ಬೇಲ್ ಸಿಕ್ಕು 3 ದಿನವಾದ್ರೂ ರಾಗಿಣಿಗಿಲ್ಲ ಬಿಡುಗಡೆ ಭಾಗ್ಯ, ಜೈಲಲ್ಲೇ ತುಪ್ಪದ ಬೆಡಗಿ ಪರದಾಟ

Published : Jan 23, 2021, 04:07 PM IST
ಬೇಲ್ ಸಿಕ್ಕು 3 ದಿನವಾದ್ರೂ ರಾಗಿಣಿಗಿಲ್ಲ ಬಿಡುಗಡೆ ಭಾಗ್ಯ, ಜೈಲಲ್ಲೇ ತುಪ್ಪದ ಬೆಡಗಿ ಪರದಾಟ

ಸಾರಾಂಶ

ಡ್ರಗ್ಸ್‌ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ  ಬೇಲ್ ಸಿಕ್ಕಿ ಮೂರು ದಿನವಾದರೂ ನಟಿ ರಾಗಿಣಿಗೆ ಬಿಡುಗಡೆ ಭಾಗ್ಯವಿಲ್ಲ. ಇದಿರಂದ ತುಪ್ಪದ ಬೆಡಗಿ ಹೊರಬರಲು ಪರದಾಡುತ್ತಿದ್ದಾರೆ.

ಬೆಂಗಳೂರು, (ಜ.23): ಸ್ಯಾಂಡಲ್​​ವುಡ್​​ ಡ್ರಗ್ಸ್​​​ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಗೆ ಜನವರಿ 21ರಂದೇ ಸುಪ್ರೀಂ ಕೋರ್ಟ್​​​ ಜಾಮೀನು ನೀಡಿದೆ. ಆದ್ರೆ, ರಾಗಿಣಿ ಇದುವರೆಗೂ ಬಿಡುಗಡೆಯಾಗಿಲ್ಲ.

ಹೌದು...ಜಾಮೀನು ನೀಡಿದ ಆದೇಶ ಪ್ರತಿ ಸುಪ್ರೀಂಕೋರ್ಟ್​ನಿಂದ NDPS ನ್ಯಾಯಾಲಯಕ್ಕೆ ಮೊನ್ನೆ ತಡವಾಗಿ ಹೋಗಿದೆ. ಅಲ್ಲದೇ 3 ಲಕ್ಷ ಬಾಂಡ್,  ಇಬ್ಬರು  ಶ್ಯೂರಿಟಿ ನೀಡುವಂತೆ NDPS ನ್ಯಾಯಾಲಯ ಸೂಚನೆ ನೀಡಿದೆ.

ನಟಿ ರಾಗಿಣಿಗೆ ಬಿಗ್ ರಿಲೀಫ್, ಜಾಮೀನು ನೀಡಿದ ಸುಪ್ರೀಂ ಕೋರ್ಟ್!

ಆದರೆ ರಾಗಿಣಿಗೆ ಶ್ಯೂರಿಟಿ ಕೊಡಲು ಯಾರೂ ಮುಂದೆ ಬಾರದ ಕಾರಣ ಇಂದು (ಶನಿವಾರ) ಬಿಡುಗಡೆ ಇಲ್ಲ. ನಾಳೆ (ಭಾನುವಾರ) ಇರುವುದರಿಂದ ಕೋರ್ಟ್‌ ರಜೆ. ಈ ಹಿನ್ನೆಲೆಯಲ್ಲಿ ತುಪ್ಪದ ಬೆಡಗಿಗೆ ಸೋಮವಾರವೇ ಬಿಡುಗಡೆ ಭಾಗ್ಯ. 

ಷರತ್ತುಗಳನ್ನ ಪೂರೈಸಲು ಸಮಯಾವಕಾಶ ಕಡಿಮೆ ಹಿನ್ನಲೆಯಲ್ಲಿ  ಸೋಮವಾರ (ಜ.25)  ಷರತ್ತು ಪೂರೈಸಿ ಬಿಡುಗಡೆ ಆದೇಶ ಪಡೆಯಲು ರಾಗಿಣಿ ಪರ ವಕೀಲರು ನಿರ್ಧಾರಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Rukmini Vasanth Birthday: ಬೆಸ್ಟ್ ಫ್ರೆಂಡ್ ಹುಟ್ಟುಹಬ್ಬಕ್ಕೆ ನಟಿ Chaitra Achar ವಿಶ್ ‌ಮಾಡಿದ್ದು ಹೀಗೆ
'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!