ಸಿಎಂ ಸಿದ್ದರಾಮಯ್ಯ ಗ್ಯಾರಂಟಿಗೆ ಹಾಡಿನ ಭಾಗ್ಯ, 'ಭಾಗ್ಯರಾಜ ನಮ್ಮ ಮುಖ್ಯಮಂತ್ರಿ' ಆಲ್ಬಂ ಬಿಡುಗಡೆ

By Shriram Bhat  |  First Published Mar 11, 2024, 5:08 PM IST

'ಚುನಾವಣೆ ಹೊತ್ತಿನಲ್ಲಿ ಇಂಥ ಪ್ರಯತ್ನ ಸ್ವಾಗತಾರ್ಹ ಎಂದಿದ್ದಾರೆ. ಭಾಗ್ಯರಾಜ ಹಾಡುಗಳ ಸಾಹಿತ್ಯ ಬರೆದು, ಸಂಗೀತ ಹಾಗು ನಿರ್ದೇಶನ ಮಾಡಿರುವ ಎಸ್ ನಾರಾಯಣ್ 'ಈವರೆಗೆ ನಾನು ಸಿನಿಮಾ ಹಾಡುಗಳನ್ನು ಮಾತ್ರ ಬರೆಯುತ್ತಿದ್ದೆ‌. ಮೊದಲ ಬಾರಿಗೆ ಒಬ್ಬ ಜನಪ್ರಿಯ ಸಿಎಂ ಮಾಡಿದ ಸಾಧನೆಗಳ‌ನ್ನು ಕಂಡು ಅವರ ಬಗ್ಗೆ ಬರೆಯಬೇಕು ಅನ್ನಿಸಿತು..


ದೇಶ ಹಾಗು ರಾಜ್ಯ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಸಮಯದಲ್ಲಿ ಕರ್ನಾಟಕದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ (Siddaramaiah) ಗುಣಗಾನವಿರುವ 'ಭಾಗ್ಯರಾಜ ನಮ್ಮ ಮುಖ್ಯಮಂತ್ರಿ' ವಿಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಈ ಆಲ್ಬಂಅನ್ನು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗು ನಿರ್ಮಾಪಕ ಎಸ್ ನಾರಾಯಣ್ (S Narayan) ಬರೆದಿದ್ದಾರೆ. ಈ ಹಾಡುಗಳಲ್ಲಿ ಎಸ್ ‌ನಾರಾಯಣ್ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆ, ವ್ಯಕ್ತಿತ್ವ ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಬರೆದು ಹಾಡುಗಳನ್ನು ಚಿತ್ರೀಕರಿಸಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕರೂ ಆದ ಎಸ್.‌ನಾರಾಯಣ್ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಹಾಗೂ ಸಾಧನೆಗಳ ಬಗ್ಗೆ ಅಲ್ಲದೆ ಅವರು ಅಧಿಕಾರ ವಹಿಸಿಕೊಂಡ ಮೇಲೆ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳ ಕುರಿತಂತೆ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದು ಹಾಡುಗಳನ್ನು ಚಿತ್ರೀಕರಿಸಿದ್ದಾರೆ.

Latest Videos

undefined

ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ನಿರ್ಮಾಣದ 'ಫೈರ್ ಫ್ಲೈ'ಗೆ ನಾಯಕ-ನಿರ್ದೇಶಕರಾದ ವಂಶಿ!

ಮುಖ್ಯಮಂತ್ರಿಗಳ ಆಪ್ತರೂ ಆಗಿರುವ ನಿರ್ಮಾಪಕ ಎಸ್ಆರ್ ಸನತ್ ಕುಮಾರ್ (SR Sanath Kumar)ಅವರು ಈ ಆಲ್ಬಂಗೆ ಬಂಡವಾಳ ಹೂಡಿದ್ದಾರೆ. ನಾಲ್ಕು ಹಾಡುಗಳನ್ನು ಹೊಂದಿರುವ ವೀಡಿಯೋ ಆಲ್ಬಂ 'ಭಾಗ್ಯರಾಜ ನಮ್ಮ ಮುಖ್ಯಮಂತ್ರಿ'ಆಲ್ಬಂ ಬಿಡುಗಡೆ ಕಾರ್ಯಕ್ರಮವು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಗ್ಯಾರೆಂಟಿ‌ ಯೋಜನೆಗಳ (Guarantees) ಅಧ್ಯಕ್ಷರಾದ ಹೆಚ್ಎಂ ರೇವಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ವೀಡಿಯೋ ಸಾಂಗ್ ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅತಿಥಿಗಳು 'ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ, ಒಳ್ಳೆದಾಗಲಿ' ಎಂದು ಹೇಳಿದ್ದಾರೆ. 

