ಈ ಬಾಲಣ್ಣ ನಿಜವಾಗ್ಲೂ ಭಾರತದಲ್ಲಿ ಇರಬಾರದಿತ್ತು ಅಂದಿದ್ರಂತೆ ಡಾ ರಾಜ್‌ಕುಮಾರ್!

By Shriram Bhat  |  First Published Nov 13, 2024, 2:59 PM IST

'ನಟ ನರಸಿಂಹರಾಜು ಅವರನ್ನು ಜನರು ಒಂದೇ ರೀತಿಯ ಪಾತ್ರಗಳಲ್ಲಿ ನೋಡುವಂತೆ ಆಯ್ತು. ಆದರೆ, ನಟ ಬಾಲಕೃಷ್ಣ ಅವರನ್ನು ಸಿನಿಮಾಪ್ರಿಯರು ಬಹಳಷ್ಟು ರೀತಿಯ ಪಾತ್ರಗಳಲ್ಲಿ ನೋಡಿದ್ದಾರೆ. ಬಾಲಣ್ಣ ಅವರದ್ದು ಬಹುಮುಖ ಪ್ರತಿಭೆ' ಅಂದಿದ್ದರಂತೆ ಡಾ ರಾಜ್‌ಕುಮಾರ್. ಹಿರಿಯ ನಟ..


ಡಾ ರಾಜ್‌ಕುಮಾರ್  (Dr Rajkumar) ಹಾಗೂ ಬಾಲಣ್ಣ (Senior Actor Balakrishna) ಅವರಿಬ್ಬರೂ ಒಟ್ಟಾಗಿ ನಟಿಸಿದ ಮೊದಲ ಚಿತ್ರ ರಾಯರ ಸೊಸೆ. ಆದರೆ ಆ ಚಿತ್ರದ ಶೂಟಿಂಗ್‌ನಲ್ಲಿ ಅವರಿಬ್ಬರೂ ಭೇಟಿಯಾಗಲೇ ಇಲ್ಲ. ಕಾರಣ, ಅವರಿಬ್ಬರೂ ತೆರೆಯ ಮೇಲೆ ಒಂದೇ ದೃಶ್ಯದಲ್ಲಿ ಬರುವ ಅಗತ್ಯವೇ ಆ ಚಿತ್ರದಲ್ಲಿ ಇರಲಿಲ್ಲ. ಈ ಚಿತ್ರದ ಬಳಿಕ ಬಂದ 'ಅಣ್ಣ ತಂಗಿ' ಸಿನಿಮಾದಲ್ಲಿ ಅವರಿಬ್ಬರೂ ಒಟ್ಟಿಗೇ ಒಂದೇ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಬಾಲಣ್ಣ ಅವರಿಗೆ ಶ್ರವಣ ದೋ‍ಷ (ಹುಟ್ಟು ಕಿವುಡು) ಇತ್ತು ಎಂಬುದು ಅಣ್ಣಾವ್ರು ಸೇರಿದಂತೆ ಬಹುತೇಕಲ ಎಲ್ಲರಿಗೂ ಗೊತ್ತಿತ್ತು. ಶೂಟಿಂಗ್ ವೇಳೆ ಡಾ ರಾಜ್‌ಕುಮಾರ್ ಅವರು ಬಾಲಣ್ಣನ ಬಗ್ಗೆ ಒಂದು ಮಾತು ಹೇಳುತ್ತಿದ್ದರಂತೆ. 'ಎಷ್ಟು ಚೆಂದವಾಗಿ ನಟಿಸ್ತಾರೆ ಈ ಬಾಲಣ್ಣ. ಇವರು ಭಾರತದಲ್ಲಿ ಇರಬಾರದಿತ್ತು. ಒಮ್ಮೆ ಇವರೇನಾದ್ರೂ ಇಂಗ್ಲಂಡಿನಲ್ಲಿ ಇದ್ದರೆ ಖಂಡಿತ ಇವರು ಚಾರ್ಲಿ ಚಾಪ್ಲಿನ್ ಅವರನ್ನೂ ಕೂಡ ಜನರು ಮರೆಯುವ ಹಾಗೆ ಮಾಡ್ತಾ ಇದ್ರು' ಅಂತಿದ್ರಂತೆ!

