ಸ್ಯಾಂಡಲ್‌ವುಡ್‌ ಹಿರಿಯ ನಟ ರಾಜೇಶ್‌ ಆರೋಗ್ಯ ಸ್ಥಿತಿ ಗಂಭೀರ

Suvarna News   | Asianet News
Published : Feb 14, 2022, 10:55 AM ISTUpdated : Feb 14, 2022, 03:48 PM IST
ಸ್ಯಾಂಡಲ್‌ವುಡ್‌ ಹಿರಿಯ ನಟ ರಾಜೇಶ್‌ ಆರೋಗ್ಯ ಸ್ಥಿತಿ ಗಂಭೀರ

ಸಾರಾಂಶ

ನಟ,  ರಾಜೇಶ್ ಆರೋಗ್ಯ ಸ್ಥಿತಿ ಗಂಭೀರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿವ ರಾಜೇಶ್

ಬೆಂಗಳೂರು: ಸ್ಯಾಂಡಲ್‌ವುಡ್  ಹಿರಿಯ ನಟ,  ರಾಜೇಶ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ಅರ್ಜುನ್ ಸರ್ಜಾ ಅವರ ಮಾವನೂ ಆಗಿರುವ ರಾಜೇಶ್‌ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ.  ಬಾಣಸವಾಡಿಯ ನ್ಯೂ ಜನಪ್ರಿಯ  ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.  ರಾಜೇಶ್ ಅವರು ನಾಯಕ ನಟನಾಗಿಯೂ ಹೆಸರು ಮಾಡಿದ್ದಾರೆ. ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ರಾಜೇಶ್ ಅವರ ಪತ್ನಿ ಪಾರ್ವತಮ್ಮ  ಬೆಂಗಳೂರಿನ ವಿದ್ಯಾರಣ್ಯಪುರದ ನಿವಾಸದಲ್ಲಿ ಕಳೆದ ವರ್ಷದ ನವೆಂಬರ್ ನಲ್ಲಿ ಇಹಲೋಕ ತ್ಯಜಿಸಿದ್ದರು. ಅಂದಿನಿಂದಲೂ ರಾಜೇಶ್ ಆರೋಗ್ಯ ಸ್ವಲ್ಪ ಹದಗೆಟ್ಟಿತ್ತು. ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಫೆಬ್ರವರಿ 9 ಕ್ಕೆ ರಾಜೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದ ಸಮಸ್ಯೆ ಅಂತ ಆಸ್ಪತ್ರೆಗೆ ಬಂದಿದ್ದರು.  ಡಾ.ಭರತ್ ಅವರು ರಾಜೇಶ್ ಅವರಿಗೆ ಚಿಕಿತ್ಸೆ ಕೊಡ್ತಿದ್ದಾರೆ. ಚಿಕಿತ್ಸೆಗೆ ರಾಜೇಶ್ ಅವರು ಸ್ಪಂದಿಸ್ತಿದ್ದಾರೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತೆ ಎಂದು ಆಸ್ಪತ್ರೆ ನಿರ್ದೇಶಕ  ಗಂಗಾಧರ್ ಹೇಳಿದ್ದಾರೆ. 

ಸಂಬಂಧಪಟ್ಟ ಬೇರೆ ವೈದ್ಯರು ಕೂಡ ಬಂದು ಚಿಕಿತ್ಸೆ ಕೊಡ್ತಿದ್ದಾರೆ. ಅಡ್ಮಿಟ್ ಆಗಿ ನಾಲೈದು ದಿನಗಳಾಗಿದೆ ಇನ್ನೂ ಎರಡ್ಮೂರು ದಿನ ಚಿಕಿತ್ಸೆ ಕೊಡಬೇಕಾಗುತ್ತದೆ. ಅವರ ಮಗಳು ಮತ್ತು ಮೊಮ್ಮಗ ರಾಜೇಶ್ ಅವರನ್ನು ನೋಡಿಕೊಳ್ತಿದ್ದಾರೆ.  ಉಳಿದ ಕುಟುಂಬಸ್ಥರಿಗೆ ಫೋನ್ ಮೂಲಕ ಮಾಹಿತಿ ಕೊಡಲಾಗ್ತಿದೆ. ಚೇತರಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣ್ತಿದೆ ಎಂದು ರಾಜೇಶ್ ಅವರಿಗೆ ಚಿಕಿತ್ಸೆ ಕೊಡ್ತಿರುವ ವೈದ್ಯ ಡಾಕ್ಟರ್ ಭರತ್ ಹೇಳಿದ್ದಾರೆ.