ಮದುವೆಗಾಗಿ ಧರ್ಮವನ್ನೇ ಬಿಟ್ರು, ಆದ್ರೆ ಡಿವೋರ್ಸ್ ಆಯ್ತು; ಸ್ಟಾರ್ ನಟಿ ಬದುಕು ದುರಂತದಲ್ಲಿ ಕೊನೆಯಾಯ್ತು!

ನಿರ್ಮಾಪಕ ಸನತ್ ಕುಮಾರ್ ಹಾಗು ನಿರ್ದೇಶಕ ಎಸ್ ನಾರಾಯಣ್ ಅವರಿಗೆ ಶುಭ ಹಾರೈಸಿದ ಅತಿಥಿಗಳು 'ಚುನಾವಣೆ ಹೊತ್ತಿನಲ್ಲಿ ಇಂಥ ಪ್ರಯತ್ನ ಸ್ವಾಗತಾರ್ಹ ಎಂದಿದ್ದಾರೆ. ಭಾಗ್ಯರಾಜ ಹಾಡುಗಳ ಸಾಹಿತ್ಯ ಬರೆದು, ಸಂಗೀತ ಹಾಗು ನಿರ್ದೇಶನ ಮಾಡಿರುವ ಎಸ್ ನಾರಾಯಣ್ 'ಈವರೆಗೆ ನಾನು ಸಿನಿಮಾ ಹಾಡುಗಳನ್ನು ಮಾತ್ರ ಬರೆಯುತ್ತಿದ್ದೆ‌. ಮೊದಲ ಬಾರಿಗೆ ಒಬ್ಬ ಜನಪ್ರಿಯ ಸಿಎಂ ಮಾಡಿದ ಸಾಧನೆಗಳ‌ನ್ನು ಕಂಡು ಅವರ ಬಗ್ಗೆ ಬರೆಯಬೇಕು ಅನ್ನಿಸಿತು, ನನಗನಿಸಿದ್ದನ್ನು ಬರೆದಿದ್ದೇನೆ' ಎಂದಿದ್ದಾರೆ. 

ಮಹೇಶ್ ಬಾಬು ಜತೆ ಕಿಸ್ ಮಾಡಿದ್ದೀರಾ ಎಂದ ಫ್ಯಾನ್ಸ್‌ಗೆ ರಶ್ಮಿಕಾ ಮಂದಣ್ಣ ಏನಂದ್ರು ನೋಡಿ!

ಈ ಆಲ್ಬಂ ಹಾಡುಗಳು ಕರ್ನಾಟಕದ ಸಿದ್ದರಾಮಯ್ಯ ಸರ್ಕಾರದ ವಿಷಯವಸ್ತು ಒಳಗೊಂಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್‌ ಸರಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಕೊಟ್ಟ ಮಾತಿಗೆ ತಪ್ಪದೆ ಸರಕಾರವು ಈ ಯೋಜನೆಗಳನ್ನು ಜಾರಿಗೊಳಿಸಿದೆ. ಗೃಹಲಕ್ಷ್ಮಿ , ಉಚಿತ ವಿದ್ಯುತ್‌, ಉಚಿತ ಬಸ್‌ ಪ್ರಯಾಣ ಮುಂತಾದ ಯೋಜನೆಗಳ ಮೂಲಕ ಜನರಿಗೆ ಹಲವು ಕೊಡುಗೆಗಳನ್ನು ನೀಡಿದೆ. ಈ ಯೋಜನೆಗಳೇ ಹಾಡುಗಳಾಗಿವೆ. ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಇದೇ ಹಾಡುಗಳನ್ನು ಬಳಸಿಕೊಂಡರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. 

click me!