Tap to resize

Latest Videos

undefined

ವಾವ್ ಎಷ್ಟು ಚೆನ್ನಾಗಿದಾಳೆ ನಿನ್ ಮಗ್ಳು, ಯಾರಿಗೂ ತೋರಿಸ್ಬೇಡ: ಗಾಯತ್ರಿ ಪ್ರಭಾಕರ್

'ನಟ ನರಸಿಂಹರಾಜು ಅವರನ್ನು ಜನರು ಒಂದೇ ರೀತಿಯ ಪಾತ್ರಗಳಲ್ಲಿ ನೋಡುವಂತೆ ಆಯ್ತು. ಆದರೆ, ನಟ ಬಾಲಕೃಷ್ಣ ಅವರನ್ನು ಸಿನಿಮಾಪ್ರಿಯರು ಬಹಳಷ್ಟು ರೀತಿಯ ಪಾತ್ರಗಳಲ್ಲಿ ನೋಡಿದ್ದಾರೆ. ಬಾಲಣ್ಣ ಅವರದ್ದು ಬಹುಮುಖ ಪ್ರತಿಭೆ' ಅಂದಿದ್ದರಂತೆ ಡಾ ರಾಜ್‌ಕುಮಾರ್. ಹಿರಿಯ ನಟ ಹಾಗೂ ತಮ್ಮ ಗುರುಗಳಾದ ಬಾಲಣ್ಣ ಜೊತೆಗೆ ಡಾ ರಾಜ್‌ ಅವರು ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಅವರಿಬ್ಬರ ಗುರು-ಶಿಷ್ಯರ ಸಂಬಂಧ ಹಾಗೇ ಗಟ್ಟಿಯಾಗಿ ಉಳಿದಿತ್ತು. ತಾವು ದೊಡ್ಡ ಸ್ಟಾರ್ ನಟರಾಗಿ ಬೆಳೆದರೂ ಕೂಡ ಡಾ ರಾಜ್‌ಕುಮಾರ್‌ ಅವರು ಬಾಲಣ್ಣನ ಬಗ್ಗೆ ಅದೇ ಗೌರವ ಹೊಂದಿದ್ದರು. ಹಾಗೇ, ಬಾಲಣ್ಣ ಕೂಡ ರಾಜ್ ಅವರನ್ನು ಕೊನೆಯವರೆಗೂ ಪ್ರೀತಿ, ಆದರದಿಂದ ನೋಡಿಕೊಂಡಿರಂತೆ. 

ಡಾ ರಾಜ್‌ಕುಮಾರ್ ಹಾಗು ಬಾಲಣ್ಣ ಅವರ ಜೊತೆಗೆ ಅಂದು ವಜ್ರಮುನಿ, ತೂಗುದೀಪ ಶ್ರೀನಿವಾಸ್, ಶಿವರಾಮು, ಕೆ ಎಸ್ ಅಶ್ವಥ್ ಮುಂತಾದವರು ಸಹ ಜತೆಗಿದ್ದು ಒಳ್ಳೆಯ ಸ್ನೇಹಿತರಾಗಿದ್ದರು. ಡಾ ರಾಜ್‌ಕುಮಾರ್ ಅವರು ಬಾಲಣ್ಣನ ನಿರ್ಮಾಣ ಸಂಸ್ಥೆಯ ಮೂಲಕ ಮೊಟ್ಟಮೊದಲ 'ಮಾರ್ಗದರ್ಶಿ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 

ಮತ್ತುರಾಜ್‌ಗೆ ಸರಿಯಾಗಿಯೇ ಬಾರಿಸಿದ್ದ ಬಾಲಣ್ಣ, ಹೊಡೆತ ತಿಂದ ಡಾ ರಾಜ್‌ ಮಾಡಿದ್ದೇನು?