ಮಾಮ ಬಂದಿದ್ದೀನಿ, ಕಣ್ಣು ಬಿಡೋ'; ಬಿಕ್ಕಿ ಬಿಕ್ಕಿ ಅತ್ತ ಅರ್ಜುನ್‌ ಸರ್ಜಾ!

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಿಡ್ನಿ ವೈಫಲ್ಯ ಹಾಗೂ ವಯೋ ಸಹಜವಾದ ಕಾಯಿಲೆಗಳಿಂದ ರಾಜೇಶ್ ಅವರು ಬಳಲುತ್ತಿದ್ದಾರೆ. 82 ವರ್ಷದ ರಾಜೇಶ್‌ ಅವರು ಚಿತ್ರರಂಗದಲ್ಲಿ ಹಲವು ದಶಕಗಳ ಅನುಭವ ಹೊಂದಿದ್ದು, ಇತ್ತೀಚೆಗೆ ನಟನೆಯಿಂದ ದೂರ ಉಳಿದಿದ್ದರು. ಬೆಂಗಳೂರಿನಲ್ಲಿ ಜನಿಸಿದ ರಾಜೇಶ್‌ ಅವರ ಮೂಲ  ಹೆಸರು ಮುನಿ ಚೌಡಪ್ಪ, ನಂತರದ ದಿನಗಳಲ್ಲಿ ನಾಟಕಗಳಲ್ಲಿ ನಟಿಸುತ್ತಿದ್ದ ರಾಜೇಶ್, ವಿದ್ಯಾಸಾಗರ್‌ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿ ಕಲಾ ತಪಸ್ವಿ ಎಂದೇ ಖ್ಯಾತರಾಗಿದ್ದರು. ರಾಜೇಶ್ ದಂಪತಿಯ ಪುತ್ರಿ ನಿವೇದಿತಾ ಅವರನ್ನು ನಟ ಅರ್ಜುನ್ ಸರ್ಜಾ ವಿವಾಹವಾಗಿದ್ದರು.

ಅರ್ಜುನ್‌ ಸರ್ಜಾ ನಿಶ್ಚಿತಾರ್ಥ; ಪುಟ್ಟ ಚಿರಂಜೀವಿ ಸರ್ಜಾ, ಅನು ಪ್ರಭಾಕರ್‌ ನೋಡಿ!

ಸ್ಯಾಂಡಲ್‌ವುಡ್‌ ಆ್ಯಕ್ಷನ್‌ ಕಿಂಗ್ ಅರ್ಜುನ್ ಸರ್ಜಾ ಹಾಗೂ ಹಿರಿಯ ನಟ ರಾಜೇಶ್ ಪುತ್ರಿ ಆಶಾ ರಾಣಿ ಹಲವು ವರ್ಷಗಳ ಕಾಲ ಪ್ರೀತಿಸಿ, ಕುಟುಂಬದ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಹಾಗೂ ಮದುವೆ ಮಾಡಿಕೊಂಡವರು. ಈ ಜೋಡಿಯ ನಿಶ್ಚಿತಾರ್ಥ ಸಂಭ್ರಮದ ಫೋಟೋ ಶೇರ್ ಮಾಡಿಕೊಂಡ ಅನು ಪ್ರಭಾಕರ್‌ ಎಲ್ಲರಿಗೂ ಹಳೆಯ ಸುಮಧುರ ನೆನಪುಗಳು ಮರುಕಳಿಸುವಂತೆ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ ಆ್ಯಕ್ಷನ್‌ ಕಿಂಗ್ ಅರ್ಜುನ್ ಸರ್ಜಾ ಹಾಗೂ ಹಿರಿಯ ನಟ ರಾಜೇಶ್ ಪುತ್ರಿ ಆಶಾ ರಾಣಿ ಹಲವು ವರ್ಷಗಳ ಕಾಲ ಪ್ರೀತಿಸಿ, ಕುಟುಂಬದ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಹಾಗೂ ಮದುವೆ ಮಾಡಿಕೊಂಡವರು. ಈ ಜೋಡಿಯ ನಿಶ್ಚಿತಾರ್ಥ ಸಂಭ್ರಮದ ಫೋಟೋವನ್ನು  ಕೆಲ ದಿನಗಳ ಹಿಂದೆ ನಟಿ ಅನು ಪ್ರಭಾಕರ್‌ ಶೇರ್ ಮಾಡಿಕೊಂಡಿದ್ದರು.

ಹಿರಿಯ ನಟಿ ಗಾಯಿತ್ರಿ ಪ್ರಭಾಕರ್ ಅವರ ಪುತ್ರಿಯಾಗಿರುವ ಅನು ಪ್ರಭಾಕರ್ ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಅಂದಿನಿಂದಲೂ ಚಿತ್ರರಂಗದ ಪ್ರತಿಯೊಬ್ಬ ಕಲಾವಿದನ ಜೊತೆಯೂ ಉತ್ತಮ ಭಾಂದವ್ಯ ಹೊಂದಿದ್ದಾರೆ. ಅವರ ಮನೆ ಮಗಳಂತೆ ಪ್ರತಿ ಅದ್ಭುತ ಕ್ಷಣಗಳಲ್ಲಿಯೂ ಭಾಗಿಯಾಗುತ್ತಾರೆ. ಹಾಗೆಯೇ ಅರ್ಜುನ್‌ ಹಾಗೂ ಆಶಾ ರಾಣಿ ನಿಶ್ಚಿತಾರ್ಥದ  ಫೋಟೋ ಶೇರ್ ಮಾಡಿಕೊಂಡ ಅನು, ಆಗಿನ್ನೂ ಪುಟ್ಟ ಹುಡುಗಿ.

'ನನ್ನ ಅಕ್ಕ ನಿವೇದಿತಾ ಹಾಗೂ ಭಾವ ಸರ್ಜುನ್ ಅವರ ನಿಶ್ಚಿತಾರ್ಥ ಫೋಟೋ. ಭಾವನ ತೊಡೆ ಮೇಲೆ ಚಿರು. ಅಕ್ಕನ ತೊಡೆ ಮೇಲೆ ನಾನು. ಬೆಲೆ ಕಟ್ಟಲಾಗದ ಫೋಟೋ. ಚಿರು ನೀನು ಎಲ್ಲಿದ್ದರೂ ಸಂತೋಷವಾಗಿ, ನೆಮ್ಮದಿಯಾಗಿರುವೆ ಎಂದು ಭಾವಿಸುವೆ,' ಎಂದು ಅನು ಪ್ರಭಾಕರ್  ಹಳೆಯ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದರು.

ಈ ಫೋಟೋವನ್ನು ಮೇಘನಾ ರಾಜ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು 'Thank You ಅನು ಪ್ರಭಾಕರ್‌ ಈ ಫೋಟೋ ಕಳುಹಿಸಿದ್ದಕ್ಕೆ. ಬೆಲೆ ಕಟ್ಟಲಾಗದ ಚಿತ್ರವಿದು,' ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಚಿರು ನೋಡಿ ಅಭಿಮಾನಿಗಳು ಜೂನಿಯರ್ ಚಿರು ಹೀಗೆ ಇರುವುದು ಎಂದು ಕಾಮೆಂಟ್ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?