ನೀನಾಸಂ ಸತೀಶ್-ರಚಿತಾ ರಾಮ್ ಜೋಡಿ ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವ ಮ್ಯಾಟ್ನಿ ಚಿತ್ರವು ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎನ್ನಲಾಗಿದೆ. ಈ ಚಿತ್ರವು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ಲೂಸಿಯಾ ಸಿನಿಮಾ ಖ್ಯಾತಿಯ ನಟ ಸತೀಶ್ ನೀನಾಸಂ (Sathish Ninasam) ಹಾಗು ರಚಿತಾ ರಾಮ್ (Rachita Ram)ಜೋಡಿಯ 'ಮ್ಯಾಟ್ನಿ' ಚಿತ್ರವು ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಲವ್ ಇನ್ ಮಂಡ್ಯ, ಅಯೋಗ್ಯ, ಪೆಟ್ರೊಮ್ಯಾಕ್ಸ್, ಬ್ರಹ್ಮಚಾರಿ, ಕ್ವಾಟ್ಲೆ ಸತೀಶ, ಮುಂತಾದ ಸಿನಿಮಾಗಳ ಮೂಲಕ ಕರ್ನಾಟಕದಲ್ಲಿ ಪ್ರಸಿದ್ಧರಾಗಿರುವ ನಟ ನೀನಾಸಂ ಸತೀಶ್ ಮ್ಯಾಟ್ನಿ ಸಿನಿಮಾ ಮೂಲಕ ಸದ್ಯದಲ್ಲೇ ಮತ್ತೆ ಪ್ರೇಕ್ಷಕರ ಎದುರು ಬರಲಿದ್ದಾರೆ.
2018ರಲ್ಲಿ ರಿಲೀಸ್ ಆಗಿದ್ದ 'ಅಯೋಗ್ಯ' ಸಿನಿಮಾ ಬಳಿಕ ನೀನಾಸಂ ಸತೀಶ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿರಲಿಲ್ಲ. ನೀನಾಸಂ ಸತೀಶ್-ರಚಿತಾ ರಾಮ್ ಜೋಡಿ ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವ ಮ್ಯಾಟ್ನಿ ಚಿತ್ರವು ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎನ್ನಲಾಗಿದೆ. ಈ ಚಿತ್ರವು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಸಿನಿಪ್ರೇಕ್ಷಕರು ಒಂದಿಷ್ಟು ಕುತೂಹಲದೊಂದಿಗೆ ಕಾಯುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಗ್ಯಾರಂಟಿಗೆ ಹಾಡಿನ ಭಾಗ್ಯ, 'ಭಾಗ್ಯರಾಜ ನಮ್ಮ ಮುಖ್ಯಮಂತ್ರಿ' ಆಲ್ಬಂ ಬಿಡುಗಡೆ
ಮನೋಹರ್ ಕಾಂಪಲ್ಲಿ ನಿರ್ದೇಶನದಲ್ಲಿ, ಎಫ್3 ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿರುವ ಮ್ಯಾಟ್ನಿ ಸಿನಿಮಾ, ಕುತೂಹಲ ಕೆರಳಿಸುತ್ತಿದೆ. ವಿಭಿನ್ನ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿರುವ ನಟ ನೀನಾಸಂ ಸತೀಶ್, ಒಂದಿಷ್ಟು ಗ್ಯಾಪ್ ಬಳಿಕ ಒಪ್ಪಿಕೊಂಡ ಸಿನಿಮಾ ಮ್ಯಾಟ್ನಿ. ಹೀಗಾಗಿ, ಸಹಜವಾಗಿಯೇ ಒಂದಿಷ್ಟು ನಿರೀಕ್ಷೆ ಮೂಡಿತ್ತು.
ಮದುವೆಗಾಗಿ ಧರ್ಮವನ್ನೇ ಬಿಟ್ರು, ಆದ್ರೆ ಡಿವೋರ್ಸ್ ಆಯ್ತು; ಸ್ಟಾರ್ ನಟಿ ಬದುಕು ದುರಂತದಲ್ಲಿ ಕೊನೆಯಾಯ್ತು!
ಜತೆಗೆ, ನಟಿ ರಚಿತಾ ರಾಮ್ ಕೂಡ ನೀನಾಸಂ ಸತೀಶ್ ಅವರಿಗೆ ಜೋಡಿಯಾಗಿರುವುದು ಇನ್ನಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಸದ್ಯದ ಮಾಹಿತಿ ಪ್ರಕಾರ ಸತೀಶ್-ರಚಿತಾ ಜೋಡಿಯ 'ಮ್ಯಾಟ್ನಿ' ಸಿನಿಮಾ ಏಪ್ರಿಲ್ ಮೊದಲ ವಾರದಲ್ಲಿ ತೆರೆಕಾಣಲಿರುವುದು ಪಕ್ಕಾ ಎನ್ನಲಾಗುತ್ತಿದೆ. ಆದರೆ, ಮ್ಯಾಟ್ನಿ ಸಿನಿಮಾ ಟೀಮ್ ಸಿನಿಮಾ ರಿಲೀಸ್ ಬಗ್ಗೆ ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ನಿರ್ಮಾಣದ 'ಫೈರ್ ಫ್ಲೈ'ಗೆ ನಾಯಕ-ನಿರ್ದೇಶಕರಾದ ವಂಶಿ!