ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಮದ್ವೆಯಾಗ್ತಿದ್ದಾರಾ..? ಮದ್ವೆ ಮುಹೂರ್ತವೂ ಫಿಕ್ಸ್ ಆಯ್ತಾ..?
ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಮದುವೆ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಕನ್ನಡದ ಬೇಡಿಕೆಯ ನಟಿಯರಲ್ಲೊಬ್ಬರಾಗಿರುವ ರಚಿತಾ ರಾಮ್ ಮದ್ವೆಯಾಗ್ತಾ ಇದ್ದಾರಾ..? ಆಮಂತ್ರಣ ಪತ್ರಿಕೆ ಹಂಚ್ಕೊಂಡ್ರಾ..?
ನಟಿಯ ಲೇಟೆಸ್ಟ್ ಪೋಸ್ಟ್‌ನಲ್ಲಿ ಆಮಂತ್ರಣ ಪತ್ರಿಕೆಯೊಂದನ್ನು ಶೇರ್ ಮಾಡಿದ್ದು, ಮುಹೂರ್ತವನ್ನೂ ನಿಗದಿಪಡಿಸಲಾಗಿದೆ. ಸಮಯ, ದಿನಾಂಕ ಎಲ್ಲವೂ ಫೈನಲ್ ಅಗಿದೆ. ಇದನ್ನು ನಟಿಯೇ ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ.
ಪರ್ಪಲ್ ಸೀರೆಯುಟ್ಟು ಸಪ್ಪೆ ಮೋರೆ ಹಾಕಿದ ಡಿಂಪಲ್ ಕ್ವೀನ್
ಅಂದ ಹಾಗೆ ಇದು ನಟಿಯ ಮುಂದಿನ ಸಿನಿಮಾ ಮುಹೂರ್ತದ ಆಮಂತ್ರಣ ಪತ್ರಿಕೆ. ನೋಡೋಕೆ ಥೇಟ್ ಮದುವೆ ಕರೆಯೋಲೆಯ ಹಾಗೆಯೇ ಇದೆ. ಲವ್ ಯೂ ರಚ್ಚು ಸಿನಿಮಾದ ಮುಹೂರ್ತದ ಆಮಂತ್ರಣ ಪತ್ರಿಕೆ ಇದು.
Love you ರಚ್ಚು ಸಿನಿಮಾ ಮುಹೂರ್ತದ ಆಮಂತ್ರಣ ಪತ್ರಿಕೆ ಇದು. ಮುಖ್ಯ ಅತಿಥಿಯಾಗಿ ಶ್ರೀ ರವಿಶಂಕರ್ ಗುರೂಜಿ ಭಾಗವಹಿಸಲಿದ್ದಾರೆ. ಜನವರಿ 24ಕ್ಕೆ ಮಹೂರ್ತ ಕಾರ್ಯಕ್ರಮ ನಡೆಯಲಿದೆ.