ಅಣ್ಣಾವ್ರ ಮನೆಗೆ ಫ್ರೀ ಆಗಿ ನಾಯಿ ಕೊಟ್ಟಿದ್ದೀನಿ, ಸಲ್ಮಾನ್‌ ಖಾನ್‌ಗೆ 6 ತಿಂಗಳು ಕೂಡ ನೋಡ್ಕೊಂಡಿಲ್ಲ: ಸತೀಶ್ ಕಾಡಬೊಮ್ಸ್

By Vaishnavi Chandrashekar  |  First Published Dec 18, 2024, 10:12 AM IST

ಇಂಟರ್‌ನ್ಯಾಷನಲ್‌ ಸೆಲೆಬ್ರಿಟಿ ಡಾಗ್ ಬ್ರೀಡರ್‌ ಸತೀಶ್ ಕಾಡಬೊಮ್ಸ್‌, ರಾಜ್‌ಕುಮಾರ್‌, ವಿಷ್ಣುವರ್ಧನ್, ಸಲ್ಮಾನ್ ಖಾನ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೆ ನಾಯಿಗಳನ್ನು ಮಾರಾಟ ಮಾಡಿರುವ ಬಗ್ಗೆ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ದುಬಾರಿ ಬೆಲೆಯ ನಾಯಿಗಳನ್ನು ಮಾರಾಟ ಮಾಡಿದ್ದರೂ, ತಮ್ಮ ಆಸ್ತಿ ಶ್ವಾನಗಳೇ ಎಂದು ಹೇಳಿಕೊಂಡಿದ್ದಾರೆ.


ಇಂಟರ್‌ನ್ಯಾಷನಲ್‌ ಸೆಲೆಬ್ರಿಟಿ ಡಾಗ್ ಬ್ರೀಡರ್‌ ಆಗಿ ಗುರುತಿಸಿಕೊಂಡಿರುವ ಸತೀಶ್ ಕಾಡಬೊಮ್ಸ್‌ ಸಿನಿಮಾ ಸೆಲೆಬ್ರಿಟಿಗಳ ಜೊತೆಗಿರುವ ನಂಟಿನ ಬಗ್ಗೆ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

ಅಣ್ಣಾವ್ರ ಮನೆಗೆ ನಾಯಿ:

Tap to resize

Latest Videos

undefined

'ಪ್ರಪಂಚದಲ್ಲಿ ನೋಡೋಕೆ ಒಂದು ನಾಯಿನೂ ಸಿಗಲ್ಲ ಅಷ್ಟು ಅಪರೂಪದ ನಾಯಿ ಜಾತಿ. ಒಮ್ಮೆ ಬಸವೇಶ್ವರ ನಗರಕ್ಕೆ ಏರ್‌ಪೋರ್ಟ್‌ನಿಂದ ರೋಲ್ಸ್‌ ರಾಯ್ಸ್‌ ಕಾರಿನಲ್ಲಿ ಕರೆದುಕೊಂಡು ಬಂದಿದ್ದು ದೊಡ್ಡ ಸುದ್ದಿ ಆಗಿತ್ತು. ರಾಜ್‌ಕುಮಾರ್‌, ಪಾರ್ವತಮ್ಮ ಮತ್ತು ಪುನೀತ್ ರಾಜ್‌ಕುಮಾರ್‌ರವರು ಇದ್ದಾಗ ಮನೆಗೆ ಹೋಗಿ ನಾಯಿ ಕೊಟ್ಟಿದ್ದೀನಿ  ಆ ನಾಯಿ ಹೆಸರು ಡಚ್‌ಶಂಡ್‌  ಅದನ್ನು ಫ್ರೀ ಆಗಿ ಕೊಟ್ಟಿದ್ದೀನಿ. ಅದಾದ ಮೇಲೆ ಎರಡನೇ ನಾಯಿ ಡಾಲ್ಮೇಷಿಯನ್ ಬೇಕು ಎಂದು ಫೋನ್ ಮಾಡಿದ್ದರು ಫ್ರೀ ಆಗಿ ಕೊಡಲು ಹೋಗಿದ್ದೆ ಆದರೆ ಅವರು 2 ಸಾವಿರ ಕೊಟ್ಟರು ಅಷ್ಟೇ ತೆಗೆದುಕೊಂಡೆ, ಅದು ಕೊಂಚ ದುಬಾರಿ ನಾಯಿ ಆಗಿತ್ತು. ವಿಷ್ಣುವರ್ಧನ್ ಸರ್‌ ಮನೆಗೆ ಟಿಬೆಟಿಯನ್ ಮಾಸ್ಟಿಫ್‌ ಕೊಟ್ಟಿದ್ದೀನಿ, ಸಂಜನಾ ಗರ್ಲ್ರಾಣಿ ಮನೆಗೆ ಅಮೆರಿಕನ್ ಪಿಟ್‌ಬುಲ್‌ ಕೊಟ್ಟಿದ್ದೀನಿ, ಜನಾರ್ಧನ್ ರೆಡ್ಡಿ ಅವರಿಗೆ ಆರುವರೆ ಲಕ್ಷಕ್ಕೆ ನಾಯಿ ಕೊಟ್ಟಿದ್ದೀನಿ, ಶ್ರೀರಾಮುಲು ಸರ್‌ಗೆ 31 ಲಕ್ಷಕ್ಕೆ ನಾಯಿ ಕೊಟ್ಟಿದ್ದೀನಿ' ಎಂದು ಸತೀಶ್ ಮಾತನಾಡಿದ್ದಾರೆ.

