ರಚಾರ, ಹಂಚಿಕೆ ಎಲ್ಲವೂ ಅಚ್ಚುಕಟ್ಟಾಗಿ ನಡೆದು, ಸಿನಿಮಾ ಯಶಸ್ವಿಯಾಗಿ ಪ್ರೇಕ್ಷಕರನ್ನು ತಲುಪಿ, ದೇಶವನ್ನೂ ಮೀರಿ ಪ್ರಪಂಚದಾದ್ಯಂತ ಸದ್ದು ಮಾಡಿತು. ಆದರೆ, ಎಲ್ಲಾ ಸಿನಿಮಾಗಳು ಪ್ಯಾನ್ ಇಂಡಿಯಾ ಆಗಲು ಅಥವಾ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ, ಸಣ್ಣಪುಟ್ಟ ಸಿನಿಮಾಗಳಿಂದಲೇ ಸಿನಿಮಾ ಉದ್ಯಮದ ದೈನಂದಿನ ಕೆಲಸಕಾರ್ಯಗಳು ಸಾಗಬೇಕು, ಥಿಯೇಟರ್‌ಗಳು ಉಸಿರಾಡಬೇಕು. 

ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಲು ಹೊರಟಿದ್ದಾರಾ ಸೃಜನ್-ಚಂದನ್ ಜೋಡಿ? ಇದೇನ್ ಗುರೂ..!

ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, 'ಮಕ್ಕಳಿಗೆ ಅಪ್ಪ-ಅಮ್ಮ ಇಬ್ಬರೂ ಬೇಕು' ಎಂಬಂತೆ. ಪೋಷಕರಲ್ಲಿ ಹೊರಗೆ ಹೋಗಿ ದುಡಿಯುವವರೂ ಬೇಕು, ಮನೆಯಲ್ಲಿದ್ದು ಲಾಲನೆಪಾಲನೆ ಮಾಡುವವರೂ ಬೇಕು. ಅದೇ ರೀತಿ, ಚಿತ್ರರಂಗದಲ್ಲಿ ಕೂಡ ಕಡಿಮೆ ಬಜೆಟ್ಟಿನ, ಕಡಿಮೆ ಲಾಭ ಗಳಿಸುವ ಸಿನಿಮಾಗಳು ಬರುತ್ತಿರಬೇಕು, ಹೋಗುತ್ತಿರಬೇಕು. ಜೊತೆಗೆ, ನಾಲ್ಕೈದು ವರ್ಷಗಳಿಗೆ ಎರಡೋ ಮೂರೋ ಪ್ಯಾನ್ ಇಂಡಿಯಾ ಸಿನಿಮಾಗಳು ಬಂದರೆ ಸಾಕು. ಇದಕ್ಕೆ ಉದಾಹರಣೆಯಾಗಿ ಪಕ್ಕದ ಮಲಯಾಳಂ ಚಿತ್ರರಂಗವನ್ನು ಒಮ್ಮೆ ನೋಡಬಹುದೇ? ದಿಢೀರ್ ಬೆಳೆಯಲು ಹೋಗಿ ಬದುಕಲೂ ಕಷ್ಟವಾದರೆ ಹೇಗೆ?

ಆದರೆ, ಇವತ್ತು ಏನಾಗುತ್ತಿದೆ? ಎಲ್ಲರೂ ಎಲ್ಲವೂ ಪ್ಯಾನ್ ಇಂಡಿಯಾ ಚಿತ್ರ ಮಾಡಲು ಹೋಗಿದ್ದಾರೆ. ಸ್ಟಾರ್‌ಗಳ ಸಿನಿಮಾಗಳು ರಿಲೀಸ್ ಆಗುವುದು ಎರಡು ಮೂರು ವರ್ಷಕ್ಕೆ ಒಮ್ಮೆ. ಅಂತಹ ಸಿನಿಮಾಗಳನ್ನೇ ಎಲ್ಲರೂ ಮಾಡಲು ಹೊರಟಿದ್ದಾರೆ. ಈಗ ಸಿನಿಮಾ ಮೇಕಿಂಗ್ ಇದೆ, ರಿಲೀಸ್ ಇಲ್ಲ. ದಿನಗೂಲಿ ನೌಕಕರು ಕೂಡ ಇಲ್ಲಿದ್ದಾರೆ ಎಂಬುದನ್ನು ಚಿತ್ರರಂಗವೇ ಮರೆತರೆ ಹೇಗೆ? ಅವರು ಅದನ್ನು ಬಿಟ್ಟು ಬೇರೆ ಮಾಡಲಾಗದು, ಆದರೆ ಯಾವತ್ತೋ ಬರುವ ಪೇಮೆಂಟ್‌ಗೆ ಇಲ್ಲಿ ಕೆಲಸ ಮಾಡುತ್ತಲೇ ಇರಬೇಕಾದ ಅನಿವಾರ್ಯತೆ ಅವರನ್ನು ಎಲ್ಲಿಗೆ ಕೊಂಡೊಯ್ಯಬಹುದು. 

ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯನ್ನು ಅಪರಾಧಿ ಸ್ಥಾನಕ್ಕೆ ತರಲು ಹೋಗಬೇಡಿ: ನಟ ಗಣೇಶ್ ರಾವ್

ಇಲ್ಲಿ, ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ, ಇದು ಭೂತವೋ ದೇವರೋ ಎಂಬ ಚರ್ಚೆಯ ಅಗತ್ಯವಿಲ್ಲ. ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡುವ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಸೇರಿದಂತೆ ಸಕಲ ಸಿನಿಮಾಕರ್ಮಿಗಳಿಗೂ ತಮ್ಮದೇ ಸಮಸ್ಯೆ ಹಾಗೂ ಪರಿಹಾರದ ಮಾರ್ಗಗಳ ಅರಿವು ಇರಬೇಕು. ಅದು ಬಿಟ್ಟು ಸಿನಿಮಾ ನೋಡುವ ಪ್ರೇಕ್ಷಕರ ಮೇಲೆ ಗೂಬೆ ಕೂರಿಸುತ್ತ ಕುಳಿತರೆ, ಸಮಸ್ಯೆ ಇನ್ನೂ ಬಿಗಡಾಯಿಸುವುದು ಗ್ಯಾರಂಟಿ. ಏಕೆಂದರೆ, ಫೈನಲೀ ಸಿನಿಮಾ ನೋಡಬೇಕೋ ಬೇಡವೋ ಎಂದು ನಿರ್ಧರಿಸಬೇಕಾಗಿದ್ದು ಪ್ರೇಕ್ಷಕರೇ ಹೊರತೂ ಸಿನಿಮಾರಂಗವಲ್ಲ!

click me!