ಅದೊಂದು ದಿನ (ಮುತ್ತುರಾಜ್) ಡಾ ರಾಜ್‌ಕುಮಾರ್ ಜ್ವರ ಬಂದು ಮಲಗಿಬಿಟ್ಟಿದ್ದರು. ಮುತ್ತುರಾಜ್ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿಯವರು ವಿಚಾರಿಸಲಾಗಿ ಮುತ್ತುರಾಜ್ ಅವರ ಗುರುಗಳಾದ ಬಾಲಣ್ಣ (ಹಿರಿಯ ನಟ ಬಾಲಕೃಷ್ಣ) ಅವರಿಂದ ಹೊಡೆತ ತಿಂದಿದ್ದರು. ಕಾರಣ, ಪುಟ್ಟಸ್ವಾಮಿಯವರು ಮಗ ಮುತ್ತುರಾಜನಿಗೆ ಶಿಕ್ಷಣ ಕೊಡಿಸಲು ಬಾಲಣ್ಣ ಅವರನ್ನು ನಿಯಮಿಸಿದ್ದರು. ಆದರೆ, ಮುತ್ತುರಾಜನಿಗೆ ಶಾಲಾಶಿಕ್ಷಣ ತಲೆಗೆ ಹತ್ತುತ್ತಿರಲಿಲ್ಲ. ಹೀಗಾಗಿ ಬಾಲಣ್ಣ ಸರಿಯಾಗಿಯೇ ಭಾರಿಸಿದ್ದರು. 

ತಂದೆಯಾದ ಪುಟ್ಟಸ್ವಾಮಿಯವರು ಬಳಿಕ ಬಾಲಣ್ಣ ಅವರ ಬಳಿ ಬಂದು, 'ಮಗ ಮುತ್ತುರಾಜ್ ನಿಮ್ಮ ಹೊಡೆತ ತಾಳಲಾರದೇ ಜ್ವರ ಬಂದು ಮಲಗಿಬಿಟ್ಟಿದ್ದಾನೆ. ಚಿಕ್ಕ ಮಗು, ಹೊಡೆತ ತಾಳಲಾಗದು' ಎಂದು ಅಪ್ಪನ ಸಹಜ ಮಮತೆಯಿಂದ ಹೇಳಿಕೊಂಡಿದ್ದರು. ಆದರೆ, ಅಂದು ಎಲ್ಲಾ ಪೋಷಕರು ತಮ್ಮತಮ್ಮ ಮಕ್ಕಳ ಶಿಕ್ಷಣದ ಸಲುವಾಗಿ ಗುರುಗಳ ಬಳಿ 'ನೀವು ಅದೇನು ಶಿಕ್ಷೆ ಕೊಟ್ಟರೂ ಪರವಾಗಿಲ್ಲ, ನಮ್ಮ ಮಕ್ಕಳಿಗೆ ಶಿಕ್ಷಣ ಹೇಳಿಕೊಡಿ' ಎಂದೇ ಹೇಳುತ್ತಿದ್ದುದು ಎಲ್ಲರಿಗೂ ಗೊತ್ತು. ಅದೇ ರೀತಿ ಬಾಲಣ್ಣ-ಮುತ್ತುರಾಜ್ ವಿಷಯದಲ್ಲೂ ಆಗಿತ್ತು. 

ಡಾ ರಾಜ್‌ ವಿರುದ್ಧ ಪಾತ್ರ ಮಾಡಿದ್ದಕ್ಕೆ ನನ್ನ ಕೆರಿಯರ್‌ಗೇ ಏಟು ಬಿತ್ತು; ವಿಷ್ಣುಗೂ ಇದೇ ಗತಿಯಾಗಿತ್ತಾ?!

click me!