ಯಶ್ ಬೆಳೆದಿರುವುದು ನೋಡಿ ಹೊಟ್ಟೆ ಕಿಚ್ಚು ಇಲ್ಲ, ಆಸೆ ಪಟ್ಟಿದ್ದು ಸಿಕ್ಕಿದೆ: 'ಅಮೃತಾದಾರೆ' ರಾಜೇಶ್ ಹೇಳಿಕೆ ವೈರಲ್

ಸಲ್ಲು ಮನೆಗೆ ನಾಯಿ:

'ಕೊರಿಯನ್ ಮ್ಯಾಸ್ಟಿಫ್‌ ದೇಶದಲ್ಲಿ ಅತಿ ಅಪರೂಪದ ನಾಯಿ. ಸುಮಾರು 150 ನಾಯಿಗಳನ್ನು ಒಂದೇ ಜಾಗದಲ್ಲಿ ಮ್ಯೂಸಿಂ ರೀತಿ ಮಾಡಿ ನಾನು ಬಿಕಾರಿ ಆಗಿಬಿಟ್ಟೆ ಏಕೆಂದರೆ ಅಷ್ಟೂ ನಾಯಿಗಳನ್ನು ಅಲ್ಲಿದ್ದ ಕೆಲಸದವರು ನೋಡಿಕೊಳ್ಳಲು ಆಗುತ್ತಿರಲಿಲ್ಲ ಒಮ್ಮೆ ರಾತ್ರೋ ರಾತ್ರಿ ಕೆಲಸ ಬಿಟ್ಟು ನಾಯಿಯನ್ನು ಕಳ್ಳತನ ಮಾಡುತ್ತಿದ್ದರು. ಹೀಗಾಗಿ ನಾನು ನಾಯಿ ಓನರ್ ಆಗಿರುತ್ತಿದ್ದೆ ಫಾಸ್ಟರ್ ಮಾಡಲು ಕೆಲವರಿಗೆ ಕೊಡುತ್ತಿದ್ದೆ, ಕಾರ್ಯಕ್ರಮ ಇದ್ದಾಗ ನಾನು ಕರೆದುಕೊಂಡು ಹೋಗುತ್ತೀನಿ ಉಳಿದ ಸಮಯದಲ್ಲಿ ಅವರೊಟ್ಟಿಗೆ ಇರುತ್ತದೆ. ನನ್ನ ಕೆಲಸ ಸುಲಭವಾಗುತ್ತದೆ ಹಾಗೂ ಇಟ್ಟುಕೊಂಡಿರುವ ಸೆಲೆಬ್ರಿಟಿಗಳಿಗೆ ಹೆಸರು ಬರುತ್ತದೆ. ಸಲ್ಮಾನ್ ಖಾನ್‌ಗೆ ನಾನು ಲಿಕ್ವಿನ್ ಗ್ರೇಟ್ ಡೇನ್ ಕೊಟ್ಟಿದ್ದೆ ಅದನ್ನು 6 ತಿಂಗಳು ನೋಡಿಕೊಂಡರು ಆನಂತರ ಸಾಕಲು ಆಗದೇ ಅವರ ಮೇಕಪ್‌ ಮ್ಯಾನ್‌ಗೆ ಫ್ರೀ ಆಗಿ ಕೊಟ್ಟುಬಿಟ್ಟರು' ಎಂದು ಸತೀಶ್ ಹೇಳಿದ್ದಾರೆ.

ಅವಕಾಶ ಕಮ್ಮಿ ಆದ್ರೆ ಬಟ್ಟೆ ಕಮ್ಮಿ ಆಗುತ್ತೆ: 'ಕಾಮಿಡಿ ಕಿಲಾಡಿಗಳು' ಮಂಥನ ಟ್ರೋಲ್

ಆಸ್ತಿ ಮಾಡಿಲ್ಲ: 

'ಎಲ್ಲರಿಗೂ ಆಸ್ತಿ ಮಾಡಬೇಕು ಮನೆ ಮಾಡಬೇಕು ಫೋನ್ ತೆಗೆದುಕೊಳ್ಳಬೇಕು ಅನ್ನೋ ಆಸೆ ಒಂದು ಚೂರು ಇಲ್ಲ ಇದುವರೆಗೂ ನಾನು ಏನೂ ಸಂಪಾದನೆ ಮಾಡಿಲ್ಲ ಎಲ್ಲವೂ ಅಪ್ಪ ಮತ್ತು ತಾತನ ಆಸ್ತಿ ಇರುವುದು. ನನಗೆ ಆಸ್ತಿ ಇರುವುದೇ ಶ್ವಾನ. ಒಂದರಿಂದ ಬಂದಿರುವ ಹಣದಿಂದ ಮತ್ತೊಂದು ಅಪರೂಪದ ನಾಯಿಯನ್ನು ಹುಡುಕಿ ತೆಗೆದುಕೊಂಡು ಬರುತ್ತೀನಿ. 25 ವರ್ಷಗಳ ಹಿಂದೆ ಶ್ವಾನ ಶೋ ಕಾರ್ಯಕ್ರಮಕ್ಕೆ 200-300 ಜನರು ಬರುತ್ತಿದ್ದರು ಆದರೆ ನಾನು ಹೋಗುತ್ತಿದ್ದೀನಿ ಅಂದ್ರೆ 3000 ಸಾವಿರ ಜನರು ಬರುತ್ತಿದ್ದರು' ಎಂದಿದ್ದಾರೆ ಸತೀಶ್. 

ನಗ್ತಾ ನಗ್ತಾನೇ ಕಿಚ್ಚನ ಕಟಕಟೆ ಶುರು, ರಜತ್- ಧನರಾಜ್‌ಗೆ ಸಖತ್ ಕ್ಲಾಸ್

 

